ಹರಪನಹಳ್ಳಿ:
ಮಾದಕ ವಸ್ತುಗಳು ಸೇವನೆ ಪ್ಯಾಶನ್ ರೂಪ ಪಡೆದುಕೊಂಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು.
ಪಟ್ಟಣದ ಬಂಗಿ ಬಸಪ್ಪ ಪಿಯು ಕಾಲೇಜಿನಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಸ್ಪತ್ರೆ ಹಾಗೂ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಅರಿವಿದ್ದರೂ ಯುವಕರು, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ದುಷ್ಟಗಳಿಂದ ದೂರವಿರಲು ದೃಢ ಸಂಕಲ್ಪ ಮಾಡಬೇಕಿದೆ. ವೈದ್ಯರ ಸಲಹೆ ಹಾಗೂ ಆಪ್ತ ಸಮಾಲೋಚನೆಯಿಂದ ಇದರಿಂದ ದೂರಬರಲು ಸಾಧ್ಯ ಎಂದು ಹೇಳಿದರು.
ದೇಶದಲ್ಲಿ ಪ್ರತಿ ದಿನ 25 ಸಾವಿರ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಧೂಮಪಾನ ಸೇವಿಸುವ ಹಾಗೂ ಹತ್ತಿರದ ಜನರು, ಮಕ್ಕಳ ಮೇಲೆ ಮಾದಕ ವಸ್ತುಗಳ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಕಾರರು ಸ್ವ ಇಚ್ಛೆಯಿಂದ ನಿಲ್ಲಿಸಿದರೆ ಸಮಾಜ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ದೇಶದ ಶಕ್ತಿ ಎನಿಸಿರುವ ಯುವಕರು ವ್ಯಸನಗಳ ದಾಸರಾಗದೇ ಅದರ ಸಂಕೋಲೆ ಹೊರಗೆ ಬರಬೇಕು ಎಂದರು.
ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಪಟ್ಟಣದ ವಿವಿಧೆಡೆ ಜಾಗೃತಿ ಚಾಥಾ ನಡೆಸಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಂ.ಮೆಣಸಿನಕಾಯಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಬಸವರಾಜ, ಡಾ.ಹಾಲಸ್ವಾಮಿ, ಡಾ.ದೇವರಾಜ, ಡಾ.ತಿಪ್ಪೇಸ್ವಾಮಿ, ಡಾ.ರಾಘವೇಂದ್ರ, ಡಾ.ಶ್ವೇತಾ, ಡಾ.ದೀಪ್ತಿ, ರತ್ನಮ್ಮ, ಭುವನೇಶ್ವರಿ, ಗೌರಮ್ಮ, ಪ್ರಾಚಾರ್ಯ ಅರುಣಕುಮಾರ, ಎಸ್.ಜಿ.ರಾಘವೇಂದ್ರ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
