ಬಳ್ಳಾರಿ
ಕೇಂದ್ರ ಸರ್ಕಾರದ ಸದಾಶಯದಂತೆ ಆರ್ಥಿಕ ಮತ್ತು ಮಾವನ ಸಂಪನ್ಮೂಲಗಳನ್ನು ಬಳಸಿಕೊಂಡು ನವೀನ ತಾಂತ್ರಿಕತೆಯೊಂದಿಗೆ ಗ್ರಾಹಕರ ಸೇವೆಯಲ್ಲಿ ತೊಡಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೂ. 46700 ಕೋಟಿಯಷ್ಟು ವ್ಯವಹಾರ ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ಹೇಳಿದರು.
ಇಲ್ಲಿನ ಗಾಂಧಿನಗರ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅವಭಾಜ್ಯ ಅಂಗವಾಗಿದ್ದು ಕೃಷಿ, ಗ್ರಾಮೀಣ ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಿಂಹ ಪಾಲು ಪಡೆದಿರುವ ಬ್ಯಾಂಕ್ ಒಟ್ಟು ರೂ.25435 ಕೋಟಿ ಠೇವಣಿ ಹೊಂದಿದೆ. ಅಖಿಲ ಭಾರತ ಸ್ಥಾನದಲ್ಲಿ ನಂ.1 ಪಟ್ಟದಲ್ಲಿರುವ ಬ್ಯಾಂಕ್ ರೂ.21265 ಒಟ್ಟು ಸಾಲ ವಿತರಿಸಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 1167 ಶಾಖೆಗಳು ಗ್ರಾಹಕರ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
46 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗಿಂತ ಕರ್ನಾಟಕ ಬ್ಯಾಂಕ್ ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದೆ ಎಂದರು.
2005ರಲ್ಲಿ ಒಂದೇ ಬ್ಯಾಂಕಿನಿಂದ ಪ್ರಾಯೋಜಿಲ್ಪಟ್ಟ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಿದ ಬಳಿಕ ರಾಜ್ಯದ ಬೇರೆ ಬೇರೆ ವಾಣಿಜ್ಯ ಬ್ಯಾಂಕುಗಳಿಂದ ಪ್ರೇರಕವಾಗಿ ಸಾಧನೆಯ ಹಾದಿಯಲ್ಲಿ ಸಾಗಿರುವ ತಮ್ಮ ಬ್ಯಾಂಕ್ ಇದೀಗ 21 ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು 19 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. 2759 ಸೇವಾ ಜಾಲ ಹೊಂದಿದ್ದು, 295 ಎಟಿಎಂಗಳು ಗ್ರಾಹಕರಿಗಾಗಿ ಒದಗಿಸಲಾಗಿದೆ. 1297 ವ್ಯವಹಾರದ ಪ್ರತಿನಿಧಿಗಳು ಕೆಲಸ ನಿರ್ವಹಿಸುತ್ತಿದ್ದು 1.52 ಕೋಟಿ ರೂ.ಮೀರಿದ ಸಂತೃಪ್ತ ಗ್ರಾಹಕರು ನಮ್ಮಲ್ಲಿದ್ದಾರೆ. ಸಾಲ-ಠೇವಣಿ ಅನುಪಾತ ಶೇ 83.61 ಇದ್ದು ಒಟ್ಟು ಈ ಬಾರಿ 762 ಲಾಭ, ತೆರಿಗೆ ನಂತರ ನಿವ್ವಳ ಲಾಭ ರೂ.113 ಕೋಟಿ ಹೊಂದಿದ್ದೇವೆ ಎಂದರು.
ಬ್ಯಾಂಕಿನಲ್ಲಿ 2039 ಕೋಟಿ ರೂ.ಸ್ವಂತ ನಿಧಿ ಹೊಂದಿದ್ದು, ರೂ.1921 ಮೀಸಲು ನಿಧಿ ಹಾಗೂ ರೂ. 118 ಬಂಡವಾಳ ನಿಧಿ ಇದೆ. ರೂ.1135 ಕೋಟಿ ಅನುತ್ಪಾದಕ ಸಾಲಗಳಾದರೆ, ರೂ.505 ಕೋಟಿ ನಿವ್ವಳ ಅನುತ್ಪಾದಕ ಸಾಲ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇ 18ಕ್ಕೆ ಮೀರಿ ರೂ.15850 ಕೋಟಿ ಕೃಷಿ ಸಾಲ ನೀಡಲಾಗಿದೆ. 19565 ಕೋಟಿ ರೂ.ಆದ್ಯತಾ ವಲಯದ ಸಾಲ, 2124 ಕೋಟಿ ರೂ. ಸಣ್ಣ ಮತ್ತು ಕಿರು ಉದ್ದಿಮೆ ಸಾಲ ನೀಡಲಾಗಿದೆ. ರೂ.45106 ಕೋಟಿ ರೂ. ಕೃಷಿಕರಿಗೆ ಸಾಲ ನೀಡಲಾಗಿದೆ. 257852 ರೈತರ ಕಿಸಾನ್ ಕ್ರೆಡಿಟ್ ಸಾಲಗಾರರಿಗೆ ರೂಪೇ ಎಟಿಎಂ ಕಾರ್ಡ್ ವಿತರಿಸಲಾಗಿದೆ. ಒಟ್ಟು ಈ ವರ್ಷ 8350 ಕೋಟಿ ಸಾಲ ವಿತರಣೆ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 12.8 ಬೆಳವಣಿಗೆ ಕಂಡಿದೆ ಎಂದರು.
40.91 ಕೋಟಿ ರೂ.ಶಾಖಾವಾರು ವ್ಯವಹಾರ ನಡೆದಿದ್ದು ಸಿಬ್ಬಂದಿಗಳು 8.71 ಕೋಟಿ ರೂ.ವ್ಯವಹಾರ ಮಾಡಿದ್ದಾರೆ. 148140 ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. 87709 ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಲಾಗಿದೆ. ಸ್ವಸಹಾಯ ಸಂಘಗಳಿಗೆ 1731 ಕೋಟಿ ರೂ.ಸಾಲ ನೀಡಲಾಗಿದೆ. 31785 ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿ ಸಾಲ ವಿತರಿಸಲು ಉದ್ದೇಶಿಸಲಾಗಿದ್ದು ಸಾಲದ ಮೊತ್ತ 304 ಕೋಟಿ ರೂ.ಆಗಿದೆ ಎಂದರು.
ಸಾಮಾಜಿಕ, ಮಾಹಿತಿ ತಂತ್ರಜ್ಞಾನದಲ್ಲೂ ತಮ್ಮ ಬ್ಯಾಂಕ್ ಅಹರ್ನಿಶಿ ದುಡಿಯತ್ತಿದ್ದು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಾರ್ಷಿಕ ರೂ.12 ಪ್ರೀಮಿಯಂ ದರದಲ್ಲಿ 567937 ಗ್ರಾಹಕರಿಗೆ ರೂ.2 ಲಕ್ಷದ ವರೆಗೆ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ಅನೇಕ ರೀತಿಯಲ್ಲಿ ಅನುಕೂಲತೆ ನೀಡಲಾಗುತ್ತಿದೆ ಎಂದರು.ಬ್ಯಾಂಕ್ ನ ಜನರಲ್ ಮ್ಯಾನೇಜರ್ ಗಳಾದ ಪ್ರದೀಪ್ ವರ್ಮಾ, ಬಿಜಿ ಮಂಜುನಾಥ, ಶೈಲೇಂದ್ರ ಉಡುಪ ಮತ್ತು ಎಸ್‍ಜೆಎಫ್ ರವೀಂದ್ರನಾಥ್ ಇನ್ನಿತರರು ಉಪಸ್ಥಿತರಿದ್ದರು