ಹಾವೇರಿ
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸಸಿನೆಡುವ ಮೂಲಕ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಶೋಕ ಬೇವಿನಮರ ಇವರು ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಶೋಕ ಬೇವಿನಮರ ಹುಟ್ಟು ಹಬ್ಬದ ದಿನ ಸಸಿ ನೆಟ್ಟು ನಂತರ ಮಾತನಾಡಿದ ಅವರು ಒಟ್ಟು ಭೂ ಪ್ರದೇಶದಲ್ಲಿ ಶೇ 33% ರಷ್ಟು ಅರಣ್ಯ ಪ್ರದೇಶ ಇರಬೇಕು ಆದರೆ ನಮ್ಮ ಜಿಲ್ಲೆಯಲ್ಲಿ ಕೇವಲ 9% ರಷ್ಟು ಮಾತ್ರ ಅರಣ್ಯ ಪ್ರದೇಶವಿರುವುದು ಗಂಭಿರವಾಗಿ ಎಲ್ಲರೂ ಆಲೋಚಿಸುವ ಅಗತ್ಯವಿದೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾತನ ಹೆಚ್ಚಿಸುತ್ತಿದೆ.
ನಗರೀಕರಣ ಪರಿಸರ ಮಾಲೀನ್ಯ ದಿನೇ ದಿನೇ ಅದರೊಂದಿಗೆ ಹೆಚ್ಚುತ್ತಿದೆ ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿದ್ದು, ಇದು ಆತಂಕಕಾರಿ ಸಂಗತಿ.ಪ್ರತಿಯೊಬ್ಬರು ಪ್ರತಿ ವರ್ಷಕ್ಕೆ ಪ್ರತಿ ಬಡಾವಣೆಯಲ್ಲಿ ಮನೆಯ ಮುಂದೆ ರಸ್ತೆ ಬದಿಗಳಲ್ಲಿ ಸಸಿನೆಡುವುದರಿಂದ ಕಾಲಕ್ಕೆ ತಕ್ಕಂತೆ ಮಳೆ ಬೆಳೆ ಸುಗುಮವಾಗುತ್ತದೆ. ಸಸಿಗಳನ್ನು ನೆಡುವುದರಿಂದ ಜಾಗತೀಕ ತಾಪಮಾನ ಕಡಿಮೆ ಯಾಗುತ್ತದೆ. ಮುಂದಿನ ಪಿಳೀಗೆಯು ಅಪಾಯಕ್ಕೀಡಾಗದಂತೆ ರಕ್ಷೀಸುವುದು ನಮ್ಮ ಕರ್ತವ್ಯ.
ಹುಟ್ಟುಹಬ್ಬ ಮತ್ತು ಶುಭ ಸಂದರ್ಭದಲ್ಲಿ ಅದರ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಮತ್ತು ಪರಿಸರ ರಕ್ಷಣೆಯು ನಮ್ಮ ಆದ್ಯ ಕರ್ತವ್ಯ ಎಂದು ಅಶೋಕ ಬೇವಿನಮರ ಹೇಳಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಪಕ್ಷದ ಉಪಾಧ್ಯಕ್ಷರಾದ ಎಸ್.ಎಸ್.ಕಳ್ಳಿಮನಿ, ಶಿವಕುಮಾರ ಮಠದ,ಅಪ್ಪಾಸಾಹೇಬ ಅಂದಾನಿಗೌಡ್ರ, ಎಸ್.ಎಲ್.ಕಾಡದೇವರಮಠ,ಪ್ರಕಾಶ ಬಾರ್ಕಿ, ಎಚ್.ಫಕ್ಕೀರಪ್ಪಗೌಡ್ರ, ಸುಭಾಸ ಬೆಂಗಳೂರು, ಬಸವರಾಜ ಹಾದಿ, ಸತೀಶ ಮಡಿವಾಳರ, ಮಲ್ಲಿಕಾರ್ಜುನ ಆರಾದ್ಯಮಠ, ವೀರೇಶ ಅಂಗಡಿ,ಮಾಹಾಂತೇಶ ಬೇವಿನಹಿಂಡಿ ಸೇರಿದಂತೆ ಅನೇಕರಿದ್ದರು.