ಆಭರಿ ಮಳೆಗೆ ಅಸ್ಥವ್ಯಸ್ಥವಾದ ಜನ ಜೀವನ

ಕೂಡ್ಲಿಗಿ:

      ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ಬಂದು, ರೈತರಲ್ಲಿ ಹರ್ಷ ಮೂಡಿದೆ.

     ಬುಧವಾರ ರಾತ್ರಿ 12.42ಕ್ಕೆ ಆರಂಭವಾಗಿ ಬಾರಿ ಗಾಳಿ, ಗುಡುಗು ಸಿಡಿಲಿನಿಂದ ಕೂಡಿದ್ದ ಮಳೆ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಬಹುತೇಕ ಹಳ್ಳಗಳು ತುಂಬಿ ಹರಿದಿದ್ದು, ಕೆರೆ ಕಟ್ಟೆಗಳಿಗೆ ಸಾಕಷ್ಟು ನೀರು ಬಂದು ನಿಂತಿವೆ. ಇದರಿಂದ ರೈತರು ಬಿತ್ತನೆ ಮಾಡಲು ಅನುಕೂಲವಾಗಿದೆ.

      ಪಟ್ಟಣದ ಸೊಲ್ಲಮ್ಮ ಮರದ ಹತ್ತಿರ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿರುವ ಸೇತುವೆಗೆ ಕಟ್ಟಿಗೆ, ಕಸ, ಕಡ್ಡಿ ಬಂದು ಅಡ್ಡ ನಿಂತಿದ್ದರಿಂದ ನೀರು ಮುಂದೆ ಹೋಗಲು ಸ್ಥಳವಿಲ್ಲದೆ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿವೆ. ಅಲ್ಲದೆ ಕೊಟ್ಟೂರು ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ನೀರು ನಿಂತು ಸ್ಥಳೀಯರು ಪರದಾಡುವಂತಾಗಿದ್ದು, ಈ ರಸ್ತೆ ಮುಖಾಂತರ ಶಾಲೆಗ ಹೋಗುವ ವಿದ್ಯಾರ್ಥಿಗಳು ಜೀವ ಭಯದಲ್ಲಿಯೇ ನೀರನ್ನು ದಾಟಿಕೊಂಡೆ ಮುಂದೆ ಸಾಗಿದರು.

       ಇತ್ತ ಕೊಟ್ಟೂರು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಕಾರ್ಯ ನಡೆದಿದ್ದು, ಬಡೇಲಡಕು ರಸ್ತೆಯ ಭಾಗದಿಂದ ಬರುವ ನೀರನ್ನು ಹಳ್ಳಕ್ಕೆ ಹೋಗಲು ಸೂಕ್ತ ಜಾಗವಿಲ್ಲದೆ ಸುಮಾರು ಮೂರ್ನಾಲ್ಕು ಮನೆಗಳಲ್ಲಿ ನೀರು ನಿಂತು ಮನೆಗಳಲ್ಲಿನ ಸಮಾನುಗಳು ನೀರಿನಲ್ಲಿ ತೇಲಿ ಹೋಗಿದ್ದು, ಅಕ್ಕಿ ಸೇರಿದಂತೆ ದಿನ ಬಳಕೆ ವಸ್ತುಗಳು ನೀರಿನಲ್ಲಿ ಮುಳುಗಿವೆ. ಇದರಿಂದ ಜನರು ರಾತ್ರಿಯಲ್ಲ ಜಾಗರಣೆ ಮಾಡುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link