ಸರ್ಕಾರದ ಅವೈಜ್ಞಾನಿಕ ಆದೇಶ ಖಂಡಿಸಿ ಮನವಿ

ಶಿಗ್ಗಾವಿ :

      ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಪಬ್ಲಿಕ್ ಸ್ಕೂಲ್‍ಗಳಲ್ಲಿ ಆಂಗ್ಲ ಮಾದ್ಯಮವನ್ನು ಪ್ರಾರಂಭಿಸಲು ಆದೇಶಿಸಿದ್ದು ಆ ಆದೇಶವು ಅವೈಜ್ಞಾನಿಕವಾಗಿ ಸರಿಯಾದ ಮಾರ್ಗ ಸೂಚಿಗಳಿಲ್ಲದೆ ಪ್ರತಿ ವಿಭಾಗಕ್ಕೆ 30 ಮಕ್ಕಳಿಗೆ ಪ್ರವೇಶವನ್ನು ನೀಡಿರುವದು ಖಂಡನಿಯ ಎಂದು ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ನೇತೃತ್ವದಲ್ಲಿ ನಾರಾಯಣಪೂರ ಗ್ರಾಮದ ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಗ್ರಾಮಸ್ತರು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೆಳವರ ಅವರಿಗೆ ಶುಕ್ರವಾರ ಮನವಿ ಅರ್ಪಿಸಿದರು.

       ನಾರಾಯಣಪೂರ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಎಲ್‍ಕೆಜಿ ಹಾಗೂ 1ನೇ ತರಗತಿಗೆ ಇಂಗ್ಲೀಷ ಮಾಧ್ಯಮ ಶಾಲೆ ಪ್ರಾರಂಭಿಸಲು ಇಲಾಖೆ ಆದೇಶ ನೀಡಿದ್ದು ಎಲ್‍ಕೆಜಿಗೆ 30 ವಿದ್ಯಾರ್ಥಿಗಳು ಮತ್ತು 1ನೇ ತರಗತಿಗೆ 30 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ನಿಗದಿಗೊಳಿಸಿದೆ ಆದರೆ ಸುತ್ತಮುತ್ತಲಿನ ಗ್ರಾಮದ ನಾಗರಿಕರು ಒತ್ತಡ ತಂದು ಹೆಚ್ಚುವರಿ ವಿದ್ಯಾರ್ಥಿಗಳ ಖರ್ಚನ್ನು ನಾವೇ ಬರಿಸಿಕೊಳ್ಳುತ್ತೆವೆ ಹೆಚ್ಚು ಮಕ್ಕಳಿಗೆ ಪ್ರವೇಶಕ್ಕೆ ಅನುಮತಿಸಿದ್ದು ಇದಕ್ಕೆ ಎಸ್‍ಡಿಎಮ್‍ಸಿ ಸದಸ್ಯರು ಸಹಿತ ಸಮ್ಮತಿಸಿದ್ದು ಹೆಚ್ಚು ಮಕ್ಕಳ ಧಾಖಲೆಯ ಪ್ರಕ್ರಿಯೆ ನಡೆದಿದೆ ಆದರೆ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುವಂತಿಲ್ಲವೆಂದು ಶಿಕ್ಷಣ ಇಲಾಖೆಯ ಉಪ ನಿರ್ದೆಶಕರು ಹಾಗೂ ಬಿಇಓ ಅವರು ಹೇಳಿಕೆ ಕೊಟ್ಟಿದ್ದಾರೆ

         ಆದರೆ ಜೂ 3 ರಂದು ನಾರಾಯಣಪೂರ ಗ್ರಾಮಸ್ಥರು ಸಭೆ ಸೇರಿ ಹರತಾಳ ಮಾಡಿ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸುವದಾದರೆ ನಮಗೆ ಈ ಇಂಗ್ಲೀಷ ಮಾಧ್ಯಮ ಶಾಲೆಯೇ ಬೇಡವೆಂದು ಆಗ್ರಹಿಸಿ ಇಲಾಖೆಯಿಂದ ಸರಿಯಾದ ಹಾಗೂ ಸ್ಪಷ್ಟ ಮಾರ್ಗದರ್ಶನ ಜೊತೆಗೆ ಸರಕಾರ ಹಾಗೂ ಇಲಾಖೆ ಸೂಕ್ತ ಸುತ್ತೊಲೆಯನ್ನು ಹೊರಡಿಸಲು ಗ್ರಾಮಸ್ಥರು ನಮವಿಯಲ್ಲಿ ಒತ್ತಾಯಿಸಿದ್ದಾರೆ.
ಇದಕ್ಕೆ ಪೂರಕವಾಗಿ ಜಿಲ್ಲಾ ಡಿಡಿಪಿಐ ಹಾಗೂ ಬಿಇಓ ಅವರಿಗೆ ಗಮನಕ್ಕೆ ತಂದರು ಸಮರ್ಪಕ ಉತ್ತರ ದೊರೆತಿಲ್ಲ

          ಹಾಗಾದರೆ ಮಕ್ಕಳಿಗೆ ಆಗುತ್ತಿರುವ ಅನ್ಯಾಯಕ್ಕೆ ಹೊಣೆ ಯಾರು ? ಎಂಬ ಗೊಂದಲದಲ್ಲಿ ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರು ಹಾಗೂ ಗ್ರಾಮಸ್ಥರು ಮತ್ತು ಮಕ್ಕಳ ಪಾಲಕರು ಒಳಗಾಗಿದ್ದಾರೆ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸರ್ಕಾರ ಆದೇಶವನ್ನು ಹೊರಹಾಕುವ ಮೊದಲು ಭರ್ಜರಿ ಪ್ರಚಾರವನ್ನು ಮಾಡಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಆದೇಶಿಸಿತು ನಿಜ ಆದರೆ ಇಷ್ಟೇ ವಿದಾರ್ಥಿಗಳು ಎಂಬ ನಿಗದಿ ಮಾಡಿರುವ ಆದೇಶ ಮಾತ್ರ ತಪ್ಪಾಗಿದೆ ಎಲ್ಲರು ಶಿಕ್ಷಣವಂತರಾಗಬೇಕಾದರೆ ನಿಗದಿಯನ್ನು ತೆಗೆದು ಸರ್ವರಿಗೂ ಅವಕಾಶ ನೀಡಬೇಕಾದ ಸರ್ಕಾರ ಮಾತ್ರ ಇಲ್ಲಿ ಎಡವಿದೆ ಎನ್ನಬಹುದು ಎಂದು ಮನವಿಲಯಲ್ಲಿ ತಿಳಿಸಿದ್ದಾರೆ.ಗ್ರಾಪಂ ಸದಸ್ಯ ಗಂಗಾಧರ ಬಾವಿಕಟ್ಟಿ, ಮಹದೇವಪ್ಪ ಮಸಳಿ, ಮುದ್ದಪ್ಪ ರಾಮಾಪೂರ, ಸಿದ್ದಪ್ಪ ಭಾವಿಕಟ್ಟಿ, ಶಿವಪ್ಪ ವಡವಿ, ವಿರೇಶ ಬಾವಿಕಟ್ಟಿ, ಶಿದ್ದಪ್ಪ ಚಿನ್ನಪ್ಪನವರ, ಈರಪ್ಪ ಮಲ್ಲಮ್ಮನವರ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link