ಚಿತ್ರದುರ್ಗ
ರಸ್ತೆ, ನಗರದ ಅಭಿವೃದ್ಧಿ ಮಾಡುವುದು ನನಗೆ ಬಿಡಿ, ಬಡಾವಣೆಯ ಪ್ರತಿ ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಪೆÇೀಷಿಸುವ ಕೆಲಸ ನೀವು ಮಾಡಿ, ಎರಡು ತಿಂಗಳ ನಂತರ ಪುನಃ ಬಂದು ಪರಿಶೀಲಿಸುವೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಚಳ್ಳಕೆರೆ ರಸ್ತೆಯ ವೇಮನ ಬಡಾವಣೆಯಲ್ಲಿ ಶುಕ್ರವಾರದಂದು ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೇಮನ ಬಡಾವಣೆಯ ಎಲ್ಲಾ ರಸ್ತೆಗಳಿಗೆ ಸೇರಿ 1.80 ಕೋಟಿ ಹಣ ನೀಡಲಾಗಿದೆ. ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು. ರಸ್ತೆ ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ. ಹಂತ ಹಂತವಾಗಿ ರಸ್ತೆಗಳ ಸುಧಾರಣೆ ಮಾಡಲಾಗುತ್ತಿದೆ. ಜನರು ಸಹ ಅವರ ಬಡಾವಣೆಗಳಲ್ಲಿ ರಸ್ತೆಯಾಗಬೇಕಾದರೆ ಗುಣಮಟ್ಟದ ಪರೀಕ್ಷೆ ಮಾಡಿ ಉತ್ತಮ ರೀತಿಯಲ್ಲಿ ಮಾಡಿಸಿಕೊಳ್ಳಿ ಎಂದರು.
ರಸ್ತೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಗಿಡ ಹಾಕಿರಿ: ರಸ್ತೆಗಳನ್ನು ನಾನು ಮಾಡಿಸುತ್ತೇನೆ. ಆದರೆ ಪ್ರತಿ ಮನೆಗೆ 5 ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕಾಗಿದೆ. ಗಿಡ ಮರಗಳ ಸಂಖ್ಯೆ ತುಂಬಾ ಕ್ಷೀಣಿಸುತ್ತಿರುವುದು ತುಂಬಾ ಆತಂಕದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಗಿಡ ಬೆಳೆಸದಿದ್ದರೆ ರಸ್ತೆ ನೀಡಿರುವ ಹಣ ವಾಪಸ್ಸು ಪಡೆಯುತ್ತೇನೆ ಜಿ.ಹೆಚ್. ತಿಪ್ಪಾರೆಡ್ಡಿ, ಶಾಸಕನಾನು ಎರಡು ತಿಂಗಳು ಬಿಟ್ಟು ಮತ್ತೆ ಭೇಟಿ ನೀಡುತ್ತೇನೆ. ಅಷ್ಟೊರೊಳಗೆ ಎಲ್ಲಾರ ಮನೆಯ ಸುತ್ತಲೂ ಗಿಡಗಳು ನನ್ನ ಕಣ್ಣಿಗೆ ಕಾಣಬೇಕು ಎಂದು ತಿಳಿಸಿದರು . ನಗರಸಭೆ ಸದಸ್ಯೆ ತಾರಕೇಶ್ವರಿ, ಅನಂತರೆಡ್ಡಿ, ವೆಂಕಟೇಶ, ತಿಮ್ಮಣ್ಣ, ರಾಜೀವ್ ಸೇರಿದಂತೆ ಬಡಾವಣೆಯ ಮುಖ್ಯಸ್ಥರು ಮಹಿಳೆಯರು ಭಾಗವಹಿಸಿದ್ದರು.