ರಸ್ತೆ ಬದಿಯ ಮರಗಳನ್ನು ಕಡಿದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು-ನಾಡೋಜ ಸಾಲು ಮರದ ತಿಮ್ಮಕ್ಕ

ಶಿರಾ:

       ದಿನ ದಿನಕ್ಕೂ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಜನರು ನೀರಿಗಾಗಿ ಹಪಹಪಿಸುವಂತಹ ಕಾಲ ಬರುತ್ತಿದೆ. ಇಂತಹ ಅಚಾತುರ್ಯಗಳಿಗೆ ಹಸಿರು ಮರೆಯಾಗುತ್ತಿರುವುದೇ ಕಾರಣವಾಗಿದ್ದು ರಸ್ತೆ ಬದಿಯ ಮರಗಳನ್ನು ಕಡಿಯುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ನಾನೇ ಖುದ್ದಾಗಿ ಸರ್ಕಾರಕ್ಕೆ ಮನವಿ ಮಾಡಿಕೊಮಡಿದ್ದೇನೆ ಎಂದು ನಾಡೋಜ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸೃತರಾದ ಸಾಲುಮರದ ತಿಮ್ಮಕ್ಕ ಹೇಳಿದರು.

    ಶಿರಾ ನಗರದ ಮಂಜುಶ್ರೀ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೈಗೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮರಗಿಡಗಳನ್ನು ಬೆಳೆಸುವುದೆಂದರೆ ಅದು ನಮ್ಮ ಮಕ್ಕಳಂತೆ ಬೆಳೆಸಬೇಕು. ನಾವು ಇಟ್ಟ ಸಸಿ ಹಸಿರನ್ನು ಮೆರೆದು ಫಲ ಕೊಡುವತನಕವೂ ಅದನ್ನು ಗೌರವದಿಂದ ಬೆಳೆಸಿದಾಗ ಮಾತ್ರಾ ದೇಶ ಜೀವಂತವಾಗಿರಲು ಸಾದ್ಯ ಎಂದರು.

    ರಸ್ತೆ ಬದಿಗಳಲ್ಲಿ ರಸ್ತೆಗಳ ಅಭಿವೃದ್ಧಿಯ ಹೆಸರಲ್ಲಿ ಮರಗಿಡಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿರುವುದನ್ನು ಕಂಡಾಗ ನನಗೆ ತುಂಬಾ ನೋವಾಗುತ್ತದೆ, ಯಾವುದೇ ಶಾಲಾ ಕಾಲೇಜುಗಳಲ್ಲಿ ಕ್ರೀಡಾಂಗಣವನ್ನು ಹೊರತುಪಡಿಸಿ ಉಳಿದ ಜಾಗಗಳಲ್ಲಿ ಇಂದು ಇಂಚು ಜಾಗ ಬಿಡದಂತೆ ಮಕ್ಕಳು ಗಿಡಗಳನ್ನು ನೆಟ್ಟು ಪುಣ್ಯಕಟ್ಟಿಕೊಳ್ಳಬೇಕು ಎಂದರು.

    ನಾನು ನೀರುಣಿಸಿ ಬೆಳೆದ ಸುಮಾರು 70 ವರ್ಷದ ಮರಗಳು ಕೂಡಾ ಇಮದಿಗೂ ಜೀವಂತವಾಗಿದ್ದು ಅವುಗಳನ್ನು ಕಂಡಾಗ ನನಗೆ ಸಂತಸದ ಕಣ್ಣೀರು ಬರುತ್ತದೆ. ಅಂತಹ ಮರಗಳನ್ನು ನೂರಾರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ. ನನಗೆ ರಾಷ್ಟ್ರ ಪ್ರಶಸ್ತಿ ಹುಡುಕಿಕೊಂಡು ಬಂದಾಗ ನನಗೆ ಆಯ್ಚರ್ಯದ ಜೊತೆಗೆ ನನ್ನ ಶ್ರಮಕ್ಕೆ ಇದು ಪ್ರತಿ¨ಫಲ ಎಂದು ಭಾವಿಸಿ ಆತ್ಮಾಭಿಮಾನದಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಸಾಲುಮರದ ತಿಮ್ಮಕ್ಕ ತಿಳಿಸಿದರು.

     ನಗರಸಭೆಯ ಮಾಜಿ ಸದಸ್ಯ ಎಸ್.ಜೆ.ರಾಜಣ್ಣ ಮಾತನಾಡಿ ಮರಗಳ ಮಾರಣ ಹೋಮ ಮಾಡಿದ ಪ್ರತಿಫಲವಾಗಿ ಇಂದು ಮಳೆ-ಬೆಳೆ ಕಡಿಮೆಯಾಗಲು ಕಾರಣವಾಗಿದೆ. ಶಾಲಾ-ಕಾಲೇಜುಗಳಲ್ಲಷ್ಟೇ ಅಲ್ಲದೆ ಸಾರ್ವಜನಿಕರು ಕೂಡಾ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತಾಗಬೇಕು ಎಂದರು.

     ಬಿ.ಇ.ಓ. ರಾಮಪ್ಪ ಮಾತನಾಡಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಶಾಲಾ ಮುಖ್ಯಸ್ಥರು ಅಂತಹ ಗಿಡಗಳನ್ನು ಪೋಷಣೆ ಮಾಡಲು ಮುಂದಾಗಬೇಕು ಎಂದರು.
ಶಾಲಾ ಆಡಳಿತಾಧಿಕಾರಿ ಚಂದ್ರಯ್ಯ, ಶಾಲಾ ಸಂಸ್ಥಾಪಕರಾದ ಮಹಾಲಿಂಗಯ್ಯ, ಸಂಸ್ಥೆಯ ಉಪಾಧ್ಯಕ್ಷ ಪಸಲಣ್ಣ, ಪಿ.ಇ.ಓ. ಕುಮಾರ್, ವಿಜಯರಾಜ್, ಎಸ್.ಎಂ.ಡಾ.ಉಮೇಶ್, ಪ್ರದೀಪ್‍ಕುಮಾರ್, ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್, ಆರ್.ಎಫ್.ಓ ರಾಧಾ, ಅನುಷಾ, ನಿ.ಅರಣ್ಯಾಧಿಕಾರಿ ದೇವರಾಹಯ್ಯ, ತಿಮ್ಮಯ್ಯ, ಟೈರ್ ರಂಗನಾಥ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link