ಹಾವೇರಿ :
ತಾಲೂಕಿನ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ,ಗುತ್ತಲ ತಾಂಡ,ಗಡ್ಡಿತಾಂಡ,ನೆಗಳೂರ ಗ್ರಾಮಗಳಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ನೆಹರೂ ಓಲೇಕಾರ ಗುದ್ದಲಿ ಪೂಜೆ ನೇರವೆರಿಸಿದರು.
ಕಚ್ಚಾ ರಸ್ತೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸ್ವಚ್ಛ ಸುಂದರ ರಸ್ತೆ ನಿರ್ಮಾಣ ಮಾಡುವದು ನಮ್ಮ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ತಂದು ಪ್ರತಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಜನರಿಗೆ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಮೈಲಾರ,ವಸಂತ ಕಳಸಣ್ಣನವರ,ಅಶೋಕ್ ಯಲಿಗಾರ,ವೀರುಪಾಕ್ಷಪ್ಪ ಹುಲ್ಲೂರ, ಹನುಮಂತಪ್ಪ ಬಂಡಿವಡ್ಡರ,ವಿಜಯ ಲಮಾಣಿ,ಮಾಲತೇಶ ಲಮಾಣಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ