ಶಿರಾ
ಮಳೆ ನೀರನ್ನು ಭೂಮಿಯಲ್ಲಿ ತಡೆದು ಇಂಗಿಸುವಂತ ಚೆಕ್‍ಡ್ಯಾಂ ಮತ್ತು ಬ್ಯಾರೇಜ್‍ಗಳು ಅಂತರ್ಜಲ ವೃದ್ಧಿಗೆ ವರದಾನವಾಗಿವೆ. ನಾನು ಸಚಿವನಾಗಿದ್ದ ಸಂಧರ್ಭದಲ್ಲಿ ತಾಲೂಕಿನಲ್ಲಿ 91 ಚೆಕ್‍ಡ್ಯಾಂ ಹಾಗೂ ಬ್ಯಾರೇಜ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆ ಸಂವೃದ್ದಿಯಾಗಿ ಬಂದರೆ ಚೆಕ್ ಡ್ಯಾಂಗಳಲ್ಲಿ ಕಿಲೋ ಮೀಟರ್‍ಗಟ್ಟಲೆ ನಿಲ್ಲುವಂತ ನೀರು ಇಂಗಿದರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ವೀರಗಾನಹಳ್ಳಿ ಗ್ರಾಮದಲ್ಲಿ 1.5ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವಂತ ಚೆಕ್ ಡ್ಯಾಂ ಭರ್ತಿಯಾದ ಕಾರಣ ರೈತರು ಭಾನುವಾರ ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದರು.
ಬಯಲು ಸೀಮೆ ಹಾಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಸೇರಿದಂತೆ ಹಲವಾರು ತಾಲೂಕುಗಳಿಗೆ ಕುಡಿಯುವ ನೀರು ನೀಡುವಂತ ಮಹತ್ವಕಾಂಕ್ಷೆ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಪೊರ್ಣಗೊಂಡರೆ ಶಿರಾ ತಾಲೂಕಿನ ಸಾಕಷ್ಟು ಕೆರೆಗಳು ಭರ್ತಿಯಾಗಲಿದ್ದು, ರೈತನ ಬದುಕು ಹಸನಾಗಲಿದೆ. ರಾಜ್ಯದಲ್ಲಿ ಬಿತ್ತನೆ ರೈತ ಸಜ್ಜಾಗಿದ್ದು ವರುಣ ಕರುಣಿಸಿದರೆ ನಾಡು ಸಂವೃದ್ಧಿಯಾಗಲಿದೆ ಎಂದರು.
ವೀರಗಾನಹಳ್ಳಿ ಸೇರಿದಂತೆ ಸುತ್ತ ಮುತ್ತಲ ರೈತರಿಗೆ ಅನುಕೂಲವಾಗುವ ಚೆಕ್ ಡ್ಯಾಂ ನಿರ್ಮಾಣ ಮಾಡಲು ಮಂಜೂರಾತಿ ನೀಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರರಿಗೆ ರೈತರು ಹಸಿರು ಶಾಲು ನೀಡಿ ಸನ್ಮಾನಿಸಿ ಗೌರವಿಸಿದರು.ಹೆಂದೊರೆ ಗ್ರಾಪಂ ಸದಸ್ಯರಾದ ವಿ.ಆರ್. ಈಶ್ವರಪ್ಪ, ಆಂಜಿನಪ್ಪ, ಮಾಜಿ ಸದಸ್ಯರಾದ ವಿ.ಹೆಚ್.ನಾಗರಾಜು, ರಾಜಣ್ಣ, ಪರುಶುರಾಮಯ್ಯ, ಕಾಂಗ್ರೇಸ್ ಯುವ ಮುಖಂಡ ಇ.ಜಿ. ಧೃವಕುಮಾರ್, ಮುಖಂಡ ಪುಟ್ಟರಾಜು, ರಂಗನಾಥ್, ರೈತ ಸಂಘದ ರಾಮಣ್ಣ, ಪರುಸಣ್ಣ, ವೀರಾಪುರ ದೊಡ್ಡರಾಜು, ಶಾಂತರಾಜು , ದಲಿತ ಮುಖಂಡ ದೇವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.