ಬಳ್ಳಾರಿ
ನಗರದಲ್ಲಿ ಈಗಾಗಲೇ ಹಲವು ಹನ್ನೊಂದು ಹೆಸರಿನಲ್ಲಿ ಪುಟ್ಟ ಮಕ್ಕಳಿಗಾಗಿ ಶಾಲೆಗಳು ತಲೆ ಎತ್ತಿದ್ದು ಈ ಸಾಲಿನಲ್ಲೀಗ ಆರ್ಚಿಡ್ಸ್ ಎಜ್ಯೂಕೇಷನಲ್ ಟ್ರಸ್ಟ್ ಇವರು ನಗರದಲ್ಲಿ ಮೊದಲಬಾರಿಗೆ ಲಿಟಲ್ ಆರ್ಚಿಡ್ಸ್ ಇಂಟರ ನ್ಯಾಷನಲ್ ಫ್ರೀ ಸ್ಕೂಲ್ ಆರಂಭಿಸಿದ್ದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.
ಭಾರತದಲ್ಲಿ ಅತಿ ಮುಖ್ಯವಾದ ಸಂಸ್ಥೆಯಾದ ಆರ್ಚಿಡ್ಸ್ ಎಜ್ಯೂಕೇಷನಲ್ ಟ್ರಸ್ಟ್ ಉತ್ತಮ ವಿದ್ಯೆಯೊಂದಿಗೆ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಬಳ್ಳಾರಿ ನಗರದ ಜನತೆ ಉಪಯೋಗಿಸಿಕೊಳ್ಳಬೇಕೆಂದು ಶಾಸಕರು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಟಿ.ನಿವೇದಿತ, ಕಾರ್ಯದರ್ಶಿ ಎಂ.ಅರುಣ್‍ಕುಮಾರ್, ಪಾಲಿಕೆ ಸದಸ್ಯ ಕೃಷ್ಣ (ಕಿಟ್ಟು), ಬಳ್ಳಾರಿ ಸಿಟಿ ಯುವ ಮೋರ್ಚಾ ಅಧ್ಯಕ್ಷರಾದ ಕೆ.ಎಸ್.ಅಶೋಕ್ ಕುಮಾರ್, ಮಾತೃ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಲತಾ ಮಂಜುನಾಥ್, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
