ವಾಷಿಂಗ್ಟನ್:

ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡಿಕೊಂಡು ಬರುವ ದೇಶಗಳಿಗೆ ನೀಡುವ ಸೂಚ್ಯಂಕಗಳ ಹೊಸ ಪಟ್ಟಿ ಬಿಡುಗಡೆ ಯಾಗಿದ್ದು ,ಈ ಬಾರಿ ದೇಶಗಳ ಸ್ಥಾನ ಮಾನಗಳಲ್ಲಿ ಭಾರಿ ಏರಿಳಿತಗಳಾಗಿವೆ.
ಈ ಬಾರಿ ಭಾರತ ಬರೊಬ್ಬರಿ 5 ಸ್ಥಾನ ಕುಸಿತ ಕಂಡಿದ್ದು ಅಂತಾರಾಷ್ಟ್ರೀಯ ಚಿಂತಕರ ಛಾವಡಿ ಜಾಗತಿಕ ಶಾಂತಿ ಸೂಚ್ಯಂಕ 2019ರ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಭಾರತ ಬರೊಬ್ಬರಿ 5 ಸ್ಥಾನ ಕುಸಿತಕಂಡಿದೆ. ಒಟ್ಟು ಸಮೀಕ್ಷೆ ನಡೆಸಿದ 163 ರಾಷ್ಟ್ರಗಳ ಪೈಕಿ, ಪ್ರಸ್ತುತ ಭಾರತ 141ನೇ ಸ್ಥಾನದಲ್ಲಿದೆ.
ಇನ್ನು ಮೊದಲ ಸ್ಥಾನ ಯಾವುದು ಎಂದು ನೋಡುವುದಾದರೆ ಕಳೆದ ಬಾರಿಯಂತೆ ಈ ಬಾರಿಯೂ 1.72 ಅಂಕಗಳನ್ನು ಪಡೆಯುವ ಮೂಲಕ ಐಸ್ ಲೆಂಡ್ ದೇಶ ಅಗ್ರ ಸ್ಥಾನ ಉಳಿಸಿಕೊಂಡಿದೆ ,ಅಂತೆಯೇ 1.221 ಅಂಕಗಳನ್ನು ಪಡೆಯುವ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದೆ,ಪೋರ್ಚುಗಲ್ 3ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿರುವ ಪ್ರತೀ ರಾಷ್ಟ್ರಗಳ ಆಂತರಿಕ ಮತ್ತು ಬಾಹ್ಯ ಸಂಘರ್ಷ, ಮಿಲಿಟರಿ ಸಾಮರ್ಥ್ಯ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಆಯಾ ರಾಷ್ಟ್ರಗಳಿಗೆ 1 ರಿಂದ ಐದು ಅಂಕ ನೀಡಲಾಗುತ್ತದೆ. ಈ ಪೈಕಿ 1 ಅತ್ಯುತ್ತಮ ಎಂದೂ 5 ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ.
ಈ ಪಟ್ಟಿಯಲ್ಲಿ ಭಾರತ 141ನೇ ಸ್ಥಾನದಲ್ಲಿದೆ ಮತ್ತು ಭಾರತದ ಮಿತ್ರ ರಾಷ್ಟ್ರಗಳ ಪೈಕಿ ಪ್ರಮುಖವಾದ ರಷ್ಯಾ 154ನೇ ಸ್ಥಾನಕ್ಕೆ ತೃಪ್ತಿ ಪಟ್ಟಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
