ನಿಮ್ಮ ಮನೆಯಲ್ಲಿ 4 ಅಥವಾ ಹೆಚ್ಚು ಮಕ್ಕಳಿದ್ದರೆ ನಿಮ್ಮ ತೆರಿಗೆ ಮನ್ನಾ…!!!!

0
37

ಹಂಗರಿ

        ನಿಮ್ಮ ಮನೆಯಲ್ಲಿ 4 ಅಥವಾ ಹೆಚ್ಚು ಮಕ್ಕಳಿದ್ದರೆ ನೀವು ತೆರಿಗೆ ಕಟ್ಟುದೇ ಬೇಡ ಎಂದು ಪ್ರಪಂಚದ ಒಂದು ದೇಶ ಘೋಷಿಸಿದೆ . ಜಗತ್ತಿನಲ್ಲಿ ಎಲ್ಲಾ ದೇಶಗಳು ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿದರೆ ಈ ದೇಶ ಜನಸಂಖ್ಯೆ ವೃದ್ಧಿ ಮಾಡಲು ಯೋಚಿಸಿ ಈ ನಿರ್ಧಾರ ಮಾಡಿದೆ.   

        ವಿಶ್ವದಲ್ಲಿ ಜನಸಂಖ್ಯೆ ಕಡಿಮೆ ಮಾಡಲು ದೇಶಗಳು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿವೆ ಅದಕ್ಕೆ ಉದಾಹರಣೆ ನೋಡಿದರೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ನೆರೆಯ ಚೀನಾದಲ್ಲಿ ಜನನ ಪ್ರಮಾಣ ಇಳಿಕೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ, ಹಂಗರಿ ದೇಶದ ಪ್ರಧಾನಿ ವಿಕ್ಟೋರ್‌ ಆರ್ಬನ್‌ ಅವರು, 4 ಅಥವಾ 4ಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಕುಟುಂಬಗಳಿಗೆ ತೆರಿಗೆ ಮನ್ನಾ ಮಾಡುದಾಗಿ ಘೋಷಣೆ ಮಾಡಿದ್ದಾರೆ.

         ಹಂಗರಿ ದೇಶವು ಭವಿಷ್ಯಕ್ಕಾಗಿ ವಲಸಿಗರ ಮೇಲೆ ಅತಿ ಹೆಚ್ಚು ಅವಲಂಬನೆಯಾಗದೇ, ತನ್ನ ಪ್ರಜೆಗಳನ್ನೇ ಅವಲಂಬಿಸುವುದಕ್ಕಾಗಿ ಈ ವಿನೂತನ ಕ್ರಮ ಕೈಗೊಂಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here