ಶಿಗ್ಗಾವಿ
ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ಆಗುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕಾ ಪದಾಧಿಕಾರಿಗಳು ತಹಶೀಲ್ದಾರ ಚಂದ್ರಶೇಖರ ಗಾಳಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ರಾಜ್ಯದ ಶ್ಯಾನಾಡ್ರಹಳ್ಳಿ ಗುಂಡ್ಲ್ಲುಪೇಟೆ ನಿವಾಸಿ ಎಸ್ ಪ್ರತಾಪ ಜೂ 2 ರಂದು ಐಎಎಸ್ ಪರೀಕ್ಷೆಯನ್ನು ಬೆರಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿರುತ್ತಾನೆ ತಡವಾಗಿ ಹೊದ ಕಾರಣ ಪರೀಕ್ಷೆ ವಂಚಿತನಾಗುತ್ತಾನೆ, ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಾಸ್ ಗುಂಡ್ಲುಪೇಟೆ ಕಡೆಗೆ ತನ್ನ ಬೈಕಿನಲ್ಲಿ ಬಂದು ಅದೇ ದಿನ ರಾತ್ರಿ ರಾಘವಾಪೂರ ಗ್ರಾಮದ ಹತ್ತಿರ ತನ್ನ ಬೈಕ್ ಕೆಟ್ಟು ಹೊಗುತ್ತದೆ, ಅದೇ ಸಮಯದಲ್ಲಿ ಯಾರೊ ದುಷ್ಕರ್ಮಿಗಳು ಬಂದು ಈತನನ್ನು ದರೋಡೆ ಮಾಡಿರುತ್ತಾರೆ,
ಇದರಿಂದ ಮಾನಸಿಕವಾಗಿ ಹೆದರಿ ರಾತ್ರಿಯಿಡಿ ಅಲ್ಲೆ ಕಾಲ ಕಳೆಯುತ್ತಾನೆ ಜೂ 3 ರಂದು ಬೆಳ್ಳಗ್ಗೆ 6 ಗಂಟೆಗೆ ವೀರನಪೂರ ಗೇಟ್ ಹತ್ತಿರ ಇರುವ ಶನಿಮಹಾತ್ಮ ದೇವಸ್ಥಾನಕ್ಕೆ ವಿಶ್ರಾಂತಿ ಪಡೆಯಲು ಹೊಗುತ್ತಾನೆ ಈತನನ್ನು ಕಂಡ ಅರ್ಚಕರು ಅನುಮಾನ ವ್ಯಕ್ತ ಪಡಿಸಿ ವಿಚಾರಿಸಿದಾಗ ದಲಿತ ವ್ಯಕ್ತಿ ಎಂದು ತಿಳಿದ ನಂತರ ಅವನ ಮೇಲೆ ಹಲ್ಲೆ ನಡೆಸಿ ಆತನ ಬಟ್ಟೆಗಳನ್ನು ಬಿಚ್ಚಿ ಕೈಗೆ ಹಗ್ಗದಿಂದ ಕಟ್ಟಿ ದೇವಸ್ಥಾನದಿಂದ ಊಟಿ ಮೈಸೂರ ಮುಖ್ಯ ರಸ್ತೆಯ ವರೆಗೆ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.
ಜಾತಿಯ ಕ್ರೂರತೆ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಎದರು ಬೆತ್ತಲೆ ಇದ್ದಾಗ ಕನಿಷ್ಟ ಸೌನಜ್ಯಕ್ಕೂ ಆತನಿಗೆ ಬಟ್ಟೆ ಕೊಟ್ಟಿಲ,್ಲ ಇದು ಮಾನವಿಯತೆಯನ್ನು ತಲ್ಲಣಿಸುವ ಸಂಗತಿಯಾಗಿದೆ, ದಣಿದ ದೇಹಕ್ಕೆ ಒಂದು ಗುಟುಕು ನೀರು ಕೊಡದೇ ಏಕಾಏಕಿ ಥಳಿಸಿ ಅವನ ತಲೆಯಿಂದ ರಕ್ತ ಸೊರುತ್ತಿದ್ದರು ಮಾನವಿತೆಯನ್ನು ಕಾಣದೇ ವಿಜೃಂಭಿಸಿದ್ದಾರೆ, ಈ ಘಟನೆಯನ್ನು ದಲಿತರು ಖಂಡಿಸುತ್ತಾರೆ, ಇಂತಹ ಹೀನ ಕೃತ್ಯಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕಾಧ್ಯಕ್ಷ ಹನುಮಂತಪ್ಪ ಹರಿಜನ, ಕಾರ್ಯದರ್ಶಿ ಸಂತೋಷ ದೊಡ್ಡಮನಿ, ಸಂ ಸಂಚಾಲಕ ಷಣ್ಮುಖಪ್ಪ ಮಾದರ, ಮುಖಂಡರಾದ ಡಾ ಮಲ್ಲೇಶಪ್ಪ ಹರಿಜನ, ನಿಂಗಣ್ಣ ಹರಿಜನ, ಭರಮಪ್ಪ ಮೂಲಿಮನಿ, ಮೌನೇಶ ವಾಲ್ಮೀಕಿ, ಮಂಜುನಾಥ ಬ್ಯಾಹಟ್ಟಿ, ನಾಗರಾಜ ನಂದಿಹಳ್ಳಿ, ಯಲ್ಲಪ್ಪ ಕಮಡೊಳ್ಳಿ ಸೇರಿದಂತೆ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
