ಸೇತುವೆ ನಿರ್ಮಾಣಕ್ಕೆ ಕೋರಿ ಈ ಕೆಳಗಿನ ಮನವಿ

ಬಳ್ಳಾರಿ

       ತಾಲೂಕಿನಲ್ಲಿರುವ ಬಸರಕೋಡು ಗ್ರಾಮವು ಆಂಧ್ರ-ಕರ್ನಾಟಕ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಇರುವ ಗೂಳ್ಯಂ ಗ್ರಾಮವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇದೆ. ಈ ಗ್ರಾಮಗಳ ಮದ್ಯ ವೇದಾವತಿ ನದಿಯು ಹಾದು ಹೋಗುತ್ತದೆ.

     ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಸಂಚರಿಸುವ ವಾಹನಗಳಾಗಲೀ ಪಾದಾಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮೀ ಅಂತರವನ್ನು ಕ್ರಮಿಸಬೇಕಾಗುತ್ತದೆ. ಹಾಗೂ ಈ ನದಿಯು ಉಸುಕಿನಿಂದ ಕೂಡಿರುವುದರಿಂದ, ಹಾದು ಹೋಗುವ ವಾಹನಗಳು ಉಸುಕಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಕಾಲ್ನಡಿಗೆಯಿಂದ ಹೋಗುವವರಿಗೂ ಉಸುಕಿನಲ್ಲಿ ಕಾಲು ಸಿಕ್ಕಿ ಹಾಕಿಕೊಳ್ಳುವುದರಿಂದ ಈ ಒಂದು ಕಿ.ಮೀ ದಾರಿ ಕ್ರಮಿಸಲು ಹರಸಾಹಸ ಮಾಡಬೇಕಾಗಿದೆ.

      ವೃದ್ಧರು, ಮಕ್ಕಳು, ಮಹಿಳೆಯರು ಈ ಒಂದು ಕಿ.ಮೀ ದಾರಿ ಕ್ರಮಿಸಲು ಸುಸ್ತಾಗಿ ಹೋಗುತ್ತಾರೆ. ಪ್ರಸ್ತುತ ಎರಡೂ ಭಾಗದ ಜನರು ಈ ದಾರಿಯನ್ನೇ ಅವಲಂಬಿತರಾಗಿದ್ದು, ಬಂಡಿ, ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನಗಳು ಕೂಡ ಉಸುಕಿನಲ್ಲಿ ಸಿಕ್ಕಿಬಿದ್ದು, ಹೊರಬರಲು ಪ್ರಯಾಸಪಟ್ಟು ನದಿ ದಾಟಬೇಕಾಗಿದೆ.

      ಈ ಎರಡು ಗ್ರಾಮಗಳ ಆಂಧ್ರ-ಕರ್ನಾಟಕದ ಗಡಿ ಭಾಗಗಳಾಗಿರುವುದರಿಂದ ವ್ಯಾಪಾರ-ವಹಿವಾಟು, ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ ಸಂಬಂಧಗಳಿರುವುದರಿಂದ ದಿನನಿತ್ಯ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲ್ ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕ ಬಡ ಜನರು ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಈ ಮಾರ್ಗದಲ್ಲಿಯೇ ಬರಬೇಕಾಗಿದೆ. ಹಾಗೂ ಈ ಎರಡು ಭಾಗಗಳ ಜನತೆಗೆ ಗೂಳ್ಯಂ ಪುಣ್ಯ ಕ್ಷೇತ್ರವಾಗಿರುವುದರಿಂದ ವರ್ಷಕ್ಕೊಮ್ಮೆ ನಡೆಯುವ ಗಾದಿಲಿಂಗಪ್ಪ ತಾತನವರ ಜಾತ್ರಾ ಸಂದರ್ಭದಲ್ಲಿ ಸಾವಿರಾರು ಜನರು ಈ ನದಿಯನ್ನು ದಾಟಿಕೊಂಡು ಹೋಗಬೇಕಾಗುತ್ತದೆ.

     ಆದ್ದರಿಂದ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ.
ಈ ಯೋಜನೆಯನ್ನು ಜಾರಿಗೊಳಿಸಿ ವೇದಾವತಿ (ಹಗರಿ) ನದಿಗೆ ಶಾಶ್ವತ ಸೇತುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂದು ಈ ಭಾಗದ ಜನರ ಬೇಡಿಕೆಯಾಗಿದೆ.

      ಶಾಶ್ವತ ಸೇತುವೆ ನಿರ್ಮಾಣವಾಗುವವರೆಗೆ ತಾತ್ಕಾಲಿಕ ರಸ್ತೆ ಮಾಡುವುದರಿಂದ ಇಡೀ ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಕುರುಗೋಡು ತಾಲೂಕುಗಳ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ ಹಾಗೂ ಗಡಿಭಾಗದ ಆಂಧ್ರ ಪ್ರದೇಶದ ಹಳ್ಳಿಗಳ ಜನತೆಗೆ ಅನುಕೂಲವಾಗುತ್ತದೆ.ಆದ್ದರಿಂದ ತಾವು ಗಡಿಭಾಗದ ಜನತೆಯ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link