ರೈತರಿಗೆ ಸಾಲದ ಚೆಕ್ ವಿತರಣೆ..!!

ಗುತ್ತಲ:

     ಸಹಕಾರಿ ಸಂಘಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಅರಿತು ನಡೆದರೆ ಮಾತ್ರ ಸಂಘಗಳು ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವೆಂದು ಕೆಸಿಸಿ ಬ್ಯಾಂಕಿನ ನಿರ್ದೇಶಕ ಮುತ್ತಣ ಯಲಿಗಾರ ಹೇಳಿದರು.

      ಸಮೀಪದ ನೆಗಳೂರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬೆಳೆಸಾಲ ಪಡೆದ ಹೊಸ ಸಾಲಗಾರರಿಗೆ ಚಕ್ ವಿತರಣಿಮಾಡಿ ಮಾತನಾಡಿದ ಅವರು, ನಾನು ನಿರ್ದೇಶಕನಾದ ಸಮಯದಲ್ಲಿ ತಮಗೆ ತಿಳಿಸಿದ ಹಾಗೆ ಹೊಸ ರೈತರಿಗೆ ಬೆಳೆಸಾಲ ನೀಡಲು ವ್ಯವಸ್ಥೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲ ನೀಡುವಲ್ಲಿ ಪ್ರಯತ್ನಿಸುತ್ತೆನೆ ಎಂದರು.

     ಕೆಸಿಸಿ ಬ್ಯಾಂಕ ಪ್ರತಿನಿಧಿ ಎಸ್.ಎಮ್. ರುದ್ರಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ಹಳೆಯ ರೈತರಿಗೆ ಹೆಚ್ಚಿನ ಬೆಳೆಸಾಲ ನೀಡುವಂತೆ ಈಗಾಗಲೇ ನಿರ್ದೇಶಕರಿಗೆ ತಿಳಿಸಲಾಗಿದೆ ಆದಷ್ಟು ಬೇಗನೆ ರೈತರಿಗೆ ಸಾಲ ನೀಡಲಾಗುತ್ತದೆ

      ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವರಡ್ಡಿ ಮೈದೂರ, ಉಪಾಧ್ಯಕ್ಷ ದಾದಪೀರ ಮುಲ್ಲಾ. ಕೆಸಿಸಿ ಬ್ಯಾಂಕ ಪ್ರತಿನಿಧಿ ವಿ.ಎಸ್. ರಿತ್ತಗಾಣಿಗೇರ ಹಾಗೂ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link