ಭೀಕರ ಅಪಘಾತ: ಬಿಜೆಪಿ ಸಚಿವನ ಪುತ್ರ ಸ್ಥಳದಲ್ಲೇ ಸಾವು!!!

ಬರೇಲಿ:

      ಭೀಕರ ಅಪಘಾತದಲ್ಲಿ ಉತ್ತರಾಖಂಡದ ಸಚಿವರೊಬ್ಬರ ಪುತ್ರ ಅಸುನೀಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಫರಿದ್ಬುರದಲ್ಲಿ ಸಂಭವಿಸಿದೆ.

      ಉತ್ತರಾಖಂಡದ ಸಚಿವ ಅರವಿಂದ್ ಪಾಂಡೆ ಅವರ ಪುತ್ರ ಅಂಕುರ್ ಪಾಂಡೆ ಮೃತ ದುರ್ದೈವಿ. ಅಂಕುರ್​ ಪಾಂಡೆ ಸೇರಿ ಮತ್ತಿತರರು ಮದುವೆಗೆಂದು ಗೋರಖ್​ಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.  

      ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಫರಿದಾಬಾದ್​ ಬಳಿ ಇಂದು ನಸುಕಿನ 3 ಗಂಟೆಯ ವೇಳೆ  ಕಾರಿಗೆ ಟ್ರಕ್​ ಡಿಕ್ಕಿ ಹೊಡೆದು ಕಾರು ನಜ್ಜುಗುಜ್ಜಾಗಿದೆ.  ಪರಿಣಾಮ ಅಂಕುರ್​ ಪಾಂಡೆ ಸೇರಿ ಒಟ್ಟು ಮೂವರು ಮೃತಪಟ್ಟಿದ್ದು ಇನ್ನೋರ್ವರಿಗೆ ಗಂಭೀರ ಗಾಯವಾಗಿದೆ.

       ಈ ಘಟನೆಯಲ್ಲಿ ಗಾಯಗೊಂಡಿರುವ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link