ಗಣಿ ಲಾರಿ ಅಪಘಾತ ಪ್ರಕರಣ : ಮೃತ ಪಟ್ಟ ಕುಟುಂಬಗಳಿಗೆ 80 ಲಕ್ಷ ಪರಿಹಾರ

ಚಿತ್ರದುರ್ಗ

     ಗಣಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸೇರಿದಂತೆ ಮೂರು ಜನ ಮೃತಪಟ್ಟಿದ್ದು, ಅವರಿಗೆ ಗಣಿ ಕಂಪನಿಯೂ 80 ಲಕ್ಷ ರೂ.ಹಣ ಮತ್ತು ಇಬ್ಬರಿಗೆ ಕೆಲಸವನ್ನು ನೀಡಲು ತೀರ್ಮಾನಿಸಿದ್ದು ಇದರಂತೆ ಇಂದು ಪ್ರವಾಸಿ ಮಂದಿರದಲ್ಲಿ ಶಾಸಕರು ಮೃತ ಪಟ್ಟ ಸಂಬಂಧಕರಿಗೆ ಪರಿಹಾರ ಧನವನ್ನು ವಿತರಣೆ ಮಾಡಿದರು.

    ಕಳೆದ ಹಲವೂ ದಿನಗಳ ಹಿಂದೆ ಭೀಮಸಮುದ್ರದ ಬಳಿ ಗಣಿ ಲಾರಿಯೊಂದು ದ್ವೀಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿ ಸವಾರಿ ಮಾಡುತ್ತಿದ್ದ ಮಹಾಂತೇಶ್ ನಾಯ್ಕ್ , ದೀಪ ಮತ್ತು ಇವರ ಅಣ್ಣನ ಮಗ ಚೇತನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಇದರಿಂದ ರೊಚ್ಚಿಗೆದ್ದ ಆ ಬಾಗದ ಜನತೆ ಗಣಿ ಲಾರಿಗಳನ್ನು ಓಡಾಡುವುದನ್ನು ನಿಷೇಧ ಮಾಡಬೇಕೆಂದು ಜಿಲ್ಲಾಡಳಿತದ ಮೇಲೆ ಒತ್ತಡವನ್ನು ತಂದಿದ್ದರಿಂದ ಜಿಲ್ಲಾಧಿಕಾರಿಗಳು ಸುಮಾರು 1 ತಿಂಗಳ ಕಾಲ ಗಣಿ ಲಾರಿಗಳ ಓಡಾಟವನ್ನು ನಿಷೇಧ ಮಾಡಿದ್ದಾರೆ.

      ನಗರದ ಪ್ರವಾಸಿ ಮಂದಿರದಲ್ಲಿ ಶಾಸಕರು ಮೃತ ಸಂಬಂಧಿಕರ ಮತ್ತು ಗ್ರಾಮದ ಮುಖಂಡರ ಜೊತೆಗೆ ಚರ್ಚೆ ಮಾಡಿ ಅಂತಿಮವಾಗಿ ಮೃತ ಸಂಬಂಧಿಕರಿಗೆ ಹಣದ ಡಿಡಿಯನ್ನು ದೀಪಳ ತಂದೆಗೆ 20 ಲಕ್ಷ, ತಾಯಿಗೆ 20 ಲಕ್ಷ ಮತ್ತು ಮಗು ಚೇತನ ತಂದೆ ತಾಯಿಗೆ 20ಲಕ್ಷ ರೂ.ಗಳನ್ನು ವಿತರಿಸಿದರು. ಮಹಾಂತೇಶನ ಸಂಬಂಧಿಕರು ಯಾರು ಬಾರದೇ ಇದಿದ್ದರಿಂದ ಅವರ ಡಿಡಿಯನ್ನು ವಿತರಣೆ ಮಾಡಲಿಲ್ಲ.

        ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹಣ ಸಿಕ್ಕಿದೆ ಎಂದು ದುಂದು ವೆಚ್ಚ ಮಾಡಬೇಡಿ ಬೇರೆಯವರು ಕೇಳಿದರೆಂದು ಸಹಾ ನೀಡಬೇಡಿ ಇದನ್ನು ಜೋಪಾನ ಮಾಡಿಕೊಂಡು ಮುಂದೆ ನಿಮ್ಮಗಳ ಅಗತ್ಯಕ್ಕೆ ಬಳಕೆ ಮಾಡಿಕೊಳ್ಳಿ ಹಣ ಇದೆ ಎಂದು ಜನತೆ ಕೇಳುವುದು ಉಂಟು ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap