ಚಿತ್ರದುರ್ಗ
ಶರಣ ಸಂಸ್ಕತಿಯ ಉತ್ಸವ 2018ರ ಅಂಗವಾಗಿ ಎಸ್.ಜೆ.ಎಮ್. ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಡಾ.ಶಿವಮೂರ್ತಿ ಮುರುಘಾಶರಣರು ಉದ್ಘಾಟಿಸಿದರು.
ಚಿತ್ರಕಲಾ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾಕೃತಿಗಳಿವೆ. ಪ್ರತಿವರ್ಷ ಶರಣ ಸಂಸ್ಖತಿ ಉತ್ಸವದ ಅಂಗವಾಗಿ ಸುಮಾರು ಎರಡು ತಿಂಗಳು ಮೊದಲು ಕಲಾಕೃತಿಗಳನ್ನು ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿರುವ ಪ್ರಸ್ತುತ ದಿನಮಾನಗಳಲ್ಲಿ ಸಮಕಾಲೀನ ಕಲೆ, ಜಲವರ್ಣ, ತೈಲವರ್ಣ, ಅಕ್ರಾಲಿಕ್, ಚಾರ್‍ಕೋಲ್ ಮತ್ತು ಮಿಕ್ಸ್ ಮೀಡಿಯಾ ಮಾದ್ಯಮಗಳಲ್ಲಿ ಅಬ್ ಸ್ಟ್ರಾಟ್ ವಸ್ತುಚಿತ್ರಣ , ಚಿತ್ರ ಸಂಯೋಜನೆ, ಪ್ರಕೃತಿ ಚಿತ್ರಣ, ಭಾವ ಚಿತ್ರಣ, ಪ್ರಿಂಟ್ ಮೇಕಿಂಗ್, ನೈಜ ಚಿತ್ರಣಗಳನ್ನು ಇಲ್ಲಿ ನೋಡಬಹುದಾಗಿದೆ. ಉಪನ್ಯಾಸಕಾರದ ಜಿ.ಆರ್.ಪಾಪಯ್ಯನವರ ಬೇಡಜನಾಂಗದ ಬುಡಕಟ್ಟು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಪ್ರದರ್ಶನದಲ್ಲಿ ಬುದ್ದನ ಸರಣಿ ಚಿತ್ರಗಳು, ಯಕ್ಷಗಾನದ ಚಿತ್ರಗಳು ಹಾಗು ರೈತರ ಜೀವನ ಬಿಂಬಿಸುವ ಚಿತ್ರಗಳು, ಅತ್ಯಾಚಾರ ತಡೆಯುವಂತಹ ಚಿತ್ರಗಳು ಕಲಾಪ್ರದರ್ಶನ ಕೇಂದ್ರಬಿಂದುಗಳಾಗಿದ್ದವು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕತಿ ಉತ್ಸವ 2018ರ ಗೌರಾಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಡಾ.ಈ.ಚಿತ್ರಶೇಖರ್, ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
