ಹಾವೇರಿ :
ನೀರಿನ ವಿಚಾರದಲ್ಲಿ ರಾಜಕೀಯ ಮಾಡಿ,ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಶಾಸಕ ನೆಹರೂ ಓಲೇಕಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶಾಸಕರು ತಮ್ಮದೆಯಾದ ಲೆಕ್ಕದಲ್ಲಿ ತಾವೇ ಶ್ರೇಷ್ಠ ಎಂಬಂತೆ ವರ್ತಿಸುವಂತಾಗಿದ್ದು
ತಾಲೂಕಿನ ಜನರಿಗೆ ಕುಡಿಯಲು ನೀರು ಬಿಡಲಿಕ್ಕಾಗಿ ಹೋರಾಟ ಮಾಡಲಾಗುತ್ತಿದೆ ಎಂದು ಶಾಸಕರು ಹೇಳುತ್ತಾರೆ. ಕಾನೂನು ಬದ್ದವಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸಿದರೆ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಹಳ್ಳಿಗಳಲ್ಲಿ ಜನರಿಗೆ ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದ್ದು, ಕಾಂಗ್ರೇಸ್ ಪಕ್ಷದ ಮುಖಂಡರ ವಿರುದ್ಧ ಎತ್ತಿಕಟ್ಟುವ ಸಂಚು ಮಾಡುವುದರಿಂದ ನಾವು ಸುಮ್ಮನೆ ಕುಳಿತುಕೊಳ್ಳುವವರಲ್ಲ .
ಹಳ್ಳಿಗಳಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದಾರೆ.ನಾವು ಸುಮ್ಮನೆ ಇರುವುದಿಲ್ಲ,ನಮಗೂ ರಾಜಕೀಯ ಗೊತ್ತು ಎಂದರು. ತಾವು ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಳನ್ನು ಶಾಸಕರು ತಾವು ಮಾಡಿದ್ದೇವೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಅವರಿಗೆ ಶೋಭೆ ತರುತ್ತದೆ ಎಂದು ಅವರ ನಡೆಯನ್ನು ವಿರೋಧಿಸಿದರು. ಜಿ.ಪಂ ಸದಸ್ಯ ಕೊಟ್ರೇಶಪ್ಪ ಬಸೆಗಣ್ಣಿ ಮಾತನಾಡಿ ಶಾಸಕರು ರೈತರ ಮೇಲೆ ಕೇಸಗಳನ್ನು ಹಾಕಿಸಲಾಗುತ್ತಿದೆ ಎಂದು ಸುಳ್ಳು ಹೇಳುತ್ತಿರುವುದು ಕಂಡು ಬರುತ್ತಿದ್ದು,ಪೈಪ್ ಕಳುವು ಆಗಿರುವ ಬಗ್ಗೆ ಮಾಹಿತಿ ಕೇಳಿದ್ದೇನೆ .
ನಾವು ಜನರ ಕೆಲಸ ಮಾಡುವ ಜನಪ್ರತಿನಿಧಿಗಳೇ ಸರ್ಕಾರದ ಯೋಜನೆಗಳ ನಿಯಮಗಳು ನಮಗೂ ಗೊತ್ತು. ಇಲ್ಲಸಲ್ಲದ ಆರೋಪ ಮಾಡುವುದು ಶಾಸಕರಿಗೆ ಶೋಭೆ ತರುವುದಲ್ಲ ಎಂದು ವಾಕ್ಸಮರ ನಡೆಸಿದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ ಸರ್ಕಾರ ನಿಯಮದ ಪ್ರಕಾರ ಕೆಲಸ ಮಾಡಲಿ ನಾವು ಬೆಂಬಲ ನೀಡುತ್ತೇವೆ. ಅನಾವಶ್ಯಕವಾಗಿ ಇಲ್ಲಸಲ್ಲದ ಆರೋಪ ಮಾಡಿ ತಾವೇ ಎಲ್ಲವನ್ನು ಬಲ್ಲವರು ಎಂಬಂತೆ ವರ್ತಿಸುವುದು ತರವಲ್ಲ ಎಂದು ಅವರ ನಡೆಯನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ.ಮುಖಂಡರಾದ ಸಂಜೀವಕುಮಾರ ನೀರಲಗಿ.ಯಲ್ಲಪ್ಪ ಮಣ್ಣೂರ.ಎಂ.ಎಂ ಮೈದೂರ.ಪ್ರಭುಗೌಡ ಬಿಷ್ಟನಗೌಡ್ರ ಅನೇಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
