ಸಿ.ಜಿ.ಕೆ ಪ್ರಶಸ್ತಿ ಪ್ರಧಾನ ಸಮಾರಂಭ

ಹಾವೇರಿ :

     ನಗರದ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಬೀದಿ ನಾಟಕ ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ಕೊಡಮಾಡುವ ಸಿ.ಜಿ.ಕೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.ಸಾಮಾಜಿಕ ಬದ್ಧತೆ ಮತ್ತು ಜನ ಕಳಕಳಿಯನ್ನು ರಂಗ ಭೂಮಿಗೆ 70 ರ ದಶಕದಲ್ಲಿ ತಂದ ಖ್ಯಾತ ರಂಗಕರ್ಮಿ ದಿ. ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ) ಹೆಸರಿನ ಪ್ರಶಸ್ತಿ ಈ ಬಾರಿ ಜಿಲ್ಲೆಯ ಇಬ್ಬರು ಕಲಾವಿದರಾದ ಕುಮಾರದಾಸ ಹೂಗಾರ ಮತ್ತು ಶ್ರೀಮತಿ ಲಲಿತಾ ಪಾಟೀಲರಿಗೆ ನೀಡಲಾಯಿತು.

      ಆಕರ್ಷಕ ಫಲಕ, ಫಲಪುಷ್ಪ ಸಹಿತ ಶಾಲು ಹೊದಿಸಿ ಪ್ರಶಸ್ತಿ ಪ್ರಧಾನವನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ವ್ಹಿ ಚಿನ್ನಿಕಟ್ಟಿ ಮಾಡಿ ಸಮಾಜದೊಳಗಿನ ವಿರೋಧಾಭ್ಯಾಸಗಳನ್ನು ತಿದ್ದುವ ಶಕ್ತಿ ಬೀದಿ ರಂಗಭೂಮಿಗೆ ಮಾತ್ರ ಇದೆ.ಕುಮಾರದಾಸ ಹೂಗಾರ ಒಬ್ಬ ಅಭಿಜಾತ ಕಲಾವಿದ. ನಟನೆ ಹಾಡು ಹಾಗೂ ಸಂಘಟನೆಗಳನ್ನು ಮಾಡುತ್ತಲೇ ರಂಗ ಸ್ನೇಹಜೀವಿ. ಶ್ರೀಮತಿ ಲತಾ ಪಾಟೀಲ ಒಬ್ಬ ಮಹಿಳೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ರಂಗ ಕಲೆಗೆ ಗೌರವ ತಂದವರು ಎಂದು ಚಿನ್ನಿಕಟ್ಟಿ ಹೇಳಿದರು.

      ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾದ ಬಸವರಾಜ ಶಿಗ್ಗಾವಿ ಬೀದಿ ನಾಟಕ ಸದಾ ಜೀವಂತ ಕಲೆ. ಹೋರಾಟದ ಕಿಚ್ಚುಗಳನ್ನು ಹಚ್ಚುವ ಶಕ್ತಿ ಇದಕ್ಕಿದೆ. ಸಿ.ಜಿ.ಕೆ ಇಂಥ ರಂಗ ಭೂಮಿಗೆ ಜೀವಕಳೆ ತಂದವರು ಎಂದರು. ಸಿ.ಜಿ.ಕೆ ಕುರಿತು ವಿಶೇಷ ಉಪನ್ಯಾಸ ನೀಡಿದ ಲೇಖಕಿ ಶ್ರೀಮತಿ ರೇಖಾ ರಂಗನಾಥ ಭೈರಕ್ಕನವರ ತಮ್ಮ ಪೋಲಿಯೋ ಸಂಬಂಧಿ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕರ್ನಾಟಕದಲ್ಲಿ ಬೀದಿ ನಾಟಕ ಕಲೆಗೆ ಗೌರವ ತಂದವರು ಎಂದರು.

        ಪ್ರಶಸ್ತಿ ಪುರಸ್ಕತ ಕುಮಾರದಾಸ ಹೂಗಾರ ನನ್ನಲ್ಲಿ ಈಗಲೂ ಜೀವನ ಮತ್ತು ಸಮಾಜ ಪ್ರೀತಿ ಉಳಿದಿದ್ದರೆ ಅದಕ್ಕೆ ರಂಗ ಭೂಮಿ ಕಾರಣ, ಸಿ.ಜಿ.ಕೆ ಅಂತಹ ಮಹಾನ್ ಕಲಾವಿದರ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ ಎಂದು ಹೇಳಿದರು.

        ಇನ್ನೋರ್ವ ಪ್ರಸಸ್ತಿ ಪುರಸ್ಕತೆ ಶ್ರೀಮತಿ ಲಲಿತಾ ಪಾಟೀಲ ಮಾತನಾಡಿ ನಾಟಕ ನನಗೆ ಅನ್ನ ಮತ್ತು ಕಲೆಯೂ ಆಗಿದೆ. ರೈತಾಪಿ ಕುಟುಂಬದಿಂದ ನಗರಕ್ಕೆ ಬಂದ ನನಗೆ ನಾಟಕ ಬಿಟ್ಟರೆ ಅಂಗಿಗೆ ಬಟನ್ ಕೂಡಾ ಹಚ್ಚಕು ಬರುವುದಿಲ್ಲ. ನಾಡಿನ ಎಲ್ಲ ನಗರ ಮತ್ತು ಗ್ರಾಮಗಳಲ್ಲಿ ಅನೇಕ ತಂಡಗಳ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಅಪರೂಪದ ರಂಗ ಮಂದಿರಗಳನ್ನೂ ನೋಡಿದ್ದೇನೆ. ಆದರೆ ನಮ್ಮ ಹಾವೇರಿಯಲ್ಲಿ ಒಂದೇಒಂದು ರಂಗ ಮಂದಿರ ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದರು.

        ಪ್ರಸಸ್ತಿ ಸಂಚಾಲಕ ಕೆ. ಆರ್ ಹಿರೇಮಠ ಸಿ.ಜಿ.ಕೆ ರಂಗ ಪ್ರಶಸ್ತಿ ಹೊಸ ಪ್ರತಿಭೆಗಳಿಗೆ ಚೈತನ್ಯ ತುಂಬಿಸುವ ಕ್ಷಣವಾಗಿದೆ’ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಖಗದ ಅಧ್ಯಕ್ಷರಾದ ವ್ಹಿ. ಎಂ ಪತ್ರಿ ವಹಿಸಿದ್ದರು. ವೇದಿಕೆಯಲ್ಲಿ ಡಾ. ಜೆ. ಆರ್ ಗುಡಿ, ಶ್ರಿಮತಿ ಶಶಿಕಲಾ ಅಕ್ಕಿ , ಕೆ. ಎನ್ ಜಾನ್ವೇಕರ, ಎ. ಬಿ ಗುಡ್ಡಳ್ಳಿ ಹಾಗೂ ರಾಜಾ ಭಕ್ಷ ಇದ್ದರು.

       ಈ ಸಂದರ್ಭದಲ್ಲಿ ಕಳೆದ ಸುಡು ಬೇಸಿಗೆಯಲ್ಲಿ ಹತ್ತಾರು ಗಿಡಗಳಲ್ಲಿ ಹಕ್ಕಿಗಳಿಗಾಗಿ ನೀರಿನ ತೊಟ್ಟು ಕಟ್ಟಿ ಹಕ್ಕಿ ಪ್ರೀತಿ ತೋರಿಸಿದ ಕರ್ಜಗಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ರಾಜಶೇಖರ ಕೋಡಬಾಳ ಅವರನ್ನು ಹಿರಿಯ ಲೇಖಕ ಪ್ರೊ. ಕೋರಗಲ್ ವಿರೂಪಾಕ್ಷಪ್ಪ ಸನ್ಮಾನಿಸಿದರು. ನಾಗರಾಜ ನಡುವಿನಮಠ ಕೋಡಬಾಳರ ಹಕ್ಕಿ ಪ್ರೀತಿ ಕುರಿತು ಪರಿಚಯಿಸಿದರು.

       ಯುವ ಲೇಖಕರಾದ ವಾಗೀಶ ಹೂಗಾರ ಮತ್ತು ಶ್ರೀಮತಿ ರಾಜೇಶ್ವರಿ ಸಾರಂಗಮಠ ನಡೆಸಿದರು. ಆರಂಭದಲ್ಲಿ ಸರ್ವಶ್ರೀ ಮಂಜುನಾಥ ವಾಲ್ಮಿಕಿ, ವಿಶ್ವ ಕೆ ಹಿರೇಮಠ, ತುಷಾರ ಮಳಗಿ ಕುಮಾರಿ ಶ್ವೇತಾ ಪಾಟೀಲ ರಂಗ ಗೀತೆಗಳನ್ನು ಹಾಡಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಸ್ವಾದತಿಸಿದರೆ, ಪೃಥ್ವಿರಾಜ ಬೆಟಗೇರಿ ವಂದಿಸಿದರು. ಶ್ರೀಮತಿ ಲತಾ ಪಾಟೀಲ ನಿರ್ದೇಶನದ ಕಾಡು ಉಳಿಸಿ ನಾಟಕ ಪ್ರದರ್ಶನ ನಡೆಯಿತು. ಪ್ರದರ್ಶನಕ್ಕೆ ಶ್ರೀಮತಿ ರೇಣುಕಾ ಗುಡಿಮನಿ ಚಾಲನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link