ಅಲ್ಪಸಂಖ್ಯಾತ ಹಿಂದೂಗಳ ಬೇಡಿಕೆ ಈಡೇರಿಸಿದ ಪಾಕಿಸ್ತಾನ ಸರ್ಕಾರ..!!

ಪಾಕಿಸ್ಥಾನ:
      ಸ್ವತಂತ್ರ್ಯ ಬಂದ 72 ವರ್ಷಗಳ ನಂತರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ ಪ್ರದೇಶದ ಪುರಾತನ ಹಿಂದೂ ದೇವಾಲಯವನ್ನು ಮತ್ತೆ ಪ್ರವಾಸಿಗರು, ಭಕ್ತರ ವೀಕ್ಷಣೆಗೆ ಮುಕ್ತಗೊಳಿಸಿ ಆ ದೇಶದ ಫೆಡರಲ್ ಸರ್ಕಾರದ ನಿರ್ದೇಶನದ ಮೇರೆಗೆ  ದೇವಾಲಯವನ್ನು ಭಕ್ತರ ಆರಾಧನೆಗಾಗಿ ತೆರೆಯಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ .
   ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ದೀರ್ಘಕಾಲದ ಬೇಡಿಕೆಯಾಗಿರುವ ಇದನ್ನು ಈಡೇರಿಸುವ ನಿಟ್ಟಿನಲ್ಲಿ ಶವಲ ತೀಜ ಸಿಂಗ್ ದೇವಾಲಯವನ್ನು  ಹಿಂದೂ ಸಂಪ್ರದಾಯಗಳ ಪ್ರಕಾರ ಇತ್ತೀಚೆಗೆ ಮತ್ತೆ ಆರಾಧಕರಿಗೆ ತೆರೆಯಲಾಗಿದೆ. ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
  “ದೇವಾಲಯವನ್ನು ತೆರೆಯಬೇಕೆಂದು ಹಲವಾರು ವರ್ಷಗಳಿಂದ ಹಿಂದೂ ಸಮುದಾಯವು ಒತ್ತಾಯಿಸುತ್ತಾ ಬಂದಿತ್ತು.”  ದೇವಾಲಯದ ಉಪ ಕಾರ್ಯದರ್ಶಿ ಸೈಯದ್ ಫರಾಜ್ ಅಬ್ಬಾಸ್ ಹೇಳಿದ್ದಾರೆ. ಇನ್ನು ದೇವಾಲಯ ನವೀಕರಣ ವೆಚ್ಚವ ಅಂದಾಜು ನಡೆಸಿ ನಂತರ ದೇವಾಲಯವನ್ನು ನವೀಕರಿಸುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ದೇವಾಲಯದಲ್ಲಿ ಪ್ರತಿಷ್ಟಾಪಿಸಲು ಹಿಂದೂ ದೇವತೆಗಳ ವಿಗ್ರಹಗಳನ್ನು ಭಾರತದಿಂದ ತರಲಾಗುತ್ತದೆ ಎಂದೂ ತಿಳಿಸಿದ್ದಾರೆ.
    ಎರಡೂ ದೇಶದ  ವಿಭಜನೆಯ ನಂತರ ಮುಚ್ಚಲ್ಪಟ್ಟಿದ್ದ ಈ ದೇವಾಲಯಗಳನ್ನು ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಪಿಟಿಬಿ) ಅಧ್ಯಕ್ಷ ಡಾ.ಅಮೀರ್ ಅಹ್ಮದ್ ಅವರ ನಿರ್ದೇಶನದ ಮೇರೆಗೆ  ದೇವಾಲಯವನ್ನು ಮತ್ತೆ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link