ಚಳ್ಳಕೆರೆ
ಪ್ರಸ್ತುತ ಮುಂಗಾರು ಮಳೆ ತಾಲ್ಲೂಕಿನ ಕೇವಲ ಕೆಲವೇ ಭಾಗಗಳಲ್ಲಿ ಮಾತ್ರ ಅಲ್ಪ ಮಳೆಯಾಗಿದ್ದು, ರೈತರು ಬಿದ್ದ ಮಳೆಗೆ ಉತ್ತೇಜನಗೊಂಡು ತಮ್ಮ ಜಮೀನುಗಳನ್ನು ಹಸನು ಪಡಿಸಿ ಶೇಂಗಾ ಬಿತ್ತನೆಯನ್ನು ಪ್ರಾರಂಭಿಸಿದ್ಧಾರೆ.
ವಿಶೇಷವಾಗಿ ತಳಕು ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆಗೆ ಪೂರಕವಾದ ವಾತಾವರಣವಿದ್ದು, ಇಲ್ಲಿನ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಹಣ ಪಾವತಿಸಿ ಸರ್ಕಾರದ ಸಬ್ಸಿಡಿ ದರ ಶೇಂಗಾ ಬಿತ್ತನೆ ಶೇಂಗಾವನ್ನು ಖರೀದಿಸಲು ಸಾಲು, ಸಾಲಾಗಿ ನಿಂತಿದ್ದು, ಆದರೆ, ದಿಢೀರನೆ ಬಿತ್ತೆನೆ ಶೇಂಗಾ ದರ ಏರಿಸಿದ್ದನ್ನು ವಿರೋಧಿಸಿ ಬುಧವಾರ ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಬಸವರಾಜಪ್ಪ ಮಾತನಾಡಿ, ಕಳೆದ ಸರಿ ಸುಮಾರು 10 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗಿಲ್ಲ. ಈ ವರ್ಷವೂ ಸಹ ಯಾವ ರೀತಿ ಮಳೆಯಾಗುತ್ತದೆ ಎಂಬ ಬಗ್ಗೆ ಖಚಿತವಾಗಿ ಹೇಳಲಾಗುವುದಿಲ್ಲ. ಮುಂಗಾರು ಶೇಂಗಾ ಬಿತ್ತನೆ ಬೀಜ ದಾಸ್ತಾನಿದ್ದು, ಯಾವುದೇ ರೈತರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸುವುದಾಗಿ ಇಲ್ಲಿಗೆ ಭೇಟಿ ನೀಡಿದ್ದ ಶಾಸಕ ಬಿ.ಶ್ರೀರಾಮುಲುರವರ ಸಮಕ್ಷಮದಲ್ಲೇ ರೈತರಿಗೆ ಕೃಷಿ ಅಧಿಕಾರಿಗಳು ಭರವಸೆ ನೀಡಿದ್ದರು.
ಆದರೆ, ಶೇಂಗಾ ಬಿತ್ತನೆ ಬೀಜ ಎಸ್ಟಿ, ಎಸ್ಸಿ ಮೀಸಲಾತಿಯವರಿಗೆ 1380 ಒದ್ದು ಈಗ ಅದನ್ನು 1680ಕ್ಕೂ, ಸಾಮಾನ್ಯ ವರ್ಗಕ್ಕೆ ವಿತರಣೆ ಮಾಡುವ ಶೇಂಗಾ ಬಿತ್ತನೆ ಬೀಜ 1590 ರಿಂದ 1890ಕ್ಕೆ ಏರಿಗೆ ಮಾಡಿರುವುದರಿಂದ ರೈತರು ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ನಡೆಸುತ್ತಿದ್ಧಾರೆ. ಸರ್ಕಾರ ಕೂಡಲೇ ಹೆಚ್ಚುವರಿ ದರನ್ನು ವಾಪಾಸ್ ಪಡೆಯಬೇಕೆಂದು ಅವರು ಒತ್ತಾಯ ಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕೃಷಿ ಅಧಿಕಾರಿ ಎನ್.ಮಾರುತಿ, ರೈತರಿಗೆ ಸಮಜಾಯಿಸಿ ಹೇಳಿದರಲ್ಲದೆ, ರಾಜ್ಯ ಸರ್ಕಾರವೇ ಬಿತ್ತನೆ ಜೀಜದ ದರವನ್ನು ಏರಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ರೈತರ ಪರವಾಗಿ ಮನವಿ ಮಾಡಿ, ಬೆಲೆ ಕಡಿತ ಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ಸದ್ಯದ ಸ್ಥಿತಿಯಲ್ಲಿ ದಾಸ್ತಾನು ಕಡಿಮೆ ಇದ್ದು, ರೈತರು ಸರಥಿ ಸಾಲಿನಲ್ಲಿ ನಿಂತು ಶೇಂಗಾ ಖರೀದಿಯಲ್ಲಿ ತೊಡಗಿದ್ದು, ದರವನ್ನು ಕಡಿತಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಕಿರಣ್ಕುಮಾರ್, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.