ಚಿತ್ರದುರ್ಗ;
ರಾಜೀವ್‍ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ, ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುರುಷರು ಮತ್ತು ಮಹಿಳೆಯರ ರಾಜ್ಯ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟ ಮುಕ್ತಾಯವಾಯಿತು
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಸವೇಶ್ವರ ವೈಧ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ|| ಪ್ರಶಾಂತ್ ಜಿ. ರವರು ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರೊ.ಡಾ|| ನಾರಾಯಣ ಮೂರ್ತಿ ಸಿ.ರೋಗ ವಿಧಾನಶಾಸ್ತ್ರ ವಿಭಾಗದ ಮುಖ್ಯಸ್ಥರು, ಮತ್ತು ಸಂಘಟನಾ ಕಾರ್ಯದರ್ಶಿ ಸಿ.ಅಭಯ್ ಪ್ರಕಾಶ್, ಹಾಗೂ ವಿಶ್ವವಿದ್ಯಾಲಯದ ವೀಕ್ಷಕರಾದಡಾ. ಜೋಸೆಫ್ ಅನಿಲ್ ಕುಮಾರ್, ಗೋಪಾಲ್ ಕೃಷ್ಣ ಮತ್ತು ಕುಮಾರ್‍ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ ಪ್ರಥಮ ಸ್ಥಾನ ಹಾಗೂ ಶಿವಮೊಗ್ಗ ಇನ್ಸ್‍ಟ್ಯೂಟ್‍ಆಫ್ ಮೆಡಿಕಲ್ ಸೈನ್ಸ್ ಎರಡನೇ ಸ್ಥಾನ ಪಡೆದುಕೊಂಡಿತುಮಹಿಳೆಯರ ವಿಭಾಗದಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ ಪ್ರಥಮ ಹಾಗೂ ಬೆಂಗಳೂರಿನ ಸಪ್ತಗಿರಿ ಇನ್ಸ್‍ಟಿಟ್ಯೂಟ್‍ಆಫ್ ಮೆಡಿಕಲ್ ಸೈನ್ಸ್&ರಿಸರ್ಚಕೇಂದ್ರ ಎರಡನೇ ಸ್ಥಾನ ಪಡೆದುಕೊಂಡಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
