ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಆರಂಭ

ಹೂವಿನಹಡಗಲಿ
     ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾಲೂಕು ಘಟಕದವತಿಯಿಂದ ಇಂದು ತಹಶೀಲ್ದಾರ ಕಛೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು. 
     ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳಾರವರು ಈಗಾಗಲೇ ಸರ್ಕಾರದ ಆದೇಶದಂತೆ ರಾಜ್ಯದ ಹಲವುಕಡೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ.  ಯು.ಕೆ.ಜಿ. ಆರಂಭಿಸಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಬರಬೇಕಾದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು. 
      ಈ ಬಗ್ಗೆ ನಮ್ಮ ಆಕ್ಷೇಪವೇನಿಲ್ಲ. ಆದರೆ ಈ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡುವಂತಹ ಹುನ್ನಾರ ವಿದ್ದು, ಇದನ್ನು ಖಂಡಿಸಿ ಇಂದು ನಾವು ಪ್ರತಿಭಟನೆಗೆ ಇಳಿದಿದ್ದೇವೆ ಎಂದರು. ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರುವವರೆಗೂ ಕೂಡಾ ಅಹೋರಾತ್ರಿ ಧರಣಿಯನ್ನು ನಿಲ್ಲಿಸುವುದಿಲ್ಲ ಎಂದ ಅವರು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. 
    ಸಂದರ್ಭದಲ್ಲಿ ಎ.ಐ.ಟಿ.ಯು.ಸಿ. ಶಾಂತರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಕಮಲಾಕ್ಷಿ, ಕೊಟ್ರಮ್ಮ, ದಾಕ್ಷಾಯಣಿ, ಸುನಂದ, ಪಾರ್ವತಿ, ಗಂಗಮ್ಮ, ಜಮಾಬಾಯಿ, ನಾಗರತ್ನ, ಲತಾ, ಹೇಮಾವತಿ, ಬಿ.ಜಯಲಕ್ಷ್ಮಿ, ಜೆ.ಇಂದಿರಾ, ಸೇರಿದಂತೆ ಹಲವರು ಇದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link