ಮಳವಳ್ಲಿ: ಗುದ್ದಲಿ ಪೂಜೆಗಾಗಿ ಹಾಲಿ ಮತ್ತು ಮಾಜಿ ಶಾಸಕರ ಗುದ್ದಾಟ..!!

ಮಳವಳ್ಳಿ:

    ಮಂಡ್ಯದ ಎಂದರೆ ಈಗ ಎಲ್ಲರಿಗೂ ಒಂದು ಕ್ಷಣಕ್ಕೆ ಕುತೂಹಲ ಸದಾ ರಾಜಕೀಯ ಚಟುವಟಿಕೆಗಳಿಂದ ಕೂಡಿರುವ ಜಿಲ್ಲೆ ಮತ್ತೆ  ಮೈತ್ರಿ ಪಕ್ಷಗಳ ಕಲಹದಿಂದ ಮತ್ತೆ ಸುದ್ದಿಯಾಗಿದೆ ಮಳವಳ್ಳಿಯಲ್ಲಿ ಕಾಮಗಾರಿಯೊಂದರ ಗುದ್ದಲಿ ಪೂಜೆಗೆ ಸಂಬಂಧಿಸಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಗುದ್ದಾಟ ನಡೆದಿರುವುದು ವರದಿಯಾಗಿದೆ.

   ಮಳವಳ್ಳಿ ಜೆಡಿಎಸ್‌ ಶಾಸಕ ಅನ್ನದಾನಿ ಅವರು ಕಾಮಗಾರಿಯೊಂದರ ಗುದ್ದಲಿ ಪೂಜೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಕಾಂಗ್ರೆಸ್‌ ಕಾರ್ಯಕರ್ತರು ಈ ಕಟ್ಟಡ ಗುದ್ದಲಿ ಪೂಜೆಯನ್ನು ಅಂದಿನ ಕಾಂಗ್ರೆಸ್‌ ಶಾಸಕರಾಗಿದ್ದ ನರೇಂದ್ರ ಸ್ವಾಮಿ ಅವರು ಮಾಡಿದ್ದಾರೆ ಮತ್ತೊಮ್ಮೆ ನೀವೇನು ಮಾಡುವುದು ಎಂದು ತಕರಾರು ತೆಗೆದಿದ್ದಾರೆ. ಈ ವೇಳೆ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಜಗಳ ಮಾರಾಮಾರಿಯಾಗುವುದನ್ನು ಸ್ಥಳದಲ್ಲಿದ್ದ ಪೊಲೀಸರು ನಿಯಂತ್ರಿಸಿದ್ದಾರೆ.

     ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಕಾಂಗ್ರೆಸ್‌ ನಾಯಕರ ನರೇಂದ್ರ ಸ್ವಾಮಿ ಅನ್ನದಾನಿ ಅವರ ವಿರುದ್ಧ ಸ್ವೀಕರ್‌ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link