ಜಿಲ್ಲೆಯಲ್ಲಿ 3 ಲಕ್ಷ ಸದಸ್ಯತ್ವದ ಗುರಿ : ಕೆ.ಎಸ್.ನವೀನ್

ಚಿತ್ರದುರ್ಗ:

      ಸಂಘಟನಾ ಪರ್ವ ಬಿಜೆಪಿ.ಸದಸ್ಯತ್ವ ಅಭಿಯಾನ ಜು.6 ರಿಂದ ಆರಂಭಗೊಂಡು ಆ.11 ರವರೆಗೆ ರಾಷ್ಟ್ರಾದ್ಯಂತ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದೆಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.

       ಬಿಜೆಪಿ.ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿರವರು ಸ್ವಕ್ಷೇತ್ರ ವಾರಣಾಸಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು. ಕೇಂದ್ರ ಗೃಹ ಸಚಿವ ಅಮಿತ್‍ಷಾ ತೆಲಂಗಾಣದಲ್ಲಿ ಚಾಲನೆ ನೀಡಿದರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿ.ಕಚೇರಿಯಲ್ಲಿ ಸದಸ್ಯತ್ವ ಅಭಿಯಾನ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಸಂಜೆ ಐದಕ್ಕೆ ಉದ್ಘಾಟನೆಗೊಳ್ಳುವ ಬಿಜೆಪಿ.ಸದಸ್ಯತ್ವ ಅಭಿಯಾನಕ್ಕೆ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ ಆಗಮಿಸಲಿದ್ದಾರೆ.

     ಸಾಥ್ ಆಯೇ ದೇಶ್ ಬನಾಯೇ ಎಂಬ ಧೋರಣೆಯೊಂದಿಗೆ ಚಾಲನೆಗೊಳ್ಳಲಿರುವ ಬಿಜೆಪಿ.ಸದಸ್ಯತ್ವ ಅಭಿಯಾನದಲ್ಲಿ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕೆಂಬುದು ಪ್ರಧಾನಿಯರವರ ಮಹದಾಸೆಯಾಗಿರುವುದರಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.

       ಕಳೆದ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಲಕ್ಷದ ಎಂಬತ್ತೈದು ಸದಸ್ಯರ ನೊಂದಣಿಯಾಗಿತ್ತು. ಈ ಬಾರಿ ಸದಸ್ಯತ್ವ ನವೀಕರಣ ಹಾಗೂ ಹೊಸ ನೊಂದಣಿಯೊಂದಿಗೆ ಮೂರು ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೊಂದಣಿ ಮಾಡುವುದಷ್ಟೆ ನಮ್ಮ ಉದ್ದೇಶವಲ್ಲ. ಪ್ರತಿ ಬೂತ್‍ನಲ್ಲಿಯೂ ಹತ್ತು ಸಸಿಗಳನ್ನು ನೆಡುವುದು, ಜಲಸಂರಕ್ಷಣೆಗೆ ಒತ್ತು ನೀಡುವುದಕ್ಕಾಗಿ ಬೋರ್‍ವೆಲ್‍ಗಳು ಎಲ್ಲೆಲ್ಲಿದೆಯೋ ಅಲ್ಲೆಲ್ಲಾ ಪಕ್ಕದಲ್ಲಿ ಗುಂಡಿ ತೆಗೆದು ನೀರು ಇಂಗಿಸುವಂತೆ ಮಾಡುವುದು, ಕೊಳಗೇರಿ ಪ್ರದೇಶ, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕೈಗೊಳ್ಳಲಾಗುವುದು.

       ದೇಶದ ಏಕತೆಗೆ ಪ್ರಾಣತ್ಯಾಗ ಮಾಡಿದ ಪಕ್ಷದ ಸಂಸ್ಥಾಪಕ ಶ್ಯಾಂಪ್ರಸಾದ್ ಮುಖರ್ಜಿರವರ ಜನ್ಮದಿನದ ಅಂಗವಾಗಿ 45 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ ಎಂದು ನುಡಿದರು.ಸದಸ್ಯತ್ವ ಅಭಿಯಾನಕ್ಕೆ ಏಳು ದಿನಗಳ ಕಾಲ ಪೂರ್ಣಾವಧಿ ಸಮಯ ನೀಡಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಒಂದು ಬೂತ್‍ನಲ್ಲಿ ಇನ್ನೂರು ಸದಸ್ಯರುಗಳನ್ನು ಮಾಡುವ ಜವಾಬ್ದಾರಿ ಕಾರ್ಯಕರ್ತರುಗಳಿಗೆ ನೀಡಲಾಗಿದೆ.

        ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸಿದ ಮತದಾರರಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿ ಪಕ್ಷದ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಿ ಹೊಸ ಮತದಾರರ ಕಡೆಯೂ ಹೆಚ್ಚಿನ ಗಮನ ಕೊಡಲಾಗುವುದು. ಜು.ಏಳರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತ್ವಕ್ಕೆ ಚಾಲನೆ ನೀಡಲಾಗುವುದು. ಎಲ್ಲಾ ಜಿ.ಪಂ.ಕ್ಷೇತ್ರಗಳಲ್ಲಿ.

       8 ರಂದು ಬೆಳಿಗ್ಗೆ ಗ್ರಾ. ಪಂ.ಗಳಲ್ಲಿ ಅಭಿಯಾನ ಉದ್ಘಾಟನೆಗೊಳ್ಳಲಿದೆ. 6 ರ ಇಂದು ಗಾಂಧಿವೃತ್ತದ ಮೂಲಕ ಆನೆಬಾಗಿಲಿಗೆ ಹೋಗಿ ಅಲ್ಲಿ ದೇವಸ್ಥಾನದ ಮುಂಭಾಗವಿರುವ ಜಾಗದಲ್ಲಿ ಗಿಡ ನೆಡಲಾಗುವುದು ಎಂದು ಹೇಳಿದರು.ಬಿಜೆಪಿ.ಡೇಟಾ ಬೇಸ್ ಗಟ್ಟಿಗೊಳಿಸಿ ಸದಸ್ಯರ ಮಾಹಿತಿ ಪಡೆಯಲು ಹೊಸ ಕಾಲ್ ಸೆಂಟರ್ ಕೂಡ ಉದ್ಘಾಟನೆಗೊಳ್ಳುತ್ತದೆ. ಸದಸ್ಯತ್ವ ಆಧಾರದ ಮೇಲೆ ಪಕ್ಷದ ಆಂತರಿಕ ಚುನಾವಣೆ ನಡೆಯಲಿದೆ. ಬೂತ್ ಅಧ್ಯಕ್ಷರ ನೇಮಕ, ನಂತರ ಶಕ್ತಿ ಕೇಂದ್ರ ಅಧ್ಯಕ್ಷರು, ಮಂಡಲ, ತಾಲೂಕು ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ನಂತರ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link