ಹಾವೇರಿ:
ಅಂಗನವಾಡಿ ಕಾರ್ಯಕರ್ತೆರ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು, ಸಂಘಟನೆಯ ಪದಾಧಿಕಾರಿಗಳ ಸಭೆ ನಿಗದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಹೋರಾಟಗಾರರಿಗೆ ಭರವಸೆ ನೀಡಿದರು.
ಶುಕ್ರವಾರ ಹಾಗೂ ಶನಿವಾರದಂತ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ ವೇಳೆ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂಧಿಸಿದ್ದು, ಧರಣಿ ನಿರತರ ಬೇಡಿಕೆಗಳ ಈಡೇಕೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವದು.
ಮಹಿಳೆಯರು ಹಗಲು – ರಾತ್ರಿ ಧರಣಿ ನಡೆಸಿದ್ದಿರ್ರಿ. ನಿಮ್ಮ ಹೋರಾಟದ ಕೆಲವು ಬೇಡಿಕೆಗಳು ರಾಜ್ಯ ಮಟ್ಟದಲ್ಲಿ ಈಡೇರಿಸಬೇಕಾ ದಂತವುಗಳು ಇವೆ. ಅಂತಹ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವೆ. ಸ್ಥಳೀಯ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳ ಮುಖಂಡತ್ವದಲ್ಲಿ ಸಭೆ ಕರೆಯಲಾಗುವದು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಮಳೆಯನ್ನು ಲೆಕ್ಕಿಸದೇ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಗಲು-ರಾತ್ರಿ ಹೋರಾಟ ನಡೆಸಿದ್ದಿರ್ರಿ. ಆ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಜಿಲ್ಲಾ ಪಂಚಾಯತ ಮಟ್ಟದಲ್ಲಿ ಇರುವ ಬೇಡಿಕೆಗಳನ್ನು ಈಡೇರಿಸಲಾಗುವದು ಎಂದು ತಿಳಿಸಿದರು.
ಬಳಿಕ ಸಂಘಟನೆಯ ಪದಾಧಿಕಾರಿಗಳು ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಎಐಟಿಯುಸಿ ಹೊನ್ನಪ್ಪ ಮರೆಮ್ಮನವರ.ಪ್ರಧಾನ ಕಾರ್ಯದರ್ಶಿ ಜಿ.ಡಿ.ಪೂಜಾರ, ಸಂಚಾಲಕರಾದ ಸುನಂದಮ್ಮ ರೇವಣಕರ, ಲಲಿತಾ ನಾಗನಗೌಡ್ರ, ಜಯಮ್ಮ ದೇಸಳ್ಳಿ, ಶೀವಲೀಲಾ ಪಾಟೀಲ, ಗುರುನಾಥ ಲಕಮಾಪೂರ, ಬೇಬಿ ನಡುವಿನಮಠ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯವೃಂದದವರು ಪಾಲ್ಗೊಂಡಿದ್ದರು.