ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ

ಹಾವೇರಿ :

    ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಪ್ರಾರಂಭಿಸುವಂತೆ, ಬಾಕಿ ಗೌರವಧನ ಹಾಗೂ ಕೇಂದ್ರ ಸರ್ಕಾರದಿಂದ 2018 ಅಕ್ಟೋಬರ್‍ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ರಿ)ಸಿಐಟಿಯು ಸಂಯೋಜಿತ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ ರಾಜ್ಯದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಅಂಗನವಾಡಿಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಯೋಜನೆಯನ್ನು ಸಬಲೀಕರಿಸುವ ಬದಲಿಗೆ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ದಾಖಾಲಾತಿಯನ್ನು ಹೆಚ್ಚಿಸಲು ಅಂಗನವಾಡಿ ಕೇಂದ್ರದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸರ್ಕಾರಿ ಶಾಲೆಗಳು ನಿರ್ವಹಿಸುವುದು ಪ್ರಾಯೋಗಿಕವಲ್ಲ. ಆದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿಯೇ ಪ್ರಾರಂಭಿಸಬೇಕು.

     ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು ಹಲವು ಬಾರಿ ಮನವಿ ಪತ್ರಗಳು, ಹೋರಾಟಗಳು, ಜಂಟೀ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಪ್ರಮುಖ ಬೇಡಿಕೆಗಳಿಗೆ ಸೂಕ್ತ ಪರಿಹಾರ ಸಿಗದಿರುವುದು ದುರಾದೃಷ್ಟಕರವಾಗಿದೆ. ಆದ್ದರಿಂದ ವಿವರವಾಧ ಬೇಡಿಕೆಗಳನ್ನು ಪುನಃ ಸರ್ಕಾರಕ್ಕೆ ಸಲ್ಲಿಸುತ್ತಿದ್ದೇವೆ.

    ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು.45 ಎಲ್.ಐ.ಸಿ ಯ ಶಿಫಾರಸ್ಸಿನ ಪ್ರಕಾರ 18,000 ಕನಿಷ್ಠ ವೇತನ ಜಾರಿ ಮಾಡಬೇಕು. ದಿನಕ್ಕೆ 6-30 ಘಂಟೆ ಕೆಲಸ ಮಾತೃಪೂರ್ಣ ಮುಂತಾದ ಕೆಲಸ ಹೊರೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತೊಂದಡೆ ಬೆಲೆಯೇರಿಕೆ, ಮಾತ್ರವಲ್ಲದೆ ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ ರಾಜ್ಯಗಳಲ್ಲಿ 11 ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಕೂಡಾ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನವನ್ನು ನಿಗದಿಪಡಿಸಬೇಕು ಎಂದು ವಿನಾಯಕ ಕುರುಬರ ಸರ್ಕಾರವನ್ನು ಒತ್ತಾಯಿಸಿದರು.

     ಅಂಗನವಾಡಿ ನೌಕರರ ಸಂಘದ ಮುಖಂಡರಾದ ಉಮಾ ಪಾಟೀಲ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.ಮಾತೃಪೂರ್ಣ ಯೋಜನೆಯ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ 75% ಸಹಾಯಕಿಯರಿಗೂ ಕೊಡಬೇಕು.

      ಅಂಗನವಾಡಿ ಕೇಂದ್ರದ ಪಲಾನುಭವಿಗಳಿಗೆ ನೇರ ನಗದು ವರ್ಗಾವಣೆಯನ್ನು ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ತಮ್ಮ ಬೇಡಿಕೆಗಳನ್ನು ಇಡೇರಿಸುವಂತಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಹೇಮಾ ಆಸಾದಿ.ಹೇಮಾವತಿ ಎಲಿ.ಗೌರಮ್ಮ ನಾಯ್ಕರ.ಪರಮೇಶ್ವರಿ ಮದ್ಯಾನ್ಹಾದ.ಶಶಿಕಲಾ ಪುರಾಣಿಕಮಠ.ಕವಿತಾ ನಾಡಗೇರ.ಜ್ಯೋತಿ ಕದರಮಂಡಲಗಿ.ಮಲ್ಲಮ್ಮ ಛಲವಾದಿ. ಸಿಐಟಿಯು ಮುಖಂಡರಾದ ಮಹಾಂತೇಶ ಎಲಿ.ವ್ಹಿಕೆ ಬಾಳಿಕಾಯಿ.ಎಸ್‍ಎಫ್‍ಐ ಮುಖಂಡ ಬಸವರಾಜ ಭೋವಿ.ಸಾಮಾಜಿಕ ಪರಿವರ್ತನಾ ಜನಾದೋಲನದ ಸಂಚಾಲಕರಾದ ಹಸೀನಾ ಹೇಡಿಯಾಲ.ಡಿವೈಎಫ್‍ಐ ಮುಖಂಡ ಮುಕ್ತಾನಂದ ಹಿರೇಮನಿ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link