ಕೊಟ್ಟೂರು
ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಮತ್ತು ಇಸ್ಪೇಟ್, ಮಟ್ಕ ದಂಧೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಂಡು ಗಡಿಪಾರ ಮಾಡಲಾಗುವುದು ಎಂದು ಪಿಎಸ್ಐ ಎ. ಕಾಳಿಂಗ ಎಚ್ಚರಿಕೆ ನೀಡಿದ್ದಾರೆ.ಉಜ್ಜಿನಿ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಕರೆದಿದ್ದ ಸಾರ್ವಜನಿಕ ಮತ್ತು ಟ್ಯಾಕ್ಟರ್ ಮಾಲಿಕರು ಮತ್ತು ಚಾಲಕರ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದರು. ಅಕ್ರಮವಾಗಿ ಮರಳು ಸಾಗಾಣಿಕೆ ಮತ್ತು ಸಂಗ್ರಹ ಮಾಡುವುದುನ್ನು ಜಿಲ್ಲಾಡಳಿತ ನಿಷೇದಿಸಿದೆ. ಅದರೂ ಕಾನೂನು ಮೀರಿ ನಡೆದುಕೊಂಡರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಂಡು ಅಗತ್ಯ ಬಿದ್ದರೆ ಗಿಡಪಾರು ಮಾಡಲಾಗುವುದು ಎಂದರು.
ಇದೇ ರೀತಿ ಇಸ್ಪೀಟ್ ಮತ್ತು ಮಟ್ಕ ದಂಧೆ ನಡೆಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಅಡ್ಡೆ ಈರಣ್ಣ, ಅಂಜಿನಪ್ಪ, ಗುಡ್ಡದ ರಾಜಣ್ಣ, ಲೋಕಪ್ಪ, ನಾಗರಾಜ್, ಪೊಲೀಸ ಮುಖ್ಯ ಪೇದೆ ತಿಪ್ಪೇಸ್ವಾಮಿ, ಪೊಲೀಸರಾದ ಚಿದಾನಂದ, ಮಂಜುನಾಥ್, ಅನಿಲ್ ಕುಮಾರ್ ಇದ್ದರು.