ಸಮೃದ್ಧ ಮಳೆ-ಬೆಳೆಗಾಗಿ ವಿಶೇಷ ಪೂಜೆ

ದಾವಣಗೆರೆ :

     ಸಮೃದ್ಧ ಮಳೆ, ಬೆಳೆಗೆ ಪ್ರಾರ್ಥಿಸಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಸಂಘ, ಕರ್ನಾಟಕ ಸಮರ ಸೇನೆ, ಅಖಿಲ ಕರ್ನಾಟಕ ಡಾ.ಶಿವರಾಜ ಕುಮಾರ್ ಹಾಗೂ ರಾಜರತ್ನ ಪುನಿತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶುಕ್ರವಾರ ನಗರ ದೇವತೆ ದುರ್ಗಾಂಭಿಕೆಗೆ ವಿಶೇಷ ಪೂಜೆ ಸಲ್ಲಿಸಿದರು.

     ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಜನ, ಜಾನುವಾರು, ಪಕ್ಷಿ ಸಂಕುಲ ಹಾಗೂ ಬೆಳೆಗಳು ನೀರಿಲ್ಲದೆ ಸೊರಗುತ್ತಿವೆ. ಆಷಾಢ ಮಾಸದಲ್ಲಿ ಸಹಜವಾಗಿ ಉತ್ತಮ ಮಳೆ ಸುರಿದು ಹೊಲಗಳಲ್ಲಿ ರೈತರು ಬೆಳೆ ಇಡುವ ದಿನಗಳಾಗಿದ್ದರೂ ಮಳೆ ಅಭಾವದಿಂದ ಸಂಕಷ್ಟ ಎದುರಿಸುವ ಸ್ಥಿತಿ ಬಂದೊದಗಿದೆ. ಇಂತಹ ಸಂಕಷ್ಟ ದೂರವಾಗಲಿ, ವರುಣ ಕೃಪೆ ತೋರಲಿ ಎಂದು ದೇವಿಯಲ್ಲಿ ಮೊರೆ ಇಟ್ಟರು.

     ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಗೌಡ್ರ ಚನ್ನಬಸಪ್ಪ, ಕರ್ನಾಟಕ ಸಮರ ಸೇನೆ ರಾಜ್ಯ ಗೌರವಾಧ್ಯಕ್ಷ ಡಿ.ಬಸವರಾಜ್, ಕರ್ನಾಟಕ ಸಮರಸೇನೆ ರಾಜ್ಯ ಕಾರ್ಯಧ್ಯಕ್ಷ ಬಿ.ವಾಸುದೇವ್, ಸಮರಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂದೂರು ಪರಮೇಶ್, ರಾಜ್ಯವಕ್ತಾರ ವಿಜಯ್‍ಜಾಧವ್, ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮುಜೀದ್, ರಾಜ್ಯ ಕಾರ್ಯದರ್ಶಿ ಉಮೇಶ್ ಪಾಟೀಲ್, ಕೋಟೆಹಾಳ್ ಸಿದ್ದೇಶ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ವೈ.ಭಾಗ್ಯದೇವಿ, ರವಿಚಂದ್ರನ್ ಅಭಿಮಾನಿಗಳ ಬಳಗದ ಎಂ.ಮನು, ಅಖಿಲ ಕರ್ನಾಟಕ ಡಾ.ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಯೋಗೀಶ್, ಮಧುಮತಿ, ಕವಿತಾಕುಬಸದ್, ಜಿ.ಪಿ.ಪ್ರಕಾಶ್, ಲಕ್ಷ್ಮಿದೇವಿ, ವಿದ್ಯಾಮಂಜುನಾಥ್, ಸಾವಿತ್ರಮ್ಮ ತನ್ವೀರ್, ತಿಪ್ಪೇಸ್ವಾಮಿ ಹಿಂಡಸಘಟ್ಟ, ಅಂಜಿನಿ, ಪರಶುರಾಮ, ಶಶಿನಾಯಕ, ಶಿವಕುಮಾರ್, ನವೀನ್‍ಕುಮಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link