ಕಾರ್ಮಿಕರು ಹೋರಾಟಕ್ಕೆ ಸಜ್ಜಾಗಿ :ಬಿ.ಗೋಪಾಲ ಗೌಡ

ಬೆಂಗಳೂರು

      ಕಾರ್ಮಿಕರ ಮೇಲಿನ ಶೋಷಣೆ, ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಪಡೆಯಲು ಯಾವ ರೀತಿಯ ಹೋರಾಟ ನಡೆದಿತ್ತು ಅಂತಹದೇ ಹೋರಾಟಕ್ಕೆ ಕಾರ್ಮಿಕರು ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಬಿ.ಗೋಪಾಲ ಗೌಡ ಅವರು ತಿಳಿಸಿದ್ದಾರೆ.

      ಶಾಸಕರ ಭವನದ ವಿಧಾನ ಪರಿಷತ್ ಸಭಾಂಗಣದಲ್ಲಿ ಸಾಮಾಜಿಕ ಸುರಕ್ಷ (ಸಂಹಿತೆ) ಕಲ್ಯಾಣ ಮಸೂದೆ 2018 ಹಾಗೂ ಕಟ್ಟಡ ಕಾರ್ಮಿಕ ಕಾನೂನು 1996 ಹಾಗೂ ಸೆಸ್ ಕಾನೂನು 1996 ಮತ್ತು ಕಾರ್ಮಿಕರ ಬದುಕಿನ ಮೇಲೆ ಅದರ ಪರಿಣಾಮಗಳು ಕುರಿತಂತೆ ನಡೆದ ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರ ನ್ಯಾಯಯುತ ಹಕ್ಕುಗಳನ್ನು ಕಸಿದುಕೊಳ್ಳುವ ಬಂಡವಾಳ ಶಾಹಿಗಳ ಹುನ್ನಾರದ ವಿರುದ್ಧ ಕಾರ್ಮಿಕರು ಗಟ್ಟಿತನದಿಂದ ಎದುರಿಸಬೇಕು ಎಂದರು.

     ಕಾರ್ಮಿಕರನ್ನು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಲಹೀನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಬಂಡವಾಳ ಶಾಹಿಗಳು ಕಾರ್ಮಿಕರ ಶಕ್ತಿಯನ್ನು ಬಲಹೀನಗೊಳಿಸಿ ಕಾರ್ಮಿಕರ ಕಾಯ್ದೆಯನ್ನು ಕ್ಷೀಣಗೊಳಿಸುವ ಹುನ್ನಾರಗಳನ್ನು ನಡೆಸುತ್ತಿದ್ದಾರೆ. ಸಂಸತ್ತಿನಲ್ಲಿ ಕೈಗಾರಿಕೋದ್ಯಮಿಗಳ ಹಿತವನ್ನು ರಕ್ಷಿಸುವ ಸದಸ್ಯರು ಇದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

      ಬಂಡವಾಳ ಶಾಹಿಗಳು ಮತ್ತು ಕಾರ್ಮಿಕರ ಸಂಬಂಧ ಗಂಡ ಹೆಂಡತಿಯರ ಸಂಬಂಧ ಇದ್ದಂತೆ ಸೌಹಾರ್ಧಯುತವಾಗಿರಬೇಕು. ಆದರೆ ಬಂಡವಾಳವನ್ನು ಮುಂದಿಟ್ಟುಕೊಂಡು ಸಾವಿರಾರು ವರ್ಷಗಳಿಂದ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

     ತಮ್ಮ ಮೇಲೆ ಬಂಡವಾಳ ಶಾಹಿಗಳು ನಡೆಸುವ ಶೋಷಣೆ ದಬ್ಬಾಳಿಕೆಯನ್ನು ತಡೆಗಟ್ಟಲು ಕಾರ್ಮಿಕರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಬಂಡವಾಳ ಶಾಹಿಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಒಡ್ಡಲು ಸಜ್ಜಾಗಬೇಕು ಹಲವೆಡೆ ಕಾರ್ಮಿಕರ ಸಂಘಟನೆಗಳನ್ನು ತೆಗೆದುಹಾಕಲಾಗುತ್ತಿದೆ. 72 ವರ್ಷಗಳಿಂದ ಅಧಿಕಾರ ನಡೆಸಿದ ಸರ್ಕಾರಗಳು ಕಾರ್ಮಿಕರಿಗೆ ಮಾಡಿದ್ದೇನು ಎಂದು ಪ್ರಶ್ನಿಸಿದರು.ಸಾಕಷ್ಟು ಮಂದಿ ಕಾರ್ಮಿಕರಿಗೆ ಮನೆಯಿಲ್ಲ, ಕೆಲಸ ಮಾಡುವ ಜಾಗದಲ್ಲಿ ಶೌಚಾಲಯವಿಲ್ಲ,

      ಅವರ ಮಕ್ಕಳಿಗೆ ಶಾಲೆಗಳಿಲ್ಲ ಬೆಟ್ಟದಷ್ಟು ಕಾರ್ಮಿಕರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಇನ್ನೊಂದು ಸಂಹಿತೆ ಮಾಡಲು ಹೊರಟಿರುವುದನ್ನು ವಿರೋಧಿಸಿದರು.ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಿವೃತ್ತ ಜಂಟಿ ಕಾರ್ಮಿಕ ಆಯುಕ್ತ ವಸಂತ ಕುಮಾರ್, ಇಟ್ಟಣಗಿ, ಎನ್‍ಸಿಸಿ ಸಿಎಲ್, ನ್ಯಾಷನಲ್ ಕೋ ಆರ್ಡಿನೇಟರ್ ಸುಭಾಷ್ ಭಟ್ನಾಗರ್, ಸಿವಿಕ್‍ನ ಕಾತ್ಯಾಯಿನಿ ಚಾಮರಾಜ್ ಅವರು ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link