ಮಗುವನ್ನು ಕೊಂದು ತಲೆಮರಿಸಿಕೊಂಡಿದ್ದ ರೌಡಿ ಬಂಧನ..!!!

ಬೆಂಗಳೂರು

   ಹಣದಾಸೆಗಾಗಿ 5 ವರ್ಷದ ಮೂಕ ಅಂಗವಿಕಲ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿ ಮಹೇಶ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

   ರಾಜಾಜಿನಗರದ ಬಾಷ್ಯಂ ಸರ್ಕಲ್‍ನ ಮಹೇಶ್ ಮಾಗಡಿ ರಸ್ತೆ ಪೊಲೀಸ್ ಠಾಣೆ ರೌಡಿ ಪಟ್ಟಿಯಲ್ಲಿದ್ದು 50 ಸಾವಿರ ರೂಗಳ ಆಸೆಗಾಗಿ 5 ವರ್ಷದ ಅಂಗವಿಕಲ ಮೂಕ ಬಾಲಕ ಬಸವರಾಜುವನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

   ನಗರದಲ್ಲಿ ರೌಡಿಗಳು ಹಳೆ ಆರೋಪಿಗಳ(ಎಂಒಬಿ)ಗಳ ಮೇಲೆ ನಿಗಾವಹಿಸಿ ಆಟೋ ಚಾಲಕನಾಗಿದ್ದ ರೌಡಿ ಮಹೇಶ್ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಹಣದಾಸೆಗೆ ಬಾಲಕನನ್ನು ಕೊಲೆ ಮಾಡಿಕೊಂಡಿರುವನ್ನು ತಿಳಿಸಿದ್ದಾನೆ.ರೌಡಿ ಮಹೇಶ್ ಆಟೋ ಚಲಾಯಿಸುವಾಗ ಒಂದೂವರೆ ತಿಂಗಳ ಹಿಂದೆ ದಾವಣಗೆರೆ ಮೂಲದ ಗಾರೆ ಕೆಲಸ ಮಾಡುವ ಜಯಪ್ಪ ಎಂಬುವರ ಪರಿಚಯವಾಗಿದೆ ಈ ವೇಳೆ ಮಹೇಶ್‍ಗೆ ಜಯಪ್ಪ ನನಗೆ 4 ಜನ ಮಕ್ಕಳಿದ್ದು ಅದರಲ್ಲಿ 3ನೇಯವನಾದ ಬಸವರಾಜು 5 ವರ್ಷದವನಾಗಿದ್ದಾನೆ.

     ಆತ ಅಂಗವಿಕಲವಾಗಿದ್ದು, ಮಾತನಾಡಲು ಮತ್ತು ನಡೆದಾಡಲು ಬರುವುದಿಲ್ಲ ಆತನಿಗೆ ನಿಮಾನ್ಸ್ ಇನ್ನಿತರ ಆಸ್ಪತ್ರೆಗಳಲ್ಲಿ ಚಿಕತ್ಸೆ ಕೊಡಿಸಿದರೂ ಗುಣಮುಖವಾಗಿರುವುದಿಲ್ಲ.ಆತನ ಚಿಕಿತ್ಸೆಗಾಗಿ ಸುಮಾರು ಹಣ ಖರ್ಚು ಮಾಡಿದ್ದು, ಮುಂದೆ ಆತನಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣ ಇರುವುದಿಲ್ಲ ಏನಾದರೂ ಮಾಡಬೇಕು ಎಂದು ತಿಳಿಸಿದ್ದಾರೆ ಆಗ ರೌಡಿ ಮಹೇಶ್ ಮಗುವನ್ನು ಇಂಜೆಕ್ಷನ್ ಕೊಟ್ಟು ನೋವಿಲ್ಲದೇ ಸಾಯಿಸುವುದಾಗಿ ಅದಕ್ಕೆ 50 ಸಾವಿರ ರೂ ಹಣವನ್ನು ನೀಡುವಂತೆ ಕೇಳಿದ್ದು, ಮಗುವಿನ ತಂದೆ ಜಯಪ್ಪ ಆರೋಪಿ ಮಹೇಶ್‍ಗೆ ಕೆಲಸ ಮುಗಿಸಿದ ಮೇಲೆ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ.

    ಅದರಂತೆ ಮಹೇಶ್ ಒಂದೂವರೆ ತಿಂಗಳ ಹಿಂದೆ ಮಗು ಬಸವರಾಜುನನ್ನು ಜಯಪ್ಪನ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮಗುವಿನ ತಂದೆ ಮಗುವನ್ನು ಗೊರಗುಂಟೆ ಪಾಳ್ಯದಲ್ಲಿರುವ ಸ್ಮಾಶಾನದಲ್ಲಿ ಮಗುವಿನ ಶವಸಂಸ್ಕಾರ ಮಾಡಿರುವುದು ವಿಚಾರಣೆ ತಿಳಿದು ಬಂದಿರುತ್ತದೆ.

   ಕೃತ್ಯವೆಸಗಿದ ರೌಡಿ ಮಹೇಶ್ ಹಾಗೂ ಮಗುವನ್ನು ಕೊಲೆ ಮಾಡಲು ಹೇಳಿದ ತಂದೆ ಜಯಪ್ಪನನ್ನು ಬಂಧಿಸಿ ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರ ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಸಿಸಿಬಿಯ ಎಸಿಬಿ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿಗಳಾದ ಸತೀಶ್.ಧನಂಜಯ,.ಹನುಮೇಶಿ ಹಾಗೂ ಅರುಣ್ ರವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link