ಆನೆಗೆ ಬಿಯರ್ ಕುಡಿಸಿದ ಕಿಡಿಗೇಡಿ: ಮುಂದೇನಾಯ್ತು ಗೊತ್ತಾ….?

ಕೀನ್ಯಾ:

    ಇತ್ತೀಚೆಗೆ ಪ್ರಾಣಿ ಹಿಂಸೆ ವ್ಯಾಪಕವಾಗಿ ಚರ್ಚಿಸಲ್ಪಡುವ ವಿಷಯವಾಗಿದೆ. ಉದ್ದೇಶಪೂರ್ವಕವಾಗಿ ನಿಂದನೆ ಮಾಡುವುದು, ನಿರ್ಲಕ್ಷ್ಯ ಮತ್ತು ಪ್ರಾಣಿಗಳ ಮೇಲೆ ಕ್ರೂರ ನಡವಳಿಕೆ ತೋರುವುದು ಪ್ರಾಣಿ ಹಿಂಸೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಕ್ರೌರ್ಯದ ವಿಡಿಯೊಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ತಮ್ಮ ಮನರಂಜನೆಗೋಸ್ಕರ ಮೂಕ ಪ್ರಾಣಿಗಳಿಗೆ ಕೆಲವರು ಹಿಂಸೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಗಂಭೀರ ಕಾನೂನು ಪರಿಣಾಮಗಳನ್ನು ಎದುರಿಸಬಹುದು. ಇತ್ತೀಚೆಗೆ ಕೀನ್ಯಾದಲ್ಲಿ ಜಂಗಲ್ ಸಫಾರಿ ಸಮಯದಲ್ಲಿ ಪ್ರವಾಸಿಗರೊಬ್ಬರು ಆನೆಯ ಸೊಂಡಿಲಿಗೆ ಬಿಯರ್ ಸುರಿಯಲು ಪ್ರಯತ್ನಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. 

   ವ್ಯಕ್ತಿಯೊಬ್ಬ ಬಿಯರ್ ಕುಡಿದಿದ್ದಾನೆ. ಈ ವೇಳೆ ಎದುರಿದ್ದ ಆನೆಗೂ ಬಿಯರ್ ಕುಡಿಸಿದ್ದಾನೆ. ಆನೆಯ ಸೊಂಡಿಲಿಗೆ ಬಿಯರ್ ಸುರಿಯುವ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಇದು ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಸಿ ಈ ವಿಡಿಯೊವನ್ನು ತನಿಖೆ ಮಾಡಿ ಅದರ ಸತ್ಯಾಸತ್ಯತೆಯನ್ನು ದೃಢಪಡಿಸಿತು. ಇದನ್ನು ಕಳೆದ ವರ್ಷ ಲೈಕಿಪಿಯಾದ ಸೆಂಟ್ರಲ್ ಕೌಂಟಿಯಲ್ಲಿರುವ ಓಲ್ ಜೋಗಿ ಕನ್ಸರ್ವೆನ್ಸಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

   ವಿಡಿಯೊ ಬಗ್ಗೆ ಅನೇಕ ಮಂದಿ ಕಳವಳ ವ್ಯಕ್ತಪಡಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಓಲ್ ಜೋಗಿ ಕನ್ಸರ್ವೆನ್ಸಿ, ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಮತ್ತು ವಿಡಿಯೊದಲ್ಲಿರುವ ಆನೆ ಆರೋಗ್ಯಕರವಾಗಿದೆ ಎಂದು ಹೇಳಿದೆ. ವಿಡಿಯೊದಲ್ಲಿರುವ ಆನೆ ಹೆಸರು ಬುಪಾ ಎಂದು. ಇದು ಕಳೆದ ಹಲವು ವರ್ಷಗಳಿಂದ ಓಲ್ ಜೋಗಿಯಲ್ಲಿ ವಾಸಿಸುತ್ತಿದೆ. ಆದರೆ ವ್ಯಕ್ತಿಯ ಈ ನಡವಳಿಕೆ ಸ್ವೀಕಾರ್ಹವಲ್ಲ, ಇದು ಅಪಾಯಕಾರಿ ಎಂದು ಹೇಳಿದೆ. ಇಂತಹ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆರೈಕೆಯಲ್ಲಿರುವ ಪ್ರಾಣಿಗಳ ಯೋಗಕ್ಷೇಮ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

   ಇನ್ನು ಈ ಬಗ್ಗೆ ಮಾತನಾಡಿದ ಸಂರಕ್ಷಣಾ ಸಂಸ್ಥೆಯ ಸಿಬ್ಬಂದಿ, ಈ ಘಟನೆ ಸಂಭವಿಸಬಾರದಿತ್ತು. ನಾವು ಸಂರಕ್ಷಣಾವಾದಿಗಳು. ಇಂತಹ ಘಟನೆಯನ್ನು ನಡೆಯಲು ನಾವು ಬಿಡುವುದಿಲ್ಲ. ಆನೆಗಳ ಹತ್ತಿರ ಹೋಗಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

   ಬಿಬಿಸಿ ಪ್ರಕಾರ, ವಿಡಿಯೊದಲ್ಲಿರುವ ಆನೆಯನ್ನು ಬೂಪಾ ಎಂದು ಗುರುತಿಸಲಾಗಿದೆ. ಇದು ಸ್ವಲ್ಪ ಹಾನಿಗೊಳಗಾದ ದೊಡ್ಡ ಹಾಗೂ ಉದ್ದನೆಯ ದಂತವನ್ನು ಹೊಂದಿದೆ. ಅಭಯಾರಣ್ಯಕ್ಕೆ ಭೇಟಿ ನೀಡುವವರಿಗೆ ಚಿರಪರಿಚಿತವಾಗಿರುವ ಬೂಪಾವನ್ನು 1989 ರಲ್ಲಿ ಜಿಂಬಾಬ್ವೆಯಲ್ಲಿ ಸಾಮೂಹಿಕವಾಗಿ ಆನೆಗಳನ್ನು ಕೊಂದ ನಂತರ ರಕ್ಷಿಸಲಾಯಿತು. ಅದರ ಎಂಟನೇ ವಯಸ್ಸಿನಲ್ಲಿ ಕನ್ಸರ್ವೆನ್ಸಿಗೆ ಕರೆತರಲಾಯಿತು. ಅಂದಿನಿಂದ, ಓಲ್ ಜೋಗಿಯ ಸಂರಕ್ಷಣೆಯಲ್ಲಿದೆ.

Recent Articles

spot_img

Related Stories

Share via
Copy link