ಹೈದರಾಬಾದ್:
ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ವಿಚಿತ್ರ ಮಳೆಯಾಗಿದ್ದು, ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದರೆ ಮತ್ತೊಂದು ಭಾಗದಲ್ಲಿ ಮಳೆಯೇ ಇಲ್ಲ.. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್ ನ ಮುರದ್ ನಗರದಲ್ಲಿ ಈ ವಿಚಿತ್ರ ಮಳೆಯಾಗಿದ್ದು, ನಿನ್ನೆ ರಾತ್ರಿ ಮುರದ್ ನಗರದ ಪ್ರಮುಖ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ. ಹೈದರಾಬಾದ್ ವೆದರ್ ಟಿವಿ ವರದಿ ಮಾಡಿರುವಂತೆ ಇದು ಅಪರೂಪದ ಪ್ರಕೃತಿ ವಿದ್ಯಮಾನವಾಗಿದ್ದು, ಸ್ಥಳೀಯ ತಾಪನ ಮತ್ತು ಹೆಚ್ಚಿದ ವಾಯು ಒತ್ತಡದಿಂದಾಗಿ ರೂಪುಗೊಂಡ ಕ್ಯುಮುಲಸ್ ಮೋಡಗಳು ಒಂದು ಪ್ರದೇಶದಲ್ಲಿ ಮಾತ್ರ ಮಳೆ ಸುರಿಸುತ್ತವೆ ಎಂದು ಹೇಳಿದೆ.ಒಟ್ಟಾರೆ ಈ ವಿದ್ಯಮಾನ ಸ್ಥಳೀಯ ನಿವಾಸಗಳಲ್ಲೇ ಅಚ್ಚರಿಗೆ ಕಾರಣವಾಗಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
