ತುಮಕೂರು
ಇಂದು ಬೆಳಗ್ಗೆ 3.50 ಸುಮಾರಿಗೆ ಸಿದ್ಧಗಂಗಾ ಆಸ್ಪತ್ರೆಯಿಂದ ಶ್ರೀಗಳನ್ನು ವೈದ್ಯರು ಮಠಕ್ಕೆ ಸ್ಥಳಾಂತರಿಸಿದ್ದಾರೆ.
ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಕರೆದುಕೊಂಡು ಹೋಗಿ ಎಂದು ಸೂಚನೆ ನೀಡುತ್ತಿದ್ದರು. ನಾಳೆ ಅಥವಾ ನಾಡಿದ್ದು ಶಿಫ್ಟ್ ಮಾಡಬೇಕೆಂದು ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ. ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದ ಹಿನ್ನೆಲೆ ಶಿಫ್ಟ್ ಮಾಡಲಾಗಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನೇ ಈಗ ಮುಂದುವರೆಸಲಾಗುವುದು. ಆಕ್ಸಿಜನ್ ಪೈಪ್ ಸೇರಿದ್ದಂತೆ ಕೆಲವು ನ್ಯೂನ್ಯತೆಗಳಿದ್ದವು ಅವುಗಳನ್ನು ಸರಿಪಡಿಸಿಕೊಂಡು ಆಸ್ಪತ್ರೆಯ ರೀತಿ ಚಿಕಿತ್ಸೆಯನ್ನು ಮಠದಲ್ಲೇ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದ್ದಾರೆ .
ಈಗ ಶ್ವಾಸಕೊಶದ ಸೋಂಕು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
