ಕೋಲಾರ:
ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಬಂಗಾರಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ಮುಖ್ಯ ರೂವಾರಿ ಹಾಗೂ ರೈತ ಸಂಘದ ಮುಖ್ಯಸ್ಥೆ ಸರಸ್ವತಮ್ಮ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ಶ್ರೀನಗರದಲ್ಲಿನ ಒಂಟಿ ಮನೆಯಲ್ಲಿ ಸರಸ್ವತಮ್ಮ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಳು. ಸರಸ್ವತಮ್ಮ ಈ ಹಿಂದೆ ಬಂಗಾರಪೇಟೆಯ ವಿಜಯನಗರ ಬಡಾವಣೆಯಲ್ಲೂ ವೇಶ್ಯಾಟಾಟಿಕೆ ನಡೆಸಿ, ಸಿಕ್ಕಿ ಬಿದ್ದಿದ್ದಳು. ಇಷ್ಟಾದರೂ ತನ್ನ ಛಾಳಿಯನ್ನು ಮುಂದವರೆಸಿದ ಸರಸ್ವತಮ್ಮ ಇದೀಗ ದಂಧೆ ನಡೆಸಿ ಸಿಕ್ಕಿ ಬಿದ್ದಿದ್ದಾಳೆ. ಪೊಲೀಸರು ನಾಲ್ವರು ಆರೋಪಿಗಳ ಜತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ರೈತ ಸಂಘದ ಮುಖ್ಯಸ್ಥೆ ಸರಸ್ವತಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
