ನವದೆಹಲಿ :
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಈ ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚುನಾವಣಾ ಫಲಿತಾಂಶ ಈ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಮೇಲೂ ನೇರ ಪರಿಣಾಮ ಬೀರಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ. ಮಾರ್ಚ್ 10 ಅಂದರೆ ಇಂದು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಇಂದಿನ ಈ ಫಲಿತಾಂಶ 2022 ರ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ಪಕ್ಷ ಅಥವಾ ಒಕ್ಕೂಟವು ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವುದು ಕೂಡಾ ನಿರ್ಣಯವಾಗಲಿದೆ.
ಹೆಚ್ಚಲಿದೆಯೇ ಬಿಜೆಪಿ ಸಂಕಷ್ಟ :
ಎಕ್ಸಿಟ್ ಪೋಲ್ ಫಲಿತಾಂಶ ಭವಿಷ್ಯ ನುಡಿದಂತೆ ನಡೆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಕಷ್ಟ ಎದುರಾಗಲಿದೆ. ಯುಪಿಯಲ್ಲಿ ನಡೆದ ಹಲವು ಎಕ್ಸಿಟ್ ಪೋಲ್‌ಗಳನ್ನು ವಿಶ್ಲೇಷಿಸಿದರೆ, ಬಿಜೆಪಿ ಸರಾಸರಿ 240 ಸ್ಥಾನಗಳನ್ನು ಗೆಲ್ಲಲಿದೆ. ಅಂದರೆ, 2017ರ ಚುನಾವಣೆಗಿಂತ 72 ಸ್ಥಾನಗಳು ಕಡಿಮೆಯಾಗಲಿವೆ. ಇಂತಹ ಪರಿಸ್ಥಿತಿಯಲ್ಲಿ ಎನ್ ಡಿಎ ಅದರಲ್ಲೂ ಬಿಜೆಪಿ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಇನ್ನೂ ಕೆಲವು ಮಿತ್ರಪಕ್ಷಗಳನ್ನು ಹುಡುಕಬೇಕಾಗಿದೆ.
ಇದೀಗ ಬಿಜೆಪಿಗೆ ಸಮೀಕರಣವೇನು?
ಪ್ರಸ್ತುತ, ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಯನ್ನು ದೇಶದ ಉನ್ನತ ಹುದ್ದೆಗೆ ಸುಲಭವಾಗಿ ಆಯ್ಕೆ ಮಾಡುವ ಸ್ಥಿತಿಯಲ್ಲಿದೆ. ಆದರೆ ಉತ್ತರ ಪ್ರದೇಶದ ಪ್ರತಿಕೂಲ ಫಲಿತಾಂಶಗಳು ಈ ಪರಿಸ್ಥಿತಿಯನ್ನು ಬದಲಾಯಿಸಬಹುದು.
ಒಂದು ವೇಳೆ ಹೀಗಾದರೆ ಬಿಜು ಜನತಾ ದಳ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ನಂತಹ ಪ್ರಾದೇಶಿಕ ಪಕ್ಷಗಳ ಪಾತ್ರ ಪ್ರಮುಖವಾಗಲಿದೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶ ಕುರಿತು ಮಾತನಾದುವುದಾದರೆ ಹೆಚ್ಚಿನ ಸಮೀಕ್ಷೆಗಳು ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಭವಿಷ್ಯ ನುಡಿದಿವೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಯುಪಿ :
ರಾಷ್ಟ್ರಪತಿ ಚುನಾವಣೆಯಲ್ಲಿ ಉತ್ತರ ಪ್ರದೇಶದ ಶಾಸಕರ ಮತದ ಮೌಲ್ಯವು ಅತ್ಯಧಿಕ ಅಂದರೆ 208 ಆಗಿದ್ದರೆ, ಸಿಕ್ಕಿಂನ ಶಾಸಕರ ಮತದ ಮೌಲ್ಯವು ಅತ್ಯಂತ ಕಡಿಮೆ ಅಂದರೆ ಏಳು. ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಪಂಜಾಬ್‌ನ ಶಾಸಕರ ಮತ ಮೌಲ್ಯ 116, ಉತ್ತರಾಖಂಡದ ಶಾಸಕರ ಮತ ಮೌಲ್ಯ 64,
ಗೋವಾದ ಶಾಸಕರ ಮತ ಮೌಲ್ಯ 20 ಮತ್ತು ಮಣಿಪುರದ ಒಬ್ಬ ಶಾಸಕರ ಮತ ಮೌಲ್ಯ 18. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಷ್ಟ್ರಪತಿ ಚುನಾವಣೆಗೆ ಮಹತ್ವದ್ದಾಗಿದ್ದು, ರಾಜ್ಯದ 403 ಶಾಸಕರ ಪೈಕಿ ಪ್ರತಿಯೊಬ್ಬರು ಅತಿ ಹೆಚ್ಚು ಅಂದರೆ 208 ಮತಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು ಮತಗಳ ಮೌಲ್ಯ 83,824, ಪಂಜಾಬ್ -13,572, ಉತ್ತರಾಖಂಡ -4,480, ಗೋವಾ -800 ಮತ್ತು ಮಣಿಪುರ -1,080. ಆಗಿದೆ.
ಎನ್‌ಡಿಎ ಪ್ರಸ್ತುತ ಶಕ್ತಿ :
ವಿಭಿನ್ನ ಸಮೀಕರಣಗಳ ಪ್ರಕಾರ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾಯಿತ ಪ್ರತಿನಿಧಿಗಳ ಮತಗಳ ಮೌಲ್ಯವು ಒಟ್ಟು ಸಂಖ್ಯೆಯ 50% ಕ್ಕಿಂತ ಕಡಿಮೆಯಿದೆ.
ರಾಷ್ಟ್ರಪತಿ ಭವನದಲ್ಲಿ ಅವರ ಅಭ್ಯರ್ಥಿ ಗೆಲುವೂ ಪಡೆಯಬೇಕಾದರೆ ಬೇರೆ ಪೋಕ್ಕುತಗಳ ಬೆಂಬಲ ಪಡೆಯಬೇಕು. ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಪಷ್ಟ ಉದ್ದೇಶದಿಂದಲೇ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರು ವಿರೋಧ ಪಕ್ಷಗಳನ್ನು ಭೇಟಿ ಮಾಡುತ್ತಿರುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
