ದಾವಣಗೆರೆ:
ಕಿಸಾನ್ ಸಂಯುಕ್ತ ಮೋರ್ಚಾ ಪ್ರತಿಭಟನೆ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಲಖೀಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಕಿಸಾನ್ ಸಂಯುಕ್ತ ಮೋರ್ಚಾದ ಜಿಲ್ಲಾ ಶಾಖೆಯಿಂದ ನಗರದಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿ ಪ್ರತಿಭಟನಾಕಾರರು ಮತ್ತು ಪೆÇಲೀಸರ ಮಧ್ಯೆ ವಾಗ್ವಾದ, ಪರಸ್ಪರ ತಳ್ಳಾಟ ನಡೆಸಿದ ಘಟನೆ ನಡೆಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರ ಪ್ರದರ್ಶನದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಆದರೆ, ಪೆÇಲೀಸರು ಅದಕ್ಕೆ ಅವಕಾಶ ನೀಡದೆ ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ಪೆÇಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಪೆÇಲೀಸರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಡಾ.ಸುನಿತ್‍ಕುಮಾರ್, ಮಂಜುನಾಥ ಕುಕ್ಕವಾಡ ಅವರನ್ನು ಹೊತ್ತು ಪೆÇಲೀಸರ ಜೀಪಿಗೆ ಹಾಕಲು ಮುಂದಾದರು. ಈ ವೇಳೆ ಪೆÇಲೀಸರು ಮತ್ತು ಪ್ರತಿಭಟನಾಕರರ ಮಧ್ಯೆ, ತಳ್ಳಾಟ, ನೂಕಾಟ ನಡೆಯಿತು. ಪ್ರತಿಭಟನಾಕಾರರ ಕೈಯಲ್ಲಿದ್ದ ಮೋದಿ, ಅಮಿತ್ ಶಾ ಭಾವಚಿತ್ರಗಳನ್ನು ಪರಸ್ಪರ ಎಳೆದಾಡಿದಾಗ ಮೋದಿ ಅವರ ಭಾವಚಿತ್ರ ಹರಿದು ಹೋಯಿತು.
ಈ ಸಂದರ್ಭದಲ್ಲಿ ಸರ್ಕಾರದ ಏಜೆಂಟರಂತೆ ವರ್ತಿಸುವ ಪೆಲೀಸರಿಗೆ ಧಿಕ್ಕಾರ, ಪೆಲೀಸರ ದೌರ್ಜನ್ಯಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರ ಪ್ರದರ್ಶನಕ್ಕೆ ಮತ್ತು ದಹನಕ್ಕೆ ಅವಕಾಶವಿಲ್ಲ. ಮೆರವಣಿಗೆ ಬೇಕಾದರೆ ಮಾಡಿ ಎಂದು ಹೇಳಿದರು. ಆಗ ಪ್ರತಿಭಟನಾಕಾರರು ಬಿಜೆಪಿಯವರು ಬೈಕ್ ರ ಯಾಲಿ ನಡೆಸಲು, ಮೆರವಣಿಗೆ ನಡೆಸಲು, ಸಭೆ-ಸಮಾರಂಭ ಮಾಡಲು ಅವಕಾಶ ನೀಡುತ್ತಿರಿ. ನಮಗೇಕೆ ಭಾವಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ.
ನಮಗೆ ಭಾವಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆಯು ಮಾತಿನ ಚಕಮಕಿ ನಡೆದು, ಪ್ರತಿಭಟನಾಕಾರರು ತಮ್ಮ ಕೈಗಳಲ್ಲಿದ್ದ ಭಾವಚಿತ್ರಗಳನ್ನು ಪೆÇಲೀಸರಿಗೆ ಹಸ್ತಾಂತರಿಸಿ, ಕೊನೆಗೆ ಜಯದೇವ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜನಪರ ಹೋರಾಟವನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈತರ ಹತ್ಯೆ ನಡೆಸಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರುಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಡಾ.ಸುನಿತ್‍ಕುಮಾರ್, ಮಂಜುನಾಥ ಕುಕ್ಕವಾಡ, ಐರಣಿ ಚಂದ್ರು, ಭಾರತಿ, ಮಧು ತೊಗಲೇರಿ, ಪರಶುರಾಮ್, ರಂಗನಾಥ್, ಆದಿಲ್‍ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ