ಬೆಂಗಳೂರು
ಕಳೆದ ಮೂರು ವರ್ಷಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1,78,03,648 ನೊಂದಾವಣಿಯಾಗಿದೆ. 39,48,923 ಫಲಾನುಭವಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಬಾಕಿ ಉಳಿದಿರುವ ಆಯುಷ್ಮಾನ್ ಕಾರ್ಡುಗಳನ್ನು ಇನ್ನು ಮೂರು ತಿಂಗಳ ಒಳಗಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೊಜನೆಗಳನ್ನು ಒಂದೇ ಯೋಜನೆಯಡಿ ಏರ್ಪಡಿಸಿ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಎಂದು ಮಾಡಲಾಗಿದೆ. ಈ ಯೋಜನೆಯಡಿ ಸೆಪ್ಟೆಂಬರ್ 2022 ರಿಂದ 31ನೇ ಜನವರಿ 2023ರ ವರೆಗೆ 1,28,04,755 ಫಲಾನುಭವಿಗಳು ನೊಂದಾವಣಿ ಮಾಡಲಾಗಿರುತ್ತದೆ ಮತ್ತು ಫಲಾನುಭವಿಗಳ ನೋಂದಣಿ ಕಾರ್ಯ ಜಾರಿಯಲ್ಲಿರುತ್ತದೆ.
ರಾಜ್ಯಾದಾದ್ಯಂತ ಈ ಯೋಜನೆಯಡಿಯಲ್ಲಿ ಕಳೆದ ಮೂರು ವರ್ಷಗಳಿಮದ 3948923 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 2020-21ರಲ್ಲಿ ರಾಜ್ಯ ಸರ್ಕಾರವು 70,171.95 ಲಕ್ಷ ರೂ ಮತ್ತು ಕೇಂದ್ರ ಸರ್ಕಾರವು 16,085.25 ಲಕ್ಷ ರೂ, 2021-22ರಲ್ಲಿ ರಾಜ್ಯದಿಂದ 97,368.00 ಲಕ್ಷ ರೂ ಕೇಂದ್ರದಿAದ 41,411.03 ಲಕ್ಷ ರೂ ಹಾಗೂ 2022-23 ನೇ ಸಾಲಿನಲ್ಲಿ ಜನವರಿ 31, 2023ರ ವರೆಗೆ ರಾಜ್ಯದಿಂದ 51,312.98 ಲಕ್ಷ ರೂ ಕೇಂದ್ರದಿAದ 90,866.55 ಲಕ್ಷರೂ ಹೀಗೆ ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 3,09,719.48 ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಮಾರ್ಗಸೂಚಿಯನ್ವಯ ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಯೋಜನೆಯ ಪ್ಯಾಕೇಜ್ ದರದನ್ವಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿದ ಆಸ್ಪತ್ರೆಗಳಿಗೆ ಮೊತ್ತವನ್ನು ಪಾವತಿ ಮಾಡಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ