ಹಿಂದುಳಿದ ವರ್ಗಗಳ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆಗೆ ಕ್ರಮ : ಸಿಎಂ

ಬೆಂಗಳೂರು

      ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದವರು ನಡೆಸುತ್ತಿರುವ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿಗಿಂದು ತಿಳಿಸಿದರು.

     ಪ್ರಶ್ನೋತ್ತರ ಕಲಾಪದಲ್ಲಿ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸರ್ಕಾರದ ಅಂಗೀಕೃತ ಏಜೆನ್ಸಿ ಆದ ಎಂ.ಸಿ ಅಂಡ್ ಎ ಮೂಲಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೊಂದಾಯಿಸಿಕೊAಡಿರುವ ಏಜೆನ್ಸಿಗಳ ಮೂಲಕ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಲಾಗುತ್ತಿದೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಪತ್ರಿಕೆಗಳಿಗೆ ಸರ್ಕಾರಿ ಆದೇಶದಂತೆ ಈಗಾಗಲೇ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ವರ್ಗಗದವರು ನಡೆಸುತ್ತಿರುವ ಪತ್ರಿಕೆಗಳು ಇವೆ. ಸುಮಾರು ಐದಾರೂ ವರ್ಷಗಳಿಂದ ಪತ್ರಿಕೆಗಳನ್ನು ನಡೆಸುತ್ತಿರುವವರನ್ನು ಪಟ್ಟಿ ಮಾಡಿ ಅವರಿಗೆ ಒಂದು ತರಬೇತಿ ನೀಡಿ, ನಂತರ ಅಂತಹ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಲು ಅನುದಾನ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap