ಎಐಪಿಎವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಬೆಂಗಳೂರು :

   ಕೇರಳದ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ನೆಡೆಯುವಂತೆ ಕರ್ನಾಟಕದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರ ನೀಡಿರುವ ಪರವಾನಿಗೆಯಂತೆ ಫಾರ್ಮಸಿ ಅಧಿಕಾರಿಗಳು,

    ಪಿ.ಯು.ಸಿ(ಸೈನ್ಸ್) ವಿದ್ಯಾಭ್ಯಾಸದ ನಂತರ ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ಪಿ.ಹೆಚ್.ಡಿ. ಡಾಕ್ಟರ್ ಆಫ್ ಫಾರ್ಮಸಿ ಪಡೆದು ದೇಶ ಮತ್ತು ರಾಜ್ಯದಲ್ಲಿ ಔಷಧಗಳನ್ನು ಕಂಡುಹಿಡಿಯುವ, ಉತ್ಪಾದಿಸುವ, ಸಿದ್ದಪಡಿಸುವ, ವಿತರಿಸುವ, ಸಂಗ್ರಹಿಸುವ, ಔಷಧಗಳನ್ನು ಕಂಡುಹಿಡಿಯುವ , ಪರೀಶಲಿಸುವ, ವಿಚಾರಣೆ ಮಾಡುವ, ಜ್ಞಾನವನ್ನು ಬೆಳೆಸಿಕೊಂಡಿರುತ್ತಾರೆ. ಇವರು ಆರೋಗ್ಯ ವಿಜ್ಞಾನಗಳನ್ನು ಔಷಧಿ ವಿಜ್ಞಾನಗಳ ನೈಸರ್ಗಿಕ ವಿಜ್ಞಾನಗಳೊಂದಿಗೆ ಸಂಪರ್ಕಿಸಿರುವುದರಿಂದ ಇದು ವಿವಿಧ ವಿಜ್ಞಾನವಾಗಿರುತ್ತದೆ.

    ಫಾರ್ಮಸಿ ಅಧಿಕಾರಿಗಳು, ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯಗಳಲ್ಲಿ ಕಾರ್ಯನಿರ್ವಹಿಸುವುದು ತಾಂತ್ರಿಕ ಸ್ವರೂಪದಾಗಿರುತ್ತದೆ ಮತ್ತು ಜವಾಬ್ದಾರಿ ಸಹ ಆಗಿರುತ್ತದೆ. ಫಾರ್ಮಸಿ ಕಾಯ್ದೆಯಲ್ಲಿ ಇತರರಿಗೆ ಅವಕಾಶವಿಲ್ಲದಿದ್ದರೂ ಇಲಾಖೆಗಳಲ್ಲಿ ವಿಶೇಷವಾಗಿ ಕರ್ನಾಟಕ ಸರ್ಕಾರದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2017ರಿಂದ ಫಾರ್ಮಸಿ ಹುದ್ದೆಯಿಂದ ಭರ್ತಿ ಮಾಡದೇ ಇರುವುದು ಇದರಿಂದ ಸುಮಾರು 1500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ. ಈ ಖಾಲಿ ಇರುವ ಹುದ್ದೆಗಳಲ್ಲಿ ಫಾರ್ಮಸಿ ಕಾಯ್ದೆಗೆ ವಿರುದ್ಧವಾಗಿ ಇತರರು ಔಷಧಿಗಳನ್ನು ಸಂಗ್ರಹಿಸುವುದು, ವಿತರಣೆ ಮಾಡುತ್ತಿದ್ದು, ಇದು ಫಾರ್ಮಸಿ ಕಾಯ್ದೆಗೆ ವಿರುದ್ದವಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರಾದ ಡಾ. ಬಿಎಸ್ ದೇಸಾಯಿ ತಿಳಿಸಿದರು.

   ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ತೊಂದರೆ ಉಂಟಾಗುತ್ತದೆಂದು ಹೇಳುವ ಮೂಲಕ ನೇರವಾಗಿ ಸಾರ್ವಜನಿಕರಿಗೆ ತಿಳಿಹೇಳಬೇಕೆನ್ನುವ ಹಿತದೃಷ್ಟಿಯಿಂದ ಬತ್ತಿಪತ್ರಗಳು, ಜಾಹಿರಾತು, ಬ್ಯಾನರ್‌ಗಳ ಮುಖಾಂತರ ಸಾರ್ವಜನಿಕರ ಗಮನಸೆಳೆಯಲು ಮೇಲೆ ನಮೂದಿಸಿದ ವಿದ್ಯಾರ್ಹತೆಯನ್ನು ಪಡೆದ ಫಾರ್ಮಸಿ ಅಧಿಕಾರಿಗಳನ್ನು ತಾವು ಸಂಪರ್ಕಿಸಿ ಔಷಧಿಗಳಿಂದ ಆಗುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ, ರಾಷ್ಟ್ರದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ನಡೆಯುವಂತೆ ಕರ್ನಾಟಕದ ರಾಜದಾಯಾದ ಬೆಂಗಳೂರು ನಗರದಲ್ಲಿ ಎಲ್ಲಾ ಅಂತದ ಫಾರ್ಮಸಿ ಹುದ್ದೆಗಳನ್ನು ಭರ್ತಿ ಮಾಡುವ ಮುಖಾಂತರ ಆಗುವ ದುಶಪರಿಣಾಗಳನ್ನು ತಡೆಗಟ್ಟಲು ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಯಿತು

Recent Articles

spot_img

Related Stories

Share via
Copy link