ಮಹರಾಷ್ಟ್ರ :
ಬೆಂಕಿಯನ್ನು ಉಗುಳುವಂಥ ಅಥವಾ ಕೆಂಡದುಂಡೆಗಳಂಥ ಮಾತುಗಳನ್ನು ತೂರಿ ಬಿಡುವುದರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮುಖ್ಯಸ್ಥ ರೂ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಅಜಿತ್ ಪವಾರ್ ಮಹಾಶ ಯರು ನಿಷ್ಣಾತರು. ಈ ಕಾರಣದಿಂದಾಗಿಯೇ ರಾಜಕೀಯ ಪಂಡಿತರು ಅವರನ್ನು ‘ಮಿಸ್ಟರ್ ಫೈರ್’ ಎಂದು ಕರೆಯುವುದುಂಟು. ಮಹಾರಾಷ್ಟ್ರ ರಾಜಕಾರಣದಲ್ಲಿ ಕಳೆದ ಕೆಲ ವರ್ಷ ಗಳಲ್ಲಿ ಕಂಡು ಬಂದಿರುವ ಬಣ ರಾಜಕೀಯವನ್ನು ಕಂಡವರಿಗೆ, ಈ ಹಗ್ಗಜಗ್ಗಾಟಕ್ಕೆ ಅಜಿತ್ ಪವಾರರ ಮಾತುಗಳ ಕೊಡುಗೆಯೂ ಇದೆ ಎಂದು ಅನಿಸಿದ್ದುಂಟು! ಇಂಥ ಅಜಿತ್ ಪವಾರರು ಕಾರ್ಯಕ್ರಮವೊಂದರ ನಿಮಿತ್ತ, ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ರೊಂದಿಗೆ ಪುಣೆಗೆ ತೆರಳಬೇಕಾಯಿತು.
ಅಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರಿಬ್ಬ ರೂ, ಅತ್ಯಾಧುನಿಕ ಶಸಾಸಗಳನ್ನು ಕೈಯಲ್ಲಿ ಹಿಡಿದು ಅವಲೋಕಿಸಿದ್ದುಂಟು, ಸ್ವಯಂ ಚಾಲಿತ ರೈಫಲ್‌ಗಳೊಂದಿಗೆ ಪೋಸ್ ನೀಡಿದ್ದೂ ಉಂಟು. ಈ ಫೋಟೋಶೂಟ್ ಆದ ನಂತರ ಸಿಎಂ ಫಡ್ನವಿಸ್ ಅವರೇನೋ ತಮ್ಮ ಕೈಯಲ್ಲಿದ್ದ ರೈಫಲ್ ಅನ್ನು ಸಂಬಂಧಿಸಿ ದವರಿಗೆ ಮರಳಿಸಿದರಂತೆ. ಆದರೆ ಅಜಿತ್ ಪವಾರ್ ಮಹಾಶಯರು, ‘ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ್ರಂತೆ’ ಎಂಬ ಮಾತಿಗೆ ಪುಷ್ಟಿ ನೀಡುವಂತೆ, ತಾವು ಹಿಡಿದಿದ್ದ ರೈಫಲ್ ಅನ್ನು ಪತ್ರಕರ್ತರೆಡೆಗೆ ತಿರುಗಿಸಿ, “ನಮ್ಮ ಸರಕಾ ರದ ಬಗೆಗೆ ಸಕಾರಾತ್ಮಕ ಸುದ್ದಿಗಳನ್ನು ಬರೆಯದಿದ್ದರೆ, ನಿಮ್ಮ ಮೇಲೆ ಗುಂಡಿನ ದಾಳಿ ನಡೆಸಿಬಿಡುವೆ, ಹುಷಾರ್!” ಎಂದು ಹಾಸ್ಯ ಮಿಶ್ರಿತ ಬೆದರಿಕೆಯ ದನಿಯಲ್ಲಿ ಅಬ್ಬರಿಸಿ ಬಿಟ್ಟರು!
ಅಲ್ಲೇ ಆಗಿದ್ದು ಎಡವಟ್ಟು! ತಾವು ನೀಡಿದ ‘ಫೈರ್ ಪೋಸು’ ತಮಗೇ ‘ಬ್ಯಾಕ್ ಫೈರ್’ ಆಗುವ ಲಕ್ಷಣಗಳು ಕಾಣುತ್ತಿವೆ ಎಂದು ಪವಾರರಿಗೆ ಅನಿಸಲು ಶುರುವಾಯಿತು. ದಿಗ್ಭ್ರಮೆಗೊಂಡ ಅವರು ಅರೆಕ್ಷಣ ಮೌನವಾಗಿದ್ದುಕೊಂಡು ಸಮಜಾಯಿಷಿ ನೀಡಲು ಮುಂದಾಗಬೇ ಕಾಯಿತು.
ನಾರದರು ಕಲಹಪ್ರಿಯರು ಮಾತ್ರವಲ್ಲ ‘ತ್ರಿಲೋಕ ಸಂಚಾರಿ’ಯೂ ಹೌದು ಎಂಬುದು ನಿಮಗೆ ಗೊತ್ತಿರುವ ಸಂಗತಿಯೇ. ಶ್ರೀಮನ್ನಾರಾಯಣನ ಸ್ಮರಣೆಯೇ ತಮ್ಮ ‘ಫುಲ್ ಟೈಂ ಜಾಬ್’ ಎಂದು ಅವರು ಸಮರ್ಥನೆ ನೀಡಿಕೊಳ್ಳುತ್ತಾರಾದರೂ, ಅವರಿವರ ಮಧ್ಯೆ ತಂದಿ ಟ್ಟು ತಮಾಷೆ ನೋಡುವ ‘ಕಲಹಪ್ರಿಯ’ ಬುದ್ಧಿ ಹಾಗೂ ಮೂಲೋಕಗಳಲ್ಲೂ ಸಂಚರಿ ಸುತ್ತ ‘ಗಾಸಿಪ್ ಹಬ್ಬಿಸುವ’ ಚಾಳಿಯೇ ನಾರದರ ‘ಫುಲ್ ಟೈಂ ಜಾಬ್’ ಅಂತ ಕೆಲವರು ಅಭಿಮಾನಪೂರ್ವಕವಾಗಿ ಟೀಕಿಸುವುದುಂಟು.
ಒಟ್ನಲ್ಲಿ, ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಹಾರುವ, ನಿರಂತರ ಸಂಚರಿಸುವ ನಾರದರಿಗೇ ಒಬ್ಬ ಪ್ರತಿಸ್ಪರ್ಧಿ ಹುಟ್ಟಿ ಕೊಂಡುಬಿಟ್ಟಿದ್ದಾರೆ ಕಸ್ತೂರಿ ಕರ್ನಾಟಕದಲ್ಲಿ. ಅವರ ಹೆಸರು ಎಲ್.ಆರ್.ಶಿವರಾಮೇಗೌಡರು ಅಂತ. ಮಾಜಿ ಸಂಸದ, ಶಾಸಕ ಹೀಗೆ ಏನೆಲ್ಲಾ ಹಣೆಪಟ್ಟಿ ಹೊತ್ತಿರುವ ಶಿವರಾಮೇಗೌಡರು ಪಕ್ಷೇತರ ಶಾಸಕರಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದವರು.
ನಂತರ ಕಾಲಘಟ್ಟದ ಮಹಿಮೆಯ ಕಾರಣದಿಂದಾಗಿ ಜೆಡಿಎಸ್ ಪಕ್ಷವನ್ನು ಸೇರಿಬಿಟ್ಟರು. ಅಲ್ಲೇನಾಯ್ತೋ ಗೊತ್ತಿಲ್ಲ ಕೈಪಕ್ಷ ಕಾಂಗ್ರೆಸ್‌ನ ಕೈಹಿಡಿದರು. ಅಲ್ಯಾಕೋ ಗಿಟ್ಟಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯ ಮಡಿಲು ಸೇರಿದರು. ನಂತರ ಮತ್ತೆ ಜೆಡಿಎಸ್‌ಗೆ, ಜೆಡಿಎಸ್‌ನಿಂದ ಬಿಜೆಪಿಗೆ ಗೌಡರ ಸಂಚಾರ ಮುಂದುವರಿಯಿತು. ಇಷ್ಟೆಲ್ಲಾ ಸಂಚರಿಸಿ ‘ಬ್ರಹ್ಮಜ್ಞಾನ’ ದಕ್ಕಿಸಿಕೊಂಡ ಮೇಲೆ ಶಿವರಾಮೇ ಗೌಡರು ಈಗ ಮತ್ತೆ ಕೈಪಾಳಯಕ್ಕೆ ಮರಳಿದ್ದಾರೆ.
