ಮುಂಬೈ:
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭವಿಷ್ಯದಲ್ಲಿ ಸರ್ಕಾರವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಶುಕ್ರವಾರ ಹೇಳಿದ್ದಾರೆ.
“ಭವಿಷ್ಯದಲ್ಲಿ ಅಜಿತ್ ಪವಾರ್ ಸಿಎಂ ಆಗಬಹುದು. ಸಿಎಂ(ಏಕನಾಥ್ ಶಿಂಧೆ) ಬದಲಾವಣೆ ಖಚಿತ” ಎಂದು ಅಜಿತ್ ಪವಾರ್ ಗೆ ಹಣಕಾಸು ಖಾತೆ ನೀಡಿದ ನಂತರ ರಾವತ್ ಹೇಳಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ 40 ಶಾಸಕರ ವಿರುದ್ಧ ಸಮಯವೇ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ.
ಶಿವಸೇನಾ ಶಾಸಕರು ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಭಾಗವಾಗಿದ್ದಾಗ ಅಜಿತ್ ಪವಾರ್ ಅವರು ಹಣ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈಗ ಪಕ್ಷ ತೊರೆದ ಅದೇ ವ್ಯಕ್ತಿ ಈಗ ರಾಜ್ಯದ ಹಣಕಾಸು ಸಚಿವರಾಗಿದ್ದಾರೆ ಎಂದು ದಾನ್ವೆ ತಿರುಗೇಟು ನೀಡಿದ್ದಾರೆ.