ಅಕ್ರಮ ವಲಸೆ ಪ್ರಕರಣ; ಟ್ರಂಪ್ ಬೆಂಬಲಿಗನ ಪತ್ನಿ ಬಂಧನ

ವಾಷಿಂಗ್ಟನ್:‌

    ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌  ಬೆಂಬಲಿಗ ವಿಸ್ಕಾನ್ಸಿನ್‌ನ ಬ್ರಾಡ್ಲಿ ಬಾರ್ಟೆಲ್ ಅವರ ಪತ್ನಿಯನ್ನು ಬಂಧಿಸಲಾಗಿದೆ. ವಲಸೆ ನೀತಿಯ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಾಡ್ಲಿ ಬಾರ್ಟೆಲ್ ಅವರ ಪತ್ನಿ ಕ್ಯಾಮಿಲಾ ಮುನೋಜ್ ಮೂಲತಃ ಪೆರುವಿಯನ್ ಪ್ರಜೆ ಎಂದು ತಿಳಿದು ಬಂದಿದೆ. ಕಾನೂನುಬದ್ಧವಾಗಿ ಅಮೆರಿಕದ ಪ್ರಜೆಯಾಗುವ ಪ್ರಕ್ರಿಯೆಯಲ್ಲಿದ್ದರೂ, ತನ್ನ ಸ್ಯಾನ್ ಜುವಾನ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದರು ಎಂದು ಬ್ರಾಡ್ಲಿ ಬಾರ್ಟೆಲ್ ತಿಳಿಸಿದ್ದಾರೆ. ಆದರೂ ಪತ್ನಿಯನ್ನು ಬಂಧಿಸಿರುವುದಕ್ಕೆ ತನಗೆ ಬೇಜಾರಿಲ್ಲ, ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ ಎಂದು ಅವರು ತಿಳಿಸಿದರು.

   ಮಿಲಾ ಮುನೋಜ್, ಅವರ ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿ ಶಾಶ್ವತ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದರು. ಮುನೋಜ್ 2019 ರಲ್ಲಿ ವಿಸ್ಕಾನ್ಸಿನ್ ಡೆಲ್ಸ್‌ಗೆ ಕೆಲಸದ ಅಧ್ಯಯನ ವೀಸಾದಲ್ಲಿ ಬಂದರು, ಆದರೆ COVID-19 ಅಂತರರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಿದಾಗ ಆ ವೀಸಾ ಅವಧಿ ಮುಗಿದಿತ್ತು. ಫೆಬ್ರವರಿಯಲ್ಲಿ, ಅವರು ತಮ್ಮ ಹನಿಮೂನ್‌ಗಾಗಿ ಪೋರ್ಟೊ ರಿಕೊಗೆ ಪ್ರಯಾಣ ಬೆಳೆಸಿದ್ದರು. ಮುನೋಜ್ ಹಿಂದಿರುಗಿದ ನಂತರ, ವಲಸೆ ಅಧಿಕಾರಿಗಳು ಅವರ ಬಳಿ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಮುನೋಜ್ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿದ್ದೇನೆ ಎಂದು ಅವರು ಹೇಳಿದಾಗ, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವರನ್ನು ಈಗ ಲೂಸಿಯಾನದಲ್ಲಿರುವ ಐಸಿಇ ಸೌಲಭ್ಯದಲ್ಲಿ ಇರಿಸಲಾಗಿದೆ.

    ತನ್ನ ಹೆಂಡತಿಯ ಬಂಧನವನ್ನು ನೋಡುವ ದುಃಖವನ್ನು ಬಾರ್ಟೆಲ್ ವಿವರಿಸಿದ್ದು, ಇದು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ, ನಾವು ವಕೀಲರ ಮೂಲಕ ಆಕೆಯನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಪ್ರಕ್ರಿಯೆ ತುಂಬಾ ಕಷ್ಟಕರವಾಗಿದ್ದು, ಸ್ವಲ್ಪ ವಿಳಂಬವಾಗಬಹುದು ಎಂದು ಅವರು ಹೇಳಿದ್ದಾರೆ. ಆದರೂ ಅವರು ಟ್ರಂಪ್‌ ಸರ್ಕಾರವನ್ನು ದೂಷಿಸಿಲ್ಲ, ಮತದಾನ ಮಾಡಿದ್ದಕ್ಕೆ ನನಗೆ ವಿಷಾದವಿಲ್ಲ, ಆದರೆ ವ್ಯವಸ್ಥೆಯನ್ನು ಇನ್ನೂ ತುಂಬಾ ಸರಿ ಪಡಿಸಬೇಕು ಎಂದು ಅವರು ಹೇಳಿದ್ದಾರೆ. 

    ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ನಂತರ ವಲಸಿಗರ ಕಠಿಣ ಕ್ರಮ ಕೈಗೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಗಡಿ ಪಾರು ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಇದು ವರೆಗೆ 2000 ಕ್ಕೂ ಅಧಿಕ ಜನರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ.

Recent Articles

spot_img

Related Stories

Share via
Copy link