ಇಂದು ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ; ಖಾಸಗಿ ಹೋಟೆಲ್ ನಲ್ಲಿ ಸಭೆ

ಬೆಂಗಳೂರು:

ನಾಳೆ ಮಧ್ಯಾಹ್ನ ಸಿಎಂ ಅಧಿಕೃತ ನಿವಾಸದಲ್ಲಿ ಭೋಜನ ನಂತರ ರಾಜ್ಯ ಬಿಜೆಪಿ ಕೋರ್ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಚರ್ಚಿಸಲಿದ್ದಾರೆ.ಇಂದು ರಾತ್ರಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ.ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶಾ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಖಾಸಗಿ ಹೋಟೆಲ್ನಲ್ಲೇ ಸಭೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಿಂದ ಹೋಟೆಲ್ಗೆ ಸಭೆ ಶಿಫ್ಟ್ ಆಗಿದೆ. ನಾಳೆ ಮಧ್ಯಾಹ್ನ ಸಿಎಂ ಅಧಿಕೃತ ನಿವಾಸದಲ್ಲಿ ಭೋಜನ ನಂತರ ರಾಜ್ಯ ಬಿಜೆಪಿ ಕೋರ್ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಚರ್ಚಿಸಲಿದ್ದಾರೆ.ಇನ್ನು ಮತ್ತೊಂದು ಕಡೆ ದೆಹಲಿಯಿಂದ ಇಂದು ಸಂಜೆ ಬೆಂಗಳೂರಿಗೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ.
ಹಾಗೂ ರೇಸ್ಕೋರ್ಸ್ ರಸ್ತೆ ಹೋಟೆಲ್ನಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ರಾಜ್ಯ ರಾಜಕೀಯದ ಸ್ಥಿತಿ ತಿಳಿಯಲು ಅಮಿತ್ ಶಾ ಬರುತ್ತಿದ್ದಾರೆಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ, ಇಂದು ಸಂಜೆ ಕೇಂದ್ರ ಸಚಿವ ಅಮಿತ್ ಶಾರನ್ನ ಭೇಟಿಯಾಗುವೆ. ರಾಜ್ಯ ರಾಜಕೀಯದ ಸ್ಥಿತಿ ತಿಳಿಯಲು ಅಮಿತ್ ಶಾ ಬರುತ್ತಿದ್ದಾರೆ. ಚುನಾವಣಾ ವರ್ಷ ಹಿನ್ನೆಲೆಯಲ್ಲಿ ರಾಜ್ಯದ ಬಗ್ಗೆ ನರೇಂದ್ರ ಮೋದಿ, ಅಮಿತ್ ಶಾ ಹೆಚ್ಚು ಗಮನ ನೀಡಲಿದ್ದಾರೆ.

ಮೊದಲೆರಡು ಸ್ಥಾನದಲ್ಲಿ ಎರಡು ಹೊಸ ತಂಡಗಳು: ಐಪಿಎಲ್ 2022 ಅಂಕಪಟ್ಟಿ ಇಲ್ಲಿದೆ ನೋಡಿ

 

ಮುಂದಿನ ಎಲೆಕ್ಷನ್ನಲ್ಲಿ 150 ಸ್ಥಾನ ಗೆಲ್ಲಲು ಗುರಿ ಇಟ್ಟಿದ್ದೇವೆ. ರಾಜ್ಯ ನಾಯಕರ ಜೊತೆ ಶಾ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.ಇದೇ ವೇಳೆ ಮಾತನಾಡಿದ ಬಿಎಸ್ವೈ, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರಕಾರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link