ಬೋಧಕ ಸಿಬ್ಬಂದಿ ಶಿಸ್ತಿನ ರಾಯಭಾರಿಗಳಾಗಬೇಕು: ಡಾ. ಅಮಿತ್ ನಾಥ್

ಚಿಕ್ಕಬಳ್ಳಾಪುರ : 

    ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಬೋಧಕ ಸಿಬ್ಬಂದಿಗೆ ಸಮಯ ಪ್ರಜ್ಞೆ ಮತ್ತು ಶಿಸ್ತು ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿ ಡಾ.ಅಮಿತ್ ನಾಥ್ ತಿಳಿಸಿದರು.ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಕಾಲೇಜಿನ ಇನ್ಫರ್ಮೇಷನ್ ಸೈನ್ಸ್ ಮತ್ತು ಇಂಜಿನಿಯ ರಿಂಗ್ ವಿಭಾಗವು ಜುಲೈ 14 ರಿಂದ 19 ರವರೆಗೆ “ಮೆಂಟರಿಂಗ್ ಫ್ಯಾಕಲ್ಟಿ ಎಂಟರ್ಪ್ರೈನರ್ಸ್ ಫಾರ್ ಸಸ್ಟೈನಬುಲ್ ಇನ್ನೋವೇಶನ್ ಅಂಡ್ ಸ್ಟಾರ್ಟಪ್ ವಿಷಯ ಕುರಿತಂತೆ ಏರ್ಪಡಿಸಿ ರುವ ವೃತ್ತಿ ಬುನಾದಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಆತ್ಮನಿರ್ಭರ ಭಾರತವನ್ನು ಸದೃಢವಾಗಿ ಕಟ್ಟಲು ವಿಶ್ವ ವಿದ್ಯಾಲಯಗಳ ಹಂತದಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರಿಗೆ ಕಾಲಕಾಲಕ್ಕೆ ವೃತ್ತಿ ಬುನಾದಿ ತರಬೇತಿ ಕಾರ್ಯಗಾರ ಅಗತ್ಯ ಎಂದು ಅಭಿಪ್ರಾಯಪಟ್ಟರು. ವೃತ್ತಿ ಬುನಾದಿ ತರಬೇತಿ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಧ್ಯಾಪಕ ಪ್ರಾಧ್ಯಾ ಪಕರು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯುವ ಬೋಧನಾ ಕೌಶಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಆ ಮೂಲಕ ತಾವು ಬೆಳೆದು ತಮ್ಮನ್ನು ನಂಬಿರುವ ವಿದ್ಯಾರ್ಥಿ ಸಮೂಹವನ್ನು ಸಹ ಬದಲಾದ ಜಗತ್ತಿನ ಭೌತಿಕ ವಿಜ್ಞಾನದೊಂದಿಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು. 

    ನಿರಂತರ ಅಭ್ಯಾಸದಲ್ಲಿ ತೊಡಗಿರುವ ಪ್ರಾಧ್ಯಾಪಕರೇ ದೇಶ ಕಟ್ಟುವ ಸಮರ್ಥ ವಿದ್ಯಾರ್ಥಿ ಸಮೂಹವನ್ನು ಕಟ್ಟಬಲ್ಲರು. ವಿದ್ಯಾರ್ಥಿಗಳನ್ನು ಅಂಕಗಳಿಗೆ ಸೀಮಿತ ಮಾಡದೆ, ಕೇವಲ ಉದ್ಯೋಗ ಪಡೆಯಲು ಸಮರ್ಥ್ರನ್ನಾಗಿಸದೆ, ಉದ್ಯಮ ಪತಿಗಳನ್ನಾಗಿ ಮಾಡುವಲ್ಲಿಯೇ ಶಿಕ್ಷಣದ ಮಹತ್ವ ಅಡಗಿದೆ. ಬೋಧಕರು ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಉದ್ಯಮಪತಿಗಳಾಗುತ್ತಿದ್ದಾರೆ ಎಂಬು ದನ್ನು ಸಮೀಕ್ಷೆ ಹೇಳುತ್ತದೆ ‌. ಅಂದರೆ ಉದ್ಯಮಪತಿಗಳಾಗಿ ಬೆಳೆಯುವ ವಿಪುಲ ಅವಕಾಶಗಳು ಇರುವಾಗ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಮಾತ್ರ ಸೀಮಿತ ಮಾಡುವುದು ತಪ್ಪು ಎಂದರು. 

    ಮೆಂಟರಿಂಗ್ ಫ್ಯಾಕಲ್ಟಿ ಎಂಟರ್ಪ್ರೈನರ್ಸ್ ಫಾರ್ ಸಸ್ಟೈನಬಲ್ ಇನ್ನೋವೇಶನ್ ಅಂಡ್ ಸ್ಟಾರ್ಟಪ್ ವಿಷಯದ ವೃತ್ತಿ ಬುನಾದಿ ತರಬೇತಿ ಕಾರ್ಯಾಗಾರದ ಬಗ್ಗೆ ಮಾತನಾಡಿದ ವಿಭಾಗದ ಮುಖ್ಯಸ್ಥ ಡಾ. ಸಂಜೀವ್ ಕುಮಾರ್ ಅಟೂರೆ ಬದಲಾದ ಶೈಕ್ಷಣಿಕ ಪರಿಸರಕ್ಕೆ ಅನುಗುಣವಾಗಿ ಪ್ರಾಧ್ಯಾಪಕರು ಕೇವಲ ಪ್ರಾಧ್ಯಾಪಕರಾಗಿರಲಾಗದು. ಅಂತಯೇ ವಿದ್ಯಾರ್ಥಿಯು ಕೇವಲ ವಿದ್ಯಾರ್ಥಿ ಯಾಗಿ ಇರಲಾಗದು. ಇಬ್ಬರ ಸಮ್ಮಿಲನದಲ್ಲಿಯೇ ಹೊಸ ಹೊಸ ಹೊಳಹುಗಳು ಸಂಶೋಧನೆ, ಚಿಂತನೆ ಮೂಡಿಬರಲು ಸಾಧ್ಯ. ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತವನ್ನು ಕಟ್ಟಲು ಮುಂದಾಗಿದ್ದಾರೆ.

   ಈ ನಿಟ್ಟಿನಲ್ಲಿ ನಾಗಾರ್ಜುನ ತಾಂತ್ರಿಕ ಕಾಲೇಜು ಇನ್ಫಾರ್ಮಶನ್ ಸೈನ್ಸ್ ವಿಭಾಗವು ಆರು ದಿನಗಳ ಕಾಲ ನಮ್ಮ ಕಾಲೇಜಿನ ಅಧ್ಯಾಪಕರು ಸೇರಿದಂತೆ ದೇಶದ ವಿವಿಧ ವಿದ್ಯಾ ಸಂಸ್ಥೆಗಳಿಂದ ಬಂದಿರುವ 48 ಸಿಬ್ಬಂದಿಗೆ ವೃತ್ತಿ ಬುನಾದಿ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ಕೆ ಬಂದಿರುವ ಪ್ರತಿಯೊಬ್ಬರು ಐಐಎಂ ಐಬಿಎಮ್ ಮೊದಲಾದ ಸಂಸ್ಥೆಗಳಿಂದ ಬರುವ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದು ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು.

   ನಾಗಾರ್ಜುನ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ರವಿಶಂಕರ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ದೇಶದ ಶೈಕ್ಷಣಿಕ ಸಂಸ್ಥೆಗಳು ಕೊಡಗೆ ನೀಡಬೇಕಾದ ಅಗತ್ಯವಿದೆ. ಇದಾಗಬೇಕಾದರೆ ಸಿಬ್ಬಂದಿ ಸದಾ ಹೊಸತನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಬೇಕು. ಹೊಸತನ್ನು ನೀಡಬೇಕಾದರೆ ವೃತ್ತಿ ಬುನಾದಿ ತರಬೇತಿ ಕಾರ್ಯಗಾರ ಗಳ ನೆರವು ಬೇಕಾಗುತ್ತದೆ ಇದನ್ನು ಮನಗಂಡು ನಮ್ಮ ಸಂಸ್ಥೆ ಆರು ದಿನಗಳ ಕಾಲ ಈ ಕಾರ್ಯ ಗಾರವನ್ನು ಏರ್ಪಡಿಸಿದೆ ನೀವೆಲ್ಲ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.

   ಶೈಕ್ಷಣಿಕ ಬದುಕಿನಲ್ಲಿರುವ ಪ್ರತಿಯೊಬ್ಬ ಪ್ರಾಧ್ಯಾಪಕರು ಸಮಯಕ್ಕೆ ಬೆಲೆ ನೀಡಬೇಕು. ನಾವು ಇಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದರೆ ಗಡಿಯಲ್ಲಿ ಸಾವಿರಾರು ಮಂದಿ ಯೋಧರು ಶಿಸ್ತಿನಿಂದ ಕರ್ತವ್ಯ ನಿರ್ವಹಿಸುತ್ತಲೇ ಶತೃಗಳ ದಾಳಿಗೆ ಸಿಲುಕಿ ದೇಶ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಸ್ಮರಿಸಿಕೊಂಡರೆ ಶಿಕ್ಷಕರು ಖಂಡಿತ ಶಿಸ್ತಿನ ರಾಯಭಾರಿ ಗಳಾಗುತ್ತಾರೆ. ಆಗಬೇಕು ಕೂಡ ಎಂದರು. 

   ಕಾಲೇಜಿನ ಪ್ರಾಧ್ಯಾಪಕರು ತಮ್ಮ ಚಿಂತನೆಯನ್ನು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳ ಬೇಕು ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳುವ ರೀತಿ ಬೆಳೆಸಬೇಕು. ನೀವು ಬದಲಾಗದ ಹೊರತು ವಿದ್ಯಾರ್ಥಿ ಗಳು ಬದಲಾಗಲು ಸಾಧ್ಯವಿಲ್ಲ. ತಾಂತ್ರಿಕ ವೃತ್ತಿ ಬುನಾದಿ ತರಬೇತಿ ಕಾರ್ಯಗಾರಗಳಲ್ಲಿ ಭಾಗಿಯಾಗುವ ಸಿಬ್ಬಂದಿ ನಾವೇ ಬುದ್ದಿವಂತರು ಎಂಬ ಭಾವನೆ ಯನ್ನು ಬದಿಗೊತ್ತಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಅಂಶಗಳಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಆ ಕಾರ್ಯಾಗಾರಗಳಿಗೆ ಬೆಲೆ ಬರಲಿದೆ. ಇಲ್ಲಿರುವ ಸಿಬ್ಬಂದಿ ಇದನ್ನು ಅರ್ಥ ಮಾಡಿಕೊಂಡು ತರಬೇತಿಯಲ್ಲಿ ಪಾಲ್ಗೊಳ್ಳುತ್ತೀರಿ ಎಂದು ಭಾವಿಸುತ್ತಾ ಮಾತು ಮುಗಿಸುತ್ತೇನೆ ಎಂದರು.

   ಈ ವೇಳೆ ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹೆಚ್.ಜಿ.ಗೋಪಾಲಕೃಷ್ಣ, ಪ್ರಾಂಶುಪಾಲ ಡಾಕ್ಟರ್ ರವಿಶಂಕರ್, ಉಪ ಪ್ರಾಂಶುಪಾಲ ಡಾ.ನಾಗೇಶ್, ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ಕುಮಾರ್, ಸಿಬ್ಬಂದಿಗಳಾದ ರಮೇಶ್ ಕಾಗಲ್ಕರ್, ರಶ್ಮಿ ಕರಾಚಿ ಇತರರು ಇದ್ದರು. 

Recent Articles

spot_img

Related Stories

Share via
Copy link