ಅಮೆರಿಕಾದಿಂದ ಗಡಿಪಾರಾಗಿ ಬಂದವರು ಅಮೃತಸರಕ್ಕೇ ಬರುವುದು ಏಕೆ ಗೊತ್ತಾ….?

ನವದೆಹಲಿ: 

   ಅಮೆರಿಕಾದಿಂದ ಗಡಿಪಾರಾದ ಭಾರತೀಯರನ್ನು ಹೊತ್ತು ತರುತ್ತಿರುವ ವಿಮಾನಗಳು 3 ಬ್ಯಾಚ್ ಗಳಲ್ಲಿ ಭಾರತಕ್ಕೆ ಆಗಮಿಸಿವೆ.ಈ ವಿಮಾನಗಳು ಪ್ರತಿ ಬಾರಿಯೂ ಅಮೃತಸರದಲ್ಲೇ ಲ್ಯಾಂಡ್ ಆಗುತ್ತಿರುವ ಬಗ್ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ಕೊನೆಗೂ ಉತ್ತರ ನೀಡಿದೆ.

    ಫೆಬ್ರವರಿ 5 ರಿಂದ ಭಾರತಕ್ಕೆ ಬಂದ ಮೂರು ವಿಮಾನಗಳ ಅಂಕಿ-ಅಂಶಗಳನ್ನು ಹಂಚಿಕೊಂಡಿದೆ. ಅಮೆರಿಕದ ಮಿಲಿಟರಿ ವಿಮಾನಗಳಲ್ಲಿ ಗಡೀಪಾರು ಮಾಡಲಾದ 333 ಜನರಲ್ಲಿ ಒಟ್ಟು 126 ಜನರು ಪಂಜಾಬ್ ನಿವಾಸಿಗಳಾಗಿದ್ದಾರೆ. ನಂತರ ನೆರೆಯ ಹರಿಯಾಣದಿಂದ 110 ಮತ್ತು ಗುಜರಾತ್‌ನಿಂದ 74 ಜನರಿದ್ದಾರೆ. ಗಡಿಪಾರಾದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಜನರು ಪಂಜಾಬ್ ನವರಾದ್ದರಿಂದ ವಿಮಾನಗಳು ಅಮೃತ್ ಸರದಲ್ಲೇ ಲ್ಯಾಂಡ್ ಆಗುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

   ಗಡಿಪಾರಾದವರ ಪೈಕಿ 8 ಮಂದಿ ಉತ್ತರ ಪ್ರದೇಶದವರು, ಐದು ಮಂದಿ ಮಹಾರಾಷ್ಟ್ರದವರು, ತಲಾ ಎರಡು ಹಿಮಾಚಲ ಪ್ರದೇಶ, ಚಂಡೀಗಢ, ರಾಜಸ್ಥಾನ ಮತ್ತು ಗೋವಾದಿಂದ ಮತ್ತು ತಲಾ ಒಂದು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಿಂದ ಬಂದವರಾಗಿದ್ದಾರೆ. 

   ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಚಾರದ ಭರವಸೆಗಳಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಮೂರು ಮಿಲಿಟರಿ ವಿಮಾನಗಳು ಗಡಿಪಾರು ಮಾಡಲ್ಪಟ್ಟವರನ್ನು ಹೊತ್ತೊಯ್ದು ಭಾರತಕ್ಕೆ ಬಂದಿವೆ.

Recent Articles

spot_img

Related Stories

Share via
Copy link