2018-19ರಲ್ಲಿ ಆರ್ಥಿಕತೆಯ ಸ್ಥಿತಿ – ಒಂದು ಸ್ಥೂಲ ನೋಟ

     ಹೂಡಿಕೆ ಮತ್ತು ಬಳಕೆಯ ಬೆಳವಣಿಗೆಯಿಂದಾಗಿ ಜಿಡಿಪಿ 2019-20ರಲ್ಲಿ ಶೇ.7% ಏರಿಕೆಯಾಗಲಿದೆ. 2018-19ರಲ್ಲಿ ಸೇವೆಗಳ ರಫ್ತು ರೂ. 14.389 ಲಕ್ಷ ಕೋಟಿಗೆ ಹೆಚ್ಚಳ. ರೂ. 2000-01ರಲ್ಲಿ 0.746 ಲಕ್ಷ ಕೋಟಿ ರೂ.ಇತ್ತು. ವಿಶ್ವ ಸೇವಾ ರಫ್ತುಗಳಲ್ಲಿ ಭಾರತದ ಪಾಲು 2005 ರಲ್ಲಿದ್ದ ಶೇ.2 ರಿಂದ 2017 ರಲ್ಲಿ ಶೇ.3.5 ಕ್ಕೆ ಏರಿಕೆ

      ಭಾರತದ ವಿದೇಶಿ ವಿನಿಮಯ ಸಂಗ್ರಹವು 2019 ರ ಜೂನ್‍ನಲ್ಲಿ 422.2 ಶತಕೋಟಿ ಅಮೆರಿಕನ್ ಡಾಲರ್ ಸೇವೆಗಳು, ವಾಹನಗಳು ಮತ್ತು ರಾಸಾಯನಿಕಗಳಲ್ಲಿ 2015-16 ರಿಂದ ವಿದೇಶೀ ನೇರ ಬಂಡವಾಳದ ಒಳಹರಿವು ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. ಸಾಲ ನೀಡಿಕೆಯಿಂದ ದೊಡ್ಡ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಬೆಳವಣಿಗೆ ಸುಧಾರಿತ ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಯಿಂದಾಗಿ ಉದ್ಯಮದಲ್ಲಿ ಬೆಳವಣಿಗೆ 2018-19ರ ಅವಧಿಯಲ್ಲಿ ವೇಗಗೊಂಡಿದೆ

      ಹೂಡಿಕೆಯಲ್ಲಿ ನಿರೀಕ್ಷಿತ ಹೆಚ್ಚಳ ಮತ್ತು ಬಳಕೆಯಲ್ಲಿ ವೇಗವರ್ಧನೆಯ ಹಿನ್ನೆಲೆಯಲ್ಲಿ ಸರ್ಕಾರವು 2019-20ನೇ ಸಾಲಿನ ನಿಜವಾದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಕ್ಕೆ ನಿರೀಕ್ಷಿಸಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2018-19ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು,

     2019-20ನೇ ವರ್ಷವು ಸರ್ಕಾರಕ್ಕೆ ಭಾರಿ ರಾಜಕೀಯ ಜನಾದೇಶವನ್ನು ನೀಡಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ, ಇದು ಉನ್ನತ ನಿರೀಕ್ಷೆಗಳಿಗೆ ಉತ್ತಮವಾಗಿದೆ ಆರ್ಥಿಕ ಬೆಳವಣಿಗೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶ್ವ ಆರ್ಥಿಕ ಔಟ್‍ಲುಕ್ (ಡಬ್ಲ್ಯುಇಒ) ಯ ಏಪ್ರಿಲ್, 2019 ರ ವರದಿಯು ಭಾರತದ ಜಿಡಿಪಿ 2019 ರಲ್ಲಿ ಶೇಕಡಾ 7.3 ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಿದೆ.. ವಿಶ್ವ ಉತ್ಪಾದನೆಯ ಬೆಳವಣಿಗೆಯ ಕುಸಿತ ಮತ್ತು ವರದಿಯ ಹೊರತಾಗಿಯೂ ಇದು ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು (ಇಎಮ್‍ಡಿಇ) ಕ್ರಮವಾಗಿ ಶೇಕಡಾ 0.3 ಮತ್ತು 0.1 ಅಂಕಗಳಷ್ಟಿರುತ್ತವೆ.

     2017-18ರಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಸ್ವಲ್ಪ ಕಡಿಮೆಯಾದರೂ, 2018-19ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆದಿದೆ. ಮತ್ತೊಂದೆಡೆ, ವಿಶ್ವ ಉತ್ಪಾದನಾ ಬೆಳವಣಿಗೆಯು 2017 ರಲ್ಲಿ 3.8 ಶೇಕಡಾದಿಂದ 2018 ರಲ್ಲಿ 3.6 ಕ್ಕೆ ಇಳಿದಿದೆ. ಅಮೆರಿಕಾ, ಚೀನಾ ವ್ಯಾಪಾರದ ಉದ್ವಿಗ್ನತೆಯ ನಂತರ, ಚೀನಾದ ಬಿಗಿಯಾದ ಸಾಲ ನೀತಿಗಳು ಮತ್ತು ದೊಡ್ಡ ಮುಂದುವರೆದ ಆರ್ಥಿಕತೆಗಳಲ್ಲಿ ವಿತ್ತೀಯ ನೀತಿಯ ಸಾಮಾನ್ಯೀಕರಣದ ಜೊತೆಗೆ ಆರ್ಥಿಕ ಬಿಗಿತ..2018 ರಲ್ಲಿ ವಿಶ್ವ ಆರ್ಥಿಕತೆ ಮತ್ತು ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ (ಇಎಮ್‍ಡಿಇ) ಕುಸಿತ ಕಂಡಿತು.

       ಕಳೆದ 5 ವರ್ಷಗಳಲ್ಲಿ (2014-15 ರಿಂದ) ಸರಾಸರಿ ಶೇಕಡಾ 7.5 ರಷ್ಟು ಬೆಳವಣಿಗೆಯೊಂದಿಗೆ ಭಾರತದ ನೈಜ ಜಿಡಿಪಿಯು ಹೆಚ್ಚಾಗಿದೆ. 2018-19ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.8 ಕ್ಕೆ ಏರಿಕೆಯಾಗಿದೆ, ಇದರಿಂದಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆಯಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ. ಇದಕ್ಕೆ ಮುಖ್ಯವಾಗಿ ಕೃಷಿ ಮತ್ತು ಸಂಬಂಧಿತ ಬೆಳವಣಿಗೆಯ ಕುಂಠಿತ ವ್ಯಾಪಾರ, ಹೋಟೆಲ್, ಸಾರಿಗೆ, ಸಂಗ್ರಹಣೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು ಮತ್ತು ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಕಡಿಮೆ ಬೆಳವಣಿಗೆ. ಕಾರಣವಾಗಿದೆ. 2018-19ರಲ್ಲಿ ರಾಬಿ ಬೆಳೆಯ ಎಕರೆವಾರು ಉತ್ಪಾದನೆ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆ ಯಾಗಿದ್ದು, ಇದು ಕೃಷಿ ಸಾಧನೆಯ ಮೇಲೆ ಪರಿಣಾಮ ಬೀರಿತು. ಆಹಾರದ ಬೆಲೆಯಲ್ಲಿನ ಸಂಕೋಚನವು ರೈತರನ್ನು ಕಡಿಮೆ ಉತ್ಪಾದನೆಗೆ ಪ್ರೇರೇಪಿಸಲು ಕಾರಣವಾಯಿತು.

      ಚಾಲ್ತಿ ಅಕೌಂಟ್ ಕೊರತೆ (ಸಿಎಡಿ) 2017-18ರಲ್ಲಿ ಜಿಡಿಪಿಯ ಶೇ 1.9 ರಿಂದ ಏಪ್ರಿಲ್-ಡಿಸೆಂಬರ್ 2018 ರಲ್ಲಿ ಶೇಕಡಾ 2.6 ಕ್ಕೆ ಏರಿದೆ. ಪ್ರಮುಖವಾಗಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದ ಹೆಚ್ಚಿನ ವ್ಯಾಪಾರ ಕೊರತೆಯಿಂದಾಗಿ ಚಾಲ್ತಿ ಅಕೌಂಟ್ ಕೊರತೆ ನಿಗದಿಯಾಗುತ್ತದೆ. ವ್ಯಾಪಾರ ಕೊರತೆಯು 2017-18ರಲ್ಲಿ 162.1 ಬಿಲಿಯನ್ ಯುಎಸ್ ಡಾಲರ್ನಿಂದ 2018-19ರಲ್ಲಿ 184 ಬಿಲಿಯನ್ ಗೆ ಏರಿತು. ವಾಣಿಜ್ಯ ಸರಕು ಆಮದು ಶೇ 21.1 ರಿಂದ ಶೇ 10.4 ಕ್ಕೆ ಇಳಿದಿದೆ. ಸೇವಾ ರಫ್ತು ಮತ್ತು ಆಮದು 2018-19ರಲ್ಲಿ ಕ್ರಮವಾಗಿ 5.5 ಮತ್ತು 6.7 ಕ್ಕೆ ಇಳಿದಿದೆ, 2017-18ರಲ್ಲಿ ಕ್ರಮವಾಗಿ ಶೇಕಡ .18.8 ಮತ್ತು 22.6 ಇತ್ತು.

      2018-19ರಲ್ಲಿ ರೂಪಾಯಿ ಯುಡಿ ಡಾಲರ್‍ಗೆ ಶೇಕಡಾ 7.8, ಯೆನ್ ವಿರುದ್ಧ ಶೇ 7.7, ಮತ್ತು ಯುರೋ ಮತ್ತು ಪೌಂಡ್ ಸ್ಟರ್ಲಿಂಗ್ ವಿರುದ್ಧ ಶೇ 6.8 ರಷ್ಟು ಕುಸಿದಿದೆ. 2018-19ರ ಅವಧಿಯಲ್ಲಿ, ಭಾರತೀಯ ರೂಪಾಯಿ ಯುಡಿ ಡಾಲರ್ ವಿರುದ್ಧ ಇಳಿಕೆ ಪ್ರವೃತ್ತಿಯೊಂದಿಗೆ ವಹಿವಾಟು ನಡೆಸಿ ಅಕ್ಟೋಬರ್ 2018 ರಲ್ಲಿ ಪ್ರತಿ ಯುಎಸ್ ಡಾಲರ್‍ಗೆ 74.4 ರೂ. ತಲುಪಿತ್ತು. ನಂತರ ಚೇತರಿಕೆ ಕಂಡು 2019 ರ ಮಾರ್ಚ್ ಕೊನೆಯಲ್ಲಿ ಪ್ರತಿ ಯುಎಸ್ ಡಾಲರ್‍ಗೆ 69.2 ರೂ. ಇತ್ತು.

       ಮಾರ್ಚ್ 2018 ರ ಅಂತ್ಯದ ವೇಳೆಗೆ ಹೋಲಿಸಿದರೆ, 2019 ರ ಮಾರ್ಚ್ ಅಂತ್ಯದ ವೇಳೆಗೆ (ಮೌಲ್ಯಮಾಪನ ಪರಿಣಾಮ ಗಳನ್ನು ಒಳಗೊಂಡಂತೆ) ವಿದೇಶಿ ವಿನಿಮಯ ಮೀಸಲು 11.6 ಬಿಲಿಯನ್ ಅಮೆರಿಕನ್ ಡಾಲರ್ ಕಡಿಮೆಯಾಗಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು 14 ಜೂನ್ 2019 ರಲ್ಲಿ 422.2 ಶತಕೋಟಿ ಅಮೆರಿಕನ್ ಡಾಲರ್ ನ ನಿರಾತಂಕ ಸ್ಥಿತಿಯಲ್ಲಿದೆ.

         ನಿವ್ವಳ ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ಒಳಹರಿವು 2018-19ರಲ್ಲಿ ಶೇ 14.2 ರಷ್ಟು ಏರಿಕೆಯಾಗಿದೆ. ಎಫ್‍ಡಿಐ ಈಕ್ವಿಟಿ ಒಳಹರಿವನ್ನು ಆಕರ್ಷಿಸುವ ಪ್ರಮುಖ ಕ್ಷೇತ್ರಗಳಲ್ಲಿ, ಸೇವೆಗಳು, ವಾಹನಗಳು ಮತ್ತು ರಾಸಾಯನಿಕಗಳು ಪ್ರಮುಖ ವಿಭಾಗಗಳಾಗಿವೆ. ಒಟ್ಟಾರೆಯಾಗಿ, ಎಫ್‍ಡಿಐ ಒಳಹರಿವು 2015-16 ರಿಂದ ಹೆಚ್ಚಿನ ದರದಲ್ಲಿ ಬೆಳೆಯುತ್ತಿದೆ. ಇದು ಭಾರತೀಯ ಆರ್ಥಿಕತೆಯಲ್ಲಿ ವಿದೇಶಿ ಹೂಡಿಕೆದಾರರಿಗಿರುವ ವಿಶ್ವಾಸವನ್ನು ಸೂಚಿಸುತ್ತದೆ.

       ಭಾರತೀಯ ಬ್ಯಾಂಕಿಂಗ್ ವಲಯವು ಅವಳಿ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು ಎದುರಿಸುತ್ತಿದೆ, ಬ್ಯಾಂಕುಗಳ ಅನುತ್ಪಾದಕ ಸ್ವತ್ತುಗಳ (ಎನ್‍ಪಿಎ) ಹೆಚ್ಚಳವು ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‍ಗಳ ಮೇಲೆ ಒತ್ತಡಕ್ಕೆ ಕಾರಣವಾಯಿತು, ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‍ಬಿ) ಹೆಚ್ಚಿನ ಒತ್ತಡವನ್ನು ಹೊಂದಿವೆ. ಬಳಕೆ ಯಾವಾಗಲೂ ಆರ್ಥಿಕತೆ ಬೆಳವಣಿಗೆಗೆ ಪ್ರಬಲ ಮತ್ತು ಪ್ರಮುಖ ಕಾರಣವಾಗಿದೆ. ಜಿಡಿಪಿಯಲ್ಲಿ ಖಾಸಗಿ ಬಳಕೆಯ ಪಾಲು ಹೆಚ್ಚಾಗಿದ್ದರೂ, ಬಳಕೆಯ ಮಾದರಿಯು ಕಾಲಾನಂತರದಲ್ಲಿ -ಅಗತ್ಯಗಳಿಂದ ಐಷಾರಾಮಿಗಳಿಗೆ ಮತ್ತು ಸರಕುಗಳಿಂದ ಸೇವೆಗಳಿಗೆ -ಕೆಲವು ಬದಲಾವಣೆಗಳಿಗೆ ಒಳಗಾಗಿದೆ

       2011-12 ರಿಂದ ಹೂಡಿಕೆ ದರ ಮತ್ತು ಸ್ಥಿರ ಹೂಡಿಕೆ ದರದ ಕುಸಿತವು 2017-18ರ ನಂತರದಲ್ಲಿ ಚೇತರಿಕೆ ಕಂಡಿದೆ. ಸ್ಥಿರ ಹೂಡಿಕೆಯ ಬೆಳವಣಿಗೆಯು 2016-17ರಲ್ಲಿ ಶೇ 8.3 ರಿಂದ 2017-18ರಲ್ಲಿ ಶೇ 9.3 ಕ್ಕೆ ಮತ್ತು 2018-19ರಲ್ಲಿ ಶೇ 10.0 ಕ್ಕೆ ಏರಿದೆ. 2016-17ರವರೆಗೆ ಸ್ಥಿರ ಹೂಡಿಕೆಯ ಕುಸಿತವು ಮುಖ್ಯವಾಗಿ ಗೃಹ ವಲಯದಿಂದಾಗಿತ್ತು, ಸಾರ್ವಜನಿಕ ವಲಯ ಮತ್ತು ಖಾಸಗಿ ಕಾರ್ಪೋರೇಟ್ ವಲಯದ ಸ್ಥಿರ ಹೂಡಿಕೆಯು ಬಹುತೇಕ ಒಂದೇ ಮಟ್ಟದಲ್ಲಿ ಉಳಿದಿದೆ.

         ಹೂಡಿಕೆಯ ಚಟುವಟಿಕೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಉದ್ಯಮಕ್ಕೆ ಸಾಲದ ಬೆಳವಣಿಗೆಯಲ್ಲಿ ಎತ್ತಿಕೊಳ್ಳುವಲ್ಲಿ ಕಂಡುಬರುತ್ತಿವೆ . ದೊಡ್ಡ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆಯು ಬೆಳವಣಿಗೆಗೆ ಕಾರಣವಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬ್ಯಾಂಕ್ ಸಾಲದ ಬೆಳವಣಿಗೆಯು 2016 ಮತ್ತು 2017 ರಲ್ಲಿ ಕುಂಠಿತಗೊಂಡಿತ್ತು, ಆದರೆ 2018 ರಲ್ಲಿ ಚೇತರಿಕೆ ಕಂಡಿತು. ದೊಡ್ಡ ಉದ್ಯಮಕ್ಕೆ ಸಾಲದ ಬೆಳವಣಿಗೆ ಮಾರ್ಚ್ 2016 ರಿಂದ ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಅಕ್ಟೋಬರ್ 2016 ರ ಹೊತ್ತಿಗೆ ನಕಾರಾತ್ಮಕ ಪ್ರದೇಶವನ್ನು ಪ್ರವೇಶಿಸಿತು. ಇದು 2017-18 ರ ಆರಂಭದಿಂದ ಚೇತರಿಸಿಕೊಂಡಿದೆ. 2018 ರ ದ್ವಿತೀಯಾರ್ಧದಲ್ಲಿ ಚೇತರಿಕೆಯು ವೇಗವನ್ನು ಹೆಚ್ಚಿಸಿಕೊಂಡಿದೆ.

       2011-12ನೇ ಸಾಲಿನಲ್ಲಿ ಉದ್ಯಮ ಕ್ಷೇತ್ರವು ಅತಿ ಹೆಚ್ಚು ಹೂಡಿಕೆ ದರವನ್ನು ಹೊಂದಿತ್ತು. ನಂತರದ ಸ್ಥಾನದಲ್ಲಿ ಸೇವೆಗಳು ಇದ್ದವು. ಆದರೆ ಕೃಷಿ ಕ್ಷೇತ್ರದ ಹೂಡಿಕೆ ದರವು ಸೇವೆಗಳ ಅರ್ಧಕ್ಕಿಂತ ಕಡಿಮೆಯಾಗಿತ್ತು. 2017-18ರಲ್ಲಿ, ಸೇವಾ ಕ್ಷೇತ್ರದಲ್ಲಿ ಹೂಡಿಕೆ ದರವು ಅತ್ಯಧಿಕವಾಯಿತು. ಕೃಷಿಯಲ್ಲಿನ ಹೂಡಿಕೆ ದರ ಇನ್ನೂ ಹಿಂದುಳಿದಿದೆ ಮತ್ತು ಈಗ ಕೈಗಾರಿಕಾ ವಲಯದಲ್ಲಿನ ಹೂಡಿಕೆಯ ಅರ್ಧದಷ್ಟಿದೆ. ಅದೇ ಸಮಯದಲ್ಲಿ, ಉಳಿತಾಯ ದರದಲ್ಲಿ ಕುಸಿತ ಕಂಡುಬಂದಿದೆ, ಗೃಹ ವಲಯವು ಸಂಪೂರ್ಣ ಕುಸಿತಕ್ಕೆ ಕಾರಣವಾಗಿದೆ. ಕುಟುಂಬಗಳ ಉಳಿತಾಯ 2011-12 ರಲ್ಲಿದ್ದ ಶೇ.23.6 ರಿಂದ 2017-18ರಲ್ಲಿ 17.2 ಕ್ಕೆ ಇಳಿದಿದೆ.

       ರಫ್ತು ಮತ್ತು ಆಮದಿನ ಬೆಳವಣಿಗೆಯ ಪ್ರವೃತ್ತಿಯು 2018-19ರಲ್ಲಿ ರೂಪಾಯಿ ಮತ್ತು ಅಮೆರಿಕನ್ ಡಾಲರ್ ಗೆ ಸಂಬಂಧಿಸಿದಂತೆ ಭಿನ್ನವಾಗಿತ್ತು. ರಫ್ತು ಮತ್ತು ಆಮದು ಎರಡರ ಬೆಳವಣಿಗೆಯು ಅಮೆರಿಕನ್ ಡಾಲರ್‍ಗೆ ಸಂಬಂಧಿಸಿದಂತೆ ಕುಸಿದಿದ್ದರೆ, ಅದು 2018-19ರಲ್ಲಿ ರೂಪಾಯಿಗೆ ಸಂಬಂಧಿಸಿದಂತೆ (ಪ್ರಸ್ತುತ ಬೆಲೆಯಲ್ಲಿ) ಹೆಚ್ಚಾಗಿದೆ. 2018-19ರಲ್ಲಿ ಅಮೆರಿಕಾ ಡಾಲರ್ ವಿರುದ್ಧ ರೂಪಾಯಿಯ ಮೌಲ್ಯ ಕುಸಿತದಿಂದಾಗಿ ಇದು ಸಂಭವಿಸಿತು.

       ಒಟ್ಟು ಮೌಲ್ಯವರ್ಧನೆಯು ಆರ್ಥಿಕ ಚಟುವಟಿಕೆಯ ಕುಸಿತವನ್ನು ಪ್ರತಿಬಿಂಬಿಸುತ್ತದೆ, 2018-19ರಲ್ಲಿ ಶೇಕಡಾ 6.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು 2017-18ರಲ್ಲಿದ್ದ ಶೇಕಡಾ 6.9 ಕ್ಕಿಂತ ಕಡಿಮೆಯಾಗಿದೆ. ನಿವ್ವಳ ಪರೋಕ್ಷ ತೆರಿಗೆಗಳ ಬೆಳವಣಿಗೆಯು 2018-19ರಲ್ಲಿ ಶೇಕಡಾ 8.8 ರಷ್ಟಿತ್ತು, ಇದು ಆರ್ಥಿಕ ಚಟುವಟಿಕೆಯ ವೇಗವನ್ನು ಕಳೆದುಕೊಂಡ ಕಾರಣ 2017-18ರ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

        ಸೇವಾ ವಲಯವು ಆರ್ಥಿಕತೆಯಲ್ಲಿ ಅತ್ಯಂತ ಕ್ರಿಯಾತ್ಮಕ ಕ್ಷೇತ್ರವಾಗಿದೆ ಮತ್ತು ಭಾರತೀಯ ಆರ್ಥಿಕತೆಯ ಜಿವಿಎ ಮತ್ತು ರಫ್ತಿಗೆ ಪ್ರಮುಖ ಕೊಡುಗೆ ನೀಡುವ ಜೊತೆಗೆ ಆರ್ಥಿಕ ಬೆಳವಣಿಗೆಯ ಪ್ರಮುಖ ಕಾರಣವಾಗಿ ಉಳಿದಿದೆ. ಭಾರತದ ಒಟ್ಟು ರಫ್ತಿನಲ್ಲಿ ಸೇವಾ ರಫ್ತುಗಳು ಬಹುಪಟ್ಟುಗಳು ಏರಿಕೆ ಕಂಡಿವೆ. 2000-01ರಲ್ಲಿ ರೂ. 0.746 ಲಕ್ಷ ಕೋಟಿಯಿಂದ 2018-19ರಲ್ಲಿ ರೂ. 14.389 ಲಕ್ಷ ಕೋಟಿಗೆ ಏರಿಕೆ ಕಂಡಿವೆ. ಒಟ್ಟು ರಫ್ತಿನಲ್ಲಿ ತನ್ನ ಪಾಲನ್ನು ಶೇ 26.8 ರಿಂದ ಶೇ 38.4 ಕ್ಕೆ ಏರಿಸಿದೆ. ವಿಶ್ವ ಸೇವಾ ರಫ್ತುಗಳಲ್ಲಿ ಭಾರತದ ಪಾಲು 2005 ರಲ್ಲಿ ಶೇಕಡಾ 2 ರಿಂದ 2017 ರಲ್ಲಿ ಶೇಕಡಾ 3.5 ಕ್ಕೆ ಏರಿದೆ. ಈ ಪಾಲು 2017 ರಲ್ಲಿದ್ದ ಶೇ 1.8 ರಷ್ಟು ಉತ್ಪಾದನಾ ರಫ್ತುಗಿಂತ ಹೆಚ್ಚಿನದು.

       ಎರಡು ವರ್ಷಗಳ ಉತ್ತಮ ಕೃಷಿ ಬೆಳವಣಿಗೆಯ ನಂತರ ?ಕೃಷಿ ಮತ್ತು ಅದರ ಸಂಬಂಧಿತ?ಕ್ಷೇತ್ರದಲ್ಲಿ ನೈಜ ಬೆಳವಣಿಗೆ 2018-19ರಲ್ಲಿ ಶೇಕಡಾ 2.9 ಕ್ಕೆ ಇಳಿಯಿತು. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ 3 ನೇ ಮುಂಗಡ ಅಂದಾಜಿನ ಪ್ರಕಾರ, 2018-19ರ ಅವಧಿಯಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು 2017-18ರಲ್ಲಿ 283.4 ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದೆ (ಅಂತಿಮ ಅಂದಾಜು). 2018-19ರಲ್ಲಿ ಆಹಾರದ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ, 2018-19ರಲ್ಲಿ ನಿರಂತರ ಐದು ತಿಂಗಳವರೆಗೆ ಬೆಲೆ ಇಳಿಕೆಯು ಇದ್ದು.ಸುಮಾರು ಶೂನ್ಯ ಶೇಕಡಾ ಗ್ರಾಹಕ ಆಹಾರ ಬೆಲೆ ಹಣದುಬ್ಬರವನ್ನು ಸೂಚಿಸಿದೆ.

        ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಯನ್ನು ಸುಧಾರಿಸುವ ಸಾಮರ್ಥ್ಯದ ಮೇಲೆ 2018-19ರ ಅವಧಿಯಲ್ಲಿ ಉದ್ಯಮದ ಬೆಳವಣಿಗೆ ವೇಗ ಪಡೆದುಕೊಂಡಿದೆ, 2018-19ರಲ್ಲಿ ಉತ್ಪಾದನೆಯು ಒಟ್ಟು ಜಿವಿಎದಲ್ಲಿ ಶೇಕಡಾ 16.4 ರಷ್ಟಿದೆ, ಇದು ?ಕೃಷಿ ಮತ್ತು ಸಂಬಂಧಿಸಿದ ವಲಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆಯು 2018-19ರಲ್ಲಿ ಏರಿಕೆಯಾಗಿದೆ, ಆದರೆ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆ ವೇಗವು ನಿಧಾನವಾಗಿದ್ದರೂ, ಮೊದಲ, ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇಕಡಾ 12.1, 6.9 ಮತ್ತು 6.4 ಕ್ಕೆ ಹೋಲಿಸಿದರೆ, ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 3.1 ರಷ್ಟು ಬೆಳವಣಿಗೆ ಕಂಡಿದೆ.

        ಎನ್‍ಬಿಎಫ್‍ಸಿಯ ಸಾಲ ನೀಡುವ ಕಾರಣದಿಂದಾಗಿ 2018-19ರ 4 ನೇ ತ್ರೈಮಾಸಿಕದ ಬೆಳವಣಿಗೆಯ ದರ ಗಣನೀಯವಾಗಿ ಏರಿದೆ, ಇದು ಭಾಗಶಃ ವಾಹನ ವಲಯದ ಮಾರಾಟಕ್ಕೆ ಕಾರಣವಾಯಿತು.

        ಸಿಮೆಂಟ್ ಉತ್ಪಾದನೆ ಮತ್ತು ಸಿದ್ಧಪಡಿಸಿದ ಉಕ್ಕಿನ ಬಳಕೆಯನ್ನು ಆಧಾರದಲ್ಲಿ ನಿರ್ಮಾಣ ಕ್ಷೇತ್ರದ ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಸಿಮೆಂಟ್ ಉತ್ಪಾದನೆ ಮತ್ತು ಸಿದ್ಧಪಡಿಸಿದ ಉಕ್ಕಿನ ಬಳಕೆ 2018-19ರಲ್ಲಿ ಕ್ರಮವಾಗಿ ಶೇಕಡಾ 13.3 ಮತ್ತು ಶೇಕಡಾ 7.5 ಕ್ಕೆ ಏರಿದೆ, ಇದು 2017-18ರಲ್ಲಿದ್ದ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿದೆ. ಇದು 2018-19ರಲ್ಲಿ ನಿರ್ಮಾಣ ಕ್ಷೇತ್ರದ ಹೆಚ್ಚಿನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ವಲಯವು 2017-18 ರಲ್ಲಿದ್ದ ಶೇ 6.2 ಕ್ಕೆ ಹೋಲಿಸಿದರೆ 2018-19ರಲ್ಲಿ ಶೇಕಡಾ 7.4 ಕ್ಕೆ ಹೆಚ್ಚಾಗಿದೆ. ಆರ್ಥಿಕತೆಯ ಒಟ್ಟಾರೆ ಜಿವಿಎ ಶೇಕಡಾ 20 ಕ್ಕಿಂತ ಹೆಚ್ಚು ಈ ವಲಯದ ಕೊಡುಗೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap