ಚೆನ್ನೈ :
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ, ಕರ್ನಾಟಕದಲ್ಲಿ ಜನಪ್ರಿಯ ಪೊಲೀಸ್ ಅಧಿಕಾರಿ ಅಣ್ಣಾಮಲೈಗೆ ರವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ತಮಿಳುನಾಡಿನ ಕರೂರು ಮೂಲದ ಕೆ ಅಣ್ಣಾಮಲೈರನ್ನು ಚುನಾವಣೆಗೂ ಮುನ್ನ ತಮಿಳುನಾಡು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಹಾಲಿ ಅಧ್ಯಕ್ಷ ಡಾ ಲೋಗನಾಥನ್ ಮುರಗನ್ ಅವರು ಮೋದಿ ಸಚಿವ ಸಂಪುಟ ಸೇರಿದ್ದರಿಂದ ಅಣ್ಣಾಮಲೈಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಅಣ್ಣಾಮಲೈಗೆ ಅರವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ರಾಜ್ಯದ ಬಿಜೆಪಿ ಉಸ್ತುವಾರಿ ಸಿ. ಟಿ. ರವಿ ಸೇರಿದಂತೆ ಹಲವು ನಾಯಕರು ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಿದ್ದರು. ಅಣ್ಣಾಮಲೈ 68 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು.
“ಅರವಕುರುಚಿ ಕ್ಷೇತ್ರದಲ್ಲಿ 68,000 ಮತಗಳನ್ನು ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಜೊತೆಗೆ ಎಂದಿಗೂ ಇರುತ್ತೇನೆ” ಎಂದು ಸೋಲಿನ ಬಳಿಕ ಟ್ವೀಟ್‌ನಲ್ಲಿ ಅಣ್ಣಾಮಲೈ ತಿಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
