ಕುನೋ:
ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ನಮೀಬಿಯಾದ ಚಿರತೆ ಶೌರ್ಯ ಇಂದು ಮಧ್ಯಾಹ್ನ 3:17 ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ಹುಲಿ ಯೋಜನೆ ನಿರ್ದೇಶಕರು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆಯ ನಿತ್ರಾಣ ಸ್ಥಿತಿಯಲ್ಲಿದ್ದ ಚಿರತೆಯನ್ನು ನಿಗಾವಣಾ ತಂಡ ಗಮನಿಸಿತ್ತು. ನಂತರ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡಿತಾದರೂ ನಡುಗುವುದು ಕಂಡುಬಂದಿತ್ತು. ಜೀವ ಉಳಿಸುವ ಸಿಪಿಆರ್ ಗೆ ಸ್ಪಂದಿಸುವಲ್ಲಿ ವಿಫಲವಾಯಿತು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಚಿರತೆ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಬೇಕಾಗಿದೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇದುವರೆಗೆ ಕನಿಷ್ಠ ಒಂಬತ್ತು ಚಿರತೆಗಳು ಸಾವನ್ನಪ್ಪಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ